ಕಲಿಕೆ ಎಂದರೆ ಮನಸಿನಲ್ಲಿ ಜ್ಞಾನ ವ್ರದ್ದಿಯಾಗಿ ಸ್ಪಷ್ಟ ನಿಲುವು ತಳೆಯುವದು. ಮಕ್ಕಳಲ್ಲಿ ಕಲಿಕೆ ಸ್ಪಷ್ಟವಾಗಬೇಕೆಂದರೆ ಅಸಕ್ತಿ ಮತ್ತು ಏಕಾಗ್ರ ಗಮನ ಅಗತ್ಯ. ಶಾಲೆಯಲ್ಲಿ ಶಿಕ್ಷಕರು ಪಾಠ ಹೇಳಿದ್ದನ್ನು ಕೇಂದ್ರಿಕರಿಸಿ ಮನೆಕೆಲಸ ಮಾಡಿ ಪಾಠದ ಬಗ್ಗೆ
ಸ್ವಂತ ವಿಚಾರ ಮಾಡಿ ಅದನ್ನು ಮನಸಿನಲ್ಲಿ ಅರಗಿಸಿ ಗಟ್ಟಿ ಮಾಡಿಕೊಳ್ಳಬೇಕು. ಪರೀಕ್ಷೆ ಬಂದಾಗ ಪ್ರಶ್ನೆಗೆ ತಕ್ಕ ಉತ್ತರ ಬರೆಯುವ ಸಾಮರ್ಥ್ಯ ಗಳಿಸಿಕೊಳ್ಳಬೇಕು. ಇದು ಭವಿಷ್ಯಕ್ಕೆ ಅತೀ ಮುಖ್ಯವಾದದ್ದು. ಈ ಕಲಿಕೆ ಕೇವಲ ಶಾಲೆಗೆ ಮಾತ್ರ ಸೀಮಿತವಾಗಿಲ್ಲ. ಸುತ್ತ ಮುತ್ತ ಪರಿಸರ, ಬೇರೆ ಬೇರೆ ರೀತಿಯ ಅನುಭವ, ನಾವು ಮಾಡುವ ಕೆಲಸ, ಇವೆಲ್ಲ ಕಲಿಕೆ ಮಾಡಿಸುವಂತಹ ಸಹಜ ಕ್ರಿಯೆ. ಜ್ಞಾನದ‌ಗಳಿಕೆ ಇದರ ಪ್ರತಿಫಲ. ಕಲಿಕೆ ಮಗುವಿನ ಮನಸಿನಿಂದ ಅಸಕ್ತಿಯಿಂದ ಅಗಬೇಕು. ಸ್ವಯಂ ಪ್ರೇರಣೆ ಕಲಿಕೆಯನ್ನು ಬಹುಕಾಲ ನೆನಪಿನಲ್ಲಿಡಲು ಸಾಧ್ಯವಾಗುತ್ತದೆ. ಕಾರಣ ಮಗುವಿಗೆ ಸಮಾದಾನಕರ ವಾತಾವರಣದಲ್ಲಿ ಸ್ವಯಂ ಪ್ರೇರಣೆಯಲ್ಲಿ ಕಲಿಯುವ ಅವಕಾಶ ಸಿಗಬೇಕು. ಅನೇಕ ಮಹನೀಯರು ಕಷ್ಟದಲ್ಲಿ ಓದಿ ನಡುವೆ ಕೆಲಸ ಮಾಡಿ ಉನ್ನತ
ಹುದ್ದೆ ಉನ್ನತ ಕೀರ್ತಿ ಅಪಾರ ಜ್ಞಾನ ಗಳಿಸಿದ್ದಾರೆ. ಅವರ ಸ್ವಯಂ ಅಸಕ್ತಿ ಅವರನ್ನು ಎತ್ತರ ಮಟ್ಟಕ್ಕೆ ಒಯ್ದಿದೆ. ಸಾಧಾರಣ ಮನುಷ್ಯ ಬಡತನವನ್ನು ಮೆಟ್ಟಿ ಹೇಗೆ ಮೇಲೆರಬಹುದು ಎನ್ನುವದಕ್ಕೆ ದೇಶದಲ್ಲಿ ಅಗಿಹೋದ ಆದರ್ಷ ಮಹನೀಯರೇ ಸಾಕ್ಷಿ. ಕಾರಣ ಕಲಿಕೆಯ ಮಟ್ಟ ಎತ್ತರಗೊಳ್ಳಲು ಅಸಕ್ತಿ ಅಭಿರುಚಿ ಸ್ವಯಂ ಪ್ರೇರಣೆಯೇ ಕಾರಣ ಎಂದು ಒತ್ತಿ ಹೇಳಬಹುದಲ್ಲವೇ!

RELATED ARTICLES  ದುಶ್ಚಟದ ಕೂಪ ವೇತಕೆ? ಕನ್ಯೆ

ಕಲ್ಪನಾ ಅರುಣ