ಕೋಪ ಎಲ್ಲರ ಮನಸಿನಲ್ಲೂ ಒಂದಲ್ಲ ಒಂದು ಕಾರಣಕ್ಕೆ ಇಣುಕಿ ತಾನಿದ್ದೇನೆ ಎಂದು ತನ್ನ ಸಾಮರ್ಥ್ಯ ತೋರುತ್ತಿರುತ್ತದೆ.
ಮಗು ಚಿಕ್ಕಂದಿನಲ್ಲಿ ಕೋಪ ಮಾಡಿಕೊಂಡು ಊಟ ಬಿಡುವದು. ಹೊಡೆಯುವದು. ಚಿವಟುವದು, ಜೋರಾಗಿ ಕೂಗಿಕೊಂಡು ಬೈಯುವದು ಮುಂತಾದ ಚಟುವಟಿಕೆ ಮಾಡುತ್ತದೆ. ಈ ಕೋಪ ಕ್ಷಣಿಕ.ಕೋಪದ ಅವೇಶ ಬಂದುಬಿಟ್ಟರೆ ಕೆಲವರಿಗೆ ಮೈ ಮನಸ್ಸು ಹಿಡಿತದಲ್ಲಿ ಇರುವದಿಲ್ಲ. ತಾವು ಮಾಡುತ್ತಿರುವದು ಸರಿಯೋ ತಪ್ಪೋ ಅಂತೂ ಕೆಲಸ ನಡೆದೆ ಹೋಗುತ್ತದೆ. ಪರರಿಗೆ ಹಿಂಸೆ ನೋವು ಕೂಡ ಅಗುತ್ತದೆ. ಕೋಪದಿಂದ ಮನೆ ಮನಗಳನ್ನು ಹಾಳು ಮಾಡಿಕೊಂಡವರು ಇದ್ದಾರೆ. ಮಕ್ಕಳು ಕೋಪದಿಂದ ಬೇಯುತ್ತಿದ್ದರೆ ಸುತ್ತ ಮುತ್ತಲಿನ ಜನರ ಮನಸ್ತಿತಿ ಹಾಳಾಗುತ್ತದೆ.
ಮುಖ್ಯವಾಗಿ ಅ ಮಗುವಿನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹೊಡೆದಾಟ ಜಗಳಗಳು ಮನಸಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ದ್ವೇಷ ಅಸೂಯೆ ಬೆಳೆಯುತ್ತದೆ. ಕಾರಣ ಈ ಕೋಪವನ್ನು ಕಡಿಮೆ ಮಾಡಿಕೊಂಡು ನಸುನಗುತ್ತ ಜೀವನ ನಡೆಸುವ ಗುಣ ಮಗುವಿನಲ್ಲಿ ಬರಬೇಕು.
ಮಗು ಇಲ್ಲ ಸಲ್ಲದ ವಿಷಯಗಳ ಕಡೆ ಗಮನ ಹರಿಸುವದನ್ನು ಬಿಟ್ಟು ತನ್ನ ಪರಿದಿಯನ್ನು ಅರ್ಥ ಮಾಡಿಕೊಳ್ಳಬೇಕು. ತನ್ನ
ಮನೆಯಲ್ಲಿ ಹೆತ್ತವರ ಕಷ್ಟ ಅವರ ಪರಿಸ್ತಿತಿಗಳ ಬಗ್ಗೆ ಅರಿವಿಟ್ಟುಕೊಂಡು ಅವರಿಗೆ ಅಧಾರವಾಗಿರಬೇಕು. ಹಿರಿಯರು ಮಕ್ಕಳನ್ನು ಗದರಿ ಬೆದರಿಸಿ ಹೊಡೆದು ಅವರ ಮನಸ್ಸಿಗೆ ಬರೆ ಇಡಬಾರದು. ಮನೆಯ ವಾತಾವರಣ ಸಮಾದಾನದಿಂದ ಹೊಂದಾಣಿಕೆಯಿಂದ ಹಿರಿಯರು ಕಿರಿಯರ ನಡುವೆ ಪ್ರೀತಿ ಬಂಧದಿಂದ ಇರಬೇಕು. ಹಿರಿಯರ ಭಾವನೆಗಳು ಕಿರಿಯರ ಮೇಲೆ ಪ್ರಭಾವ ಬೀರುತ್ತವೆ. ಅಪ್ಪ ಅಮ್ಮರ ಸಾಮರಸ್ಯ ಮಕ್ಕಳಿಗೆ ಖುಶಿ ತರುವಂತಿರಬೇಕು. ಮಕ್ಕಳ ಗಮನ ಸ್ವಯಂ ಸ್ಪೂರ್ತಿಯಿಂದ ಪರಸ್ಪರ ನೆರವಿನ ಹಾದಿಯಲ್ಲಿರಬೇಕು. ಕೋಪವನ್ನು ತ್ಯಜಿಸಿ, ಹೊಂದಾಣಿಕೆ ಪ್ರೀತಿ ನೆರವಿನಂತಹ ಉತ್ತಮ ಭಾವನೆ ಬೆಳೆಸಿ. ಉದಾರ ಹ್ರದಯವ ಬೆಸೆದು ಮನೆ ಮನವ ಸಮ್ರದ್ದಗೊಳಿಸಿ. ಇಂದಿನ ಮಕ್ಕಳು ಹಿರಿಯರು ನಾವು ನೀವು ಕೋಪದಿಂದ ಹೊರಬಂದು ಶಾಂತ ಮನಸಿನ
ಪ್ರೀತಿ ಸಮಾದಾನದ ಕೊಂಡಿಯನ್ನು ಕೂಡಿಸಿ ನಮ್ಮ ನಮ್ಮ ಕರ್ತವ್ಯದ ಕರೆಯನ್ನು ಓ ಗೊಟ್ಟು ಕೈಗೂಡಿಸೋಣ
ಕಲ್ಪನಾಅರುಣ
ಬೆಂಗಳೂರು