ಜಗದೀಶಗೆ ಶರಣಾದವನು
ಅವ ಹೆದರುವನೇನು?
ಆನೆಯ ಮೇಲೆ ಕುಳಿತಿರುವವಗೆ
ಶ್ವಾನವು ಬೊಗಳಿದರೇನು?-ಕಬೀರ.

ಆ ಭಗವಂತನಿಗೆಶರಣಾದವನಿಗೆ,ಅವನನ್ನು ನಂಬಿದವನಿಗೆ ಹೆದರಿಕೆ ಎಂಬುದು ಇರುವುದಿಲ್ಲ. ಸರ್ವಶಕ್ತನ ಶಕ್ತಿಯನ್ನು ನಂಬಿರುವ ಆತನನ್ನು ಯಾವ ಕ್ಷುದ್ರ ಶಕ್ತಿಗಳೂ ಎದುರಿಸಲು, ಹೆದರಿಸಲು ಸಾಧ್ಯವಿಲ್ಲ. ಅದು ಆನೆಯ ಮೇಲೆ ಕುಳಿತಿರುವವನನ್ನು ನೋಡಿ ನಾಯಿಯು ಬೊಗಳಿದಂತೆ. ಬೊಗಳುವುದನ್ನು ಬಿಟ್ಟರೆ ಏನೂ ಮಾಡಲು ಸಾಧ್ಯವಿಲ್ಲ. ಎಂಬುದು ಕಬೀರರ ಅಭಿಮತ.

ಜಗತ್ತನ್ನು ನಿಯಂತ್ರಿಸುತ್ತಿರುವಂತ ಆ ಅಗೋಚರ ಶಕ್ತಿಯ ಮೇಲೆ ನಂಬಿಕೆ ಇಡಬೇಕು. ಆ ನಂಬಿಕೆ ಎಂದೂ ಹುಸಿಯಾಗುವುದಿಲ್ಲ. ನಂಬಿದವರನ್ನು ಆ ಶಕ್ತಿ ಎಂದೂ ಕೈ ಬಿಡುವುದಿಲ್ಲ. ದೇವರನ್ನು ನಂಬಿದವರಿಗೆ ಬೇರೆ ಯಾವ ಶಕ್ತಿಗಳಿಂದಲೂ ಏನನ್ನೂ ಮಾಡಲು ಸಾಧ್ಯವಿಲ್ಲ. ಅವು ಎಷ್ಟೇ ಪ್ರಯತ್ನ ಪಟ್ಟರೂ ಅದು ಆನೆಯ ಮೇಲಿರುವವನನ್ನು ನೋಡಿ ನಾಯಿ ಬೊಗಳಿದ ಹಾಗೆ ವ್ಯರ್ಥ ಎಂಬುದು ಈ ದೋಹೆಯ ಭಾವಾರ್ಥ.

RELATED ARTICLES  ಬೇಲಿಯಂತೆ ಕಟ್ಟು ಪಾಡಿನ ಜೀವನ: ಭಾಗ-1

ಯಾವಾಗಲೂ ನಾವು ನಮಗಿಂತ ಎತ್ತರದಲ್ಲಿರುವವರನ್ನು ನೋಡಿ ಕರುಬಬಾರದು. ಬದಲಾಗಿ ನಾವೂ ಅವರಂತಾಗಲು ಪ್ರಯತ್ನಿಸಬೇಕು. ಮತ್ತು ಅವರ ಸಾಧನೆಗೆ ಹೆಮ್ಮೆ ಪಡಬೇಕು. ಅವರನ್ನು ನೋಡಿ ಹೊಟ್ಟೆಕಿಚ್ಚು ಪಡುವುದರಿಂದ , ಅವರನ್ನು ಇಲ್ಲ ಸಲ್ಲದ ಮಾತಿನಿಂದ ಹಿಯಾಳಿಸುವುದರಿಂದ ಎತ್ತರದಲ್ಲಿರುವವರಿಗೆ ಯಾವ ತೊಂದರೆಯೂ ಆಗಲಾರದು. ಆದರೆ ಅದು ನಮ್ಮ ಸಣ್ಣತನದ ಪ್ರದರ್ಶನವಾಗುತ್ತದೆ. ಜನರ ದೃಷ್ಟಿಯಲ್ಲಿ ನಾವು ಮತ್ತಷ್ಟು ಕುಬ್ಜರಾಗುತ್ತೇವೆ. ಇದನ್ನು ಅರಿತು ಸಣ್ಣತನ ಬಿಟ್ಟು ಹೃದಯವಂತಿಕೆ ಬೆಳೆಸಿಕೊಳ್ಳೋಣ. ಅರ್ಹತೆಯನ್ನು ಗುರುತಿಸುವ ಯೋಗ್ಯತೆಯನ್ನು ಗೌರವಿಸುವ ಮನ ನಮ್ಮದಾಗಲಿ.

RELATED ARTICLES  ಸಮಸ್ಥ ಜನರ ಪ್ರಯೋಜನಕ್ಕಾಗಿಯೇ ಶ್ರೀಸಮರ್ಥರು ಎಂದ ಶ್ರೀಧರರು.

ಇದನ್ನು ಕವಿವಾಣಿಯೊಂದು ಹೇಳಿದ್ದು ಹೀಗೆ……..
ದಹಿಸುವುದು ನಿನ್ನನ್ನುಹೊಟ್ಟೆಕಿಚ್ಚಿನ ಬೆಂಕಿ
ಕಹಿಸತ್ಯ ಕರುಬದಿರು ಅನ್ಯರನು ನೋಡಿ
ಸಿಹಿಯದುವು ಬದುಕೆನ್ನುವುದ ನೀನು ಮರೆಯದಿರು.
ಸಹನೆಯಲೆ ಸುಖವಿಹುದು-ಭಾವಜೀವಿ.

✍️ ರವೀಂದ್ರ ಭಟ್ಟ ಸೂರಿ