ಎಂತಹ ಕರ್ಮವ ಗೈಯುವೆಯೋ
ಅಂತಹ ಫಲ ಪಡೆವೆ.
ದುಷ್ಕರ್ಮದ ಫಲವನು ಗಳಿಸಿ
ದೇವರ ಹಳಿಯದಿರೈ -ಕಬೀರ

ನಾವು ಯಾವ ರೀತಿ ಕಾರ್ಯ ನಿರ್ವಹಿಸುತ್ತೇವೆಯೋ ಅದಕ್ಕೆ ತಕ್ಕ ಫಲ ಪಡೆಯುತ್ತೇವೆ. ಒಳ್ಳೆಯ ಕಾರ್ಯಕ್ಕೆ ಉತ್ತಮ ಫಲ ಸಿಕ್ಕರೆ ಕೆಟ್ಟ ಕಾರ್ಯಕ್ಕೆ ಅಷ್ಟೇ ಕೆಟ್ಟದಾದ ಫಲ ದೊರೆಯುತ್ತದೆ. ಆದರೆ ನಾವು ಮಾಡಿದ ದುಷ್ಟ ಕಾರ್ಯವನ್ನು ಅರಿಯದೆ ಅದರ ಕೆಟ್ಟ ಫಲವನ್ನು ಮಾತ್ರ ಹೇಳುತ್ತೇವೆ. ಆ ಕೆಟ್ಟ ಫಲಕ್ಕೆ ದೇವರೇ ಕಾರಣ ಎಂದು ಹಳಿಯುತ್ತೇವೆ. ಇದು ಸಲ್ಲದು ಎಂಬುದು ಸಂತ ಕಬೀರರ ದೋಹೆಯ ಭಾವಾರ್ಥ.

RELATED ARTICLES  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಕ್ಕಳಿಗೆ ಪರಿಸರ ಅಧ್ಯಯನ ಶಿಬಿರ

ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ತಕ್ಕುದಾದ ಫಲ ದೊರಕೇ ದೊರಕುತ್ತದೆ. ಆದ್ದರಿಂದ ನಾವು ಸಾಧ್ಯವಿದ್ದಷ್ಟು ಒಳಿತನ್ನೇ ಮಾಡಬೇಕು. ಒಂದು ವೇಳೆ ಒಳಿತನ್ನು ಮಾಡಲು ಸಾಧ್ಯವಾಗದಿದ್ದರೆ ಯಾರಿಗೂ ಕೆಡಕನ್ನಂತೂ ಮಾಡಬಾರದು. ಅಂದಾಗ ನಾವು ಒಳ್ಳೆಯ ಫಲವನ್ನು ಪಡೆಯಲು ಸಾಧ್ಯ. ಕೆಟ್ಟ ಗಳಿಗೆಯನ್ನು ಅನುಭವಿಸುವಾಗ ದೇವರನ್ನು ಹಳಿಯದೆ ಅದು ನಮ್ಮ ದುಷ್ಕೃತ್ಯದ ಫಲ ಎಂಬುದನ್ನು ಅರಿತು ಪಶ್ಚಾತ್ತಾಪ ಪಟ್ಟರೆ ಬಹುಶಃ ಅದಕ್ಕಿಂತ ದೊಡ್ಡ ಪರಿಹಾರ ಮತ್ತೊಂದಿಲ್ಲ. ಮುಂದಿನ ಒಳಿತಿಗೆ ಅದು ದಾರಿಯಾದೀತು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಅದಕ್ಕೆ ಕವಿವಾಣಿಯೊಂದು ಹೇಳಿದ್ದು ಒಳಿತು ಮಾಡು ಮನುಷಾ ನೀನಿರೊದು ಮೂರು ದಿವಸ ಅಂತ. ವೇದಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿನಂತೆ ಗಾದೆಯೊಂದು ಹೇಳಿದ್ದು ಈ ದೋಹೆ ಹೇಳಿದ್ದನ್ನೇ…….. ಮಾಡಿದ್ದುಣ್ಣೋ ಮಹಾರಾಯ ಅಂತಾ.

ಡಾ.ರವೀಂದ್ರ ಭಟ್ಟ ಸೂರಿ