ಮಕ್ಕಳಿಗೆ ಅಕ್ಕರೆ ತೋರಿದರೆ ಸಾಕು! ಅದ್ಬುತವಾದ ಕಾರ್ಯಗಳೇ ನಡೆದು ಹೋದಾವು. ಅಕ್ಕರೆಯಿಂದ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಬಹುದು. ಅಕ್ಕರೆಯಿರುವ ಕಡೆ ಮಗು ತನ್ನ ದ್ರಷ್ಟಿ ಹರಿಸಿ ತನ್ನ ಅಕ್ಕರೆಯನ್ನು ಪ್ರತಿಯಾಗಿ ನೀಡುವ ತವಕ ತೋರುತ್ತದೆ. ಮಗುವಿಗೆ ಇಷ್ಟವಾಗುವ ಮಾತು ನಡತೆಯೇ ಅಕ್ಕರೆ. ಅದರೆ ಈ ಅಕ್ಕರೆಯ ಪ್ರಮಾಣ ಅರೋಗ್ಯಕರವಾದ ವಾತಾವರಣದಲ್ಲಿ ಅರೋಗ್ಯಕರ ರೀತಿಯಲ್ಲಿ ಮುಂದುವರಿಯಬೇಕು. ಚಹಕ್ಕೆ ಸಕ್ಕರೆ ತುಂಬಾ ಬೆರೆತರೆ ರುಚಿ ಕೆಟ್ಟು ಹೋಗುತ್ತದೆ.ಕಾರಣ ಹದವಾಗಿ ಅಕ್ಕರೆಯನ್ನು ತೋರಿ ಮಕ್ಕಳ ಮನಸ್ಸನ್ನು ಗೆಲ್ಲಬೇಕು.
ಅವರನ್ನು ಹಿಡಿತದಲ್ಲಿ ಇಡುವ ಕಲೆ ಅದರಲ್ಲಿ ಇರಬೇಕು. ತಂದೆ ತಾಯಿಯರು ಶಿಕ್ಷಕರು ಅಕ್ಕರೆ ತೋರಿ ಮಕ್ಕಳ ಮೌಲ್ಯ ವರ್ದಿಸಬೇಕು. ಅವರಿಗೆ ಸಾಂಸ್ಕ್ರತಿಕ ಚಟುವಟಿಕೆ ಅಟ ಪಾಠ ಕಲಿಸಿ ಭವಿಷ್ಯ ರೂಪಿಸಬೇಕು. ಕೇವಲ ಕೋಪ ಹೊಡೆತ ಇವುಗಳಿಂದ ಮಕ್ಕಳ ಮನ ತಲ್ಲೀನತೆಯ ಮಟ್ಟಕ್ಕೆ ಏರುವದಿಲ್ಲ. ಅಕ್ಕರೆಯ ಮಾತು ಅಕ್ಕರೆಯ ಕಲಿಕೆ ಅವರಲ್ಲಿ ಉತ್ತಮ ಪರಿಣಾಮ ಬೀರಬಲ್ಲುದು. ಅವಶ್ಯವಿದ್ದಾಗ ಮಾತ್ರ ಶಿಕ್ಷೆ ನೀಡಿ ಮಕ್ಕಳಿಗೆ ತಮ್ಮ ತಪ್ಪಿನ ಅರಿವು ಮೂಡಿಸಬಹುದು. ಸಕ್ಕರೆಯ ಸ್ವಾದ ಅಕ್ಕರೆಯಿಂದ. ಮಕ್ಕಳ ಕಕ್ಕುಲತೆ ಪ್ರೀತಿ ಹೊರಹೊಮ್ಮುವದು ಇದರಿಂದ.

RELATED ARTICLES  "ನನ್ನ ಕನಸಿನ ಕರ್ನಾಟಕ"ಕ್ಕೆ ಇರಲಿ ನಿಮ್ಮ ಚಿಂತನೆ, ಜೊತೆಗೆ ಒಂದಿಷ್ಟು ಬೆಂಬಲ.

ಕಲ್ಪನಾಅರುಣ