ಸದ್ಗುರು ಬೋಧಿಸೆ ಶಿಷ್ಯನು
ಸದ್ಗುರುವೇ ಆದನು.
ಇದ್ದಿಲು ಬೆಂಕಿಯ ಸ್ಪರ್ಶದಿ
ಬೆಂಕಿಯು ಆದಂತೆ- ಕಬೀರ.
ಶಿಷ್ಯನ ಯಶಸ್ಸಿನ ಹಿಂದೆ ಒಬ್ಬ ಗುರು ಇದ್ದೇ ಇರುತ್ತಾನೆ. ಯಾರಿಗೆ ಉತ್ತಮ ಗುರು ದೊರಕುತ್ತಾನೋ ಆತ ಖಂಡಿತವಾಗಿ ಉತ್ತಮ ವ್ಯಕ್ತಿಯಾಗಿರೂಪುಗೊಳ್ಳುತ್ತಾನೆ.
ಹಾಗಾಗಿ ಗುರುವಿನ ಆಯ್ಕೆ ಮಾಡುವಾಗ ಉತ್ತಮವಾಗಿ ರುವವರನ್ನು ಆಯ್ಕೆ ಮಾಡಿಕೊಳ್ಳಬೇಕು.
ಉತ್ತಮ ಗುರುವಿನ ಸಾಮೀಪ್ಯದಿಂದ ಶಿಷ್ಯನೂ ಉತ್ತಮನೇ ಆಗುತ್ತಾನೆ. ಹೇಗೆ ಬೆಂಕಿಯ ಸ್ಪರ್ಶ ಮಾತ್ರದಿಂದ ಇದ್ದಿಲು ಬೆಂಕಿ ಯಾಗುವುದೋ ಹಾಗೆ . ಎಂಬುದು ಸಂತ ಕಬೀರರ ಅಭಿಮತ.
ನಮ್ಮ ಬದುಕಿನಲ್ಲಿ ಎಲ್ಲ ವಿಷಯಗಳಲ್ಲೂ ಆಯ್ಕೆ ಸಮರ್ಪಕವಾಗಿರಬೇಕು. ಆಯ್ಕೆ ಸಮರ್ಪಕವಾಗಿಲ್ಲದಿದ್ದರೆ ಬದುಕು ಸಮರ್ಪಕವಾಗಿರಲು ಸಾಧ್ಯವಿಲ್ಲ. ಅದು ಕಲಿಕೆಯ ಆಯ್ಕೆಯಲ್ಲಿರಬಹುದು ಉದ್ಯೋಗದ ಆಯ್ಕೆಯಲ್ಲಿರಬಹುದು. ಜೀವನ ಸಂಗಾತಿಯ ಆಯ್ಕೆಯಲ್ಲಿರಬಹುದು ಅಥವಾ ಗುರುವಿನ ಆಯ್ಕೆ ಯಲ್ಲಿರಬಹುದು. ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ನಮ್ಮ ಬದುಕು ರೂಪುಗೊಳ್ಳುವುದು ನಮ್ಮ ಆಯ್ಕೆಯ ಮೇಲೆ ಎಂಬುದನ್ನು ಕಬೀರರ ಈ ದೋಹೆ ಮನೋಜ್ಞವಾಗಿ ನಮ್ಮೆದುರು ತೆರೆದಿಟ್ಟಿದೆ.
ಡಾ.ರವೀಂದ್ರ ಭಟ್ಟ ಸೂರಿ