ಕಟು ಮಾತು ಅಂದರೆ ಬಿರುಸು ನುಡಿ. ಈ ಬಿರುಸು ನುಡಿ ಸತ್ಯಕ್ಕೆ ಹತ್ತಿರವಿರಬೇಕು. ಮತ್ತು ಸಮಯ ಸಂದರ್ಭಕ್ಕೆ ತಕ್ಕುದಾಗಿರಬೇಕು.ಅಗ ಅದು ತಪ್ಪಿತಸ್ಥರ ಮನಸಿಗೆ ನಾಟಿ ಉತ್ತಮ ಪರಿಣಾಮ ಬೀರಬಲ್ಲುದು. ಅದರೆ ಎಲ್ಲ ಮಾತುಗಳು ಕಟುವಾದರೆ ಅದು ವ್ಯಕ್ತಿತ್ವಕ್ಕೆ ಧಕ್ಕೆಯನ್ನು ಉಂಟುಮಾಡುತ್ತದೆ. ಈ ಕಟು ಮಾತುಗಳು ಕೆಲವು ಬಾರಿ ಪರ ಮನಸಿಗೆ ನೋವು ತರುವ ಸಂದರ್ಭವೂ ಇದೆ. ಮನೆಯಲ್ಲಿ ಕಟು ಮಾತು ಬಂದಾಗ ಮನೆ ಬಿಟ್ಟು ಹೋಗುವದು, ಕೋಪಮಾಡಿಕೊಂಡು ಹಗರಣ ಎಬ್ಬಿಸುವದು, ತಿರುಗಿ ಮಾತಾಡುವದು, ಹೊಡೆದಾಟ,ಜಗಳ, ಕಿರುಕುಳ ಮುಂತಾದ ಬೇಡದ ವಿಷಯಗಳ ಕಡೆ ಗಮನ ಹರಿಸಿ
ಕೇಡಿಗೆ ಬುದ್ದಿ ಕೊಡುವ ಸಂದರ್ಭವನ್ನೂ ತರುತ್ತದೆ.
ಕಟು ಮಾತು ಶಿಕ್ಷಕರ ಬಾಯಿಗೆ ಹಲವಾರು ಬಾರಿ ಬಂದು ಹೋಗುವದುಂಟು. ಹಲವು ಬಾರಿ ಮಕ್ಕಳು ಎದುರಿಸುವದೂ ಉಂಟು. ಮಕ್ಕಳ ಚಾರಿತ್ರ್ಯ ತಿದ್ದಲು ಓದುವ ಪ್ರವ್ರತ್ತಿ ಬೆಳೆಸಲು ಸಹಾಯಕ ಈ ಕಟುಮಾತು.
ಕಟು ಮಾತಿನಲ್ಲಿ ಸತ್ಯದ ದರ್ಶನ ಮಾಡಿಸಬೇಕು. ಜೀವನದ ಮಾರ್ಗ ತಿಳಿಸಬೇಕು. ಇಲ್ಲಿ ಅವಾಚ್ಯ ನುಡಿಯಾಗಲೀ
ಬೈಗುಳವಾಗಲೀ ನಿಂದನೆಯಾಗಲೀ ಇರಬಾರದು.
ಸದ್ಯದ ಪರಿಸ್ಥಿತಿ ಮತ್ತು ಸವಾಲುಗಳ ಕುರಿತು ಕಠಿಣವಾದ ಜೀವನದ ಭವಿಷ್ಯ ಕುರಿತು ಮನವರಿಕೆ ಮಾಡಬೇಕು. ನೀತಿ ಮಾರ್ಗ ಬೋದಿಸಬೇಕು. ಮಾತು ಕಟುವಾದರೂ ಹ್ರದಯ ಹೂವಿನಂತೆ ಮ್ರದುವಾಗಿರುವ ವ್ಯಕ್ತಿಗಳು ಇರುತ್ತಾರೆ. ಈ ಕಟು ಮಾತು ಪರ ಮನಸಿಗೆ ತಿಳುವಳಿಕೆ ಮೂಡಿಸಿ ತಿದ್ದುಕೊಳ್ಳುವ ನಿಟ್ಟಿನಲ್ಲಿ ನಿರ್ದಾರಕ್ಕೆ ಬರಬೇಕು. ತಪ್ಪನ್ನು ಎಲ್ಲ ಮಾನವರೂ ಮಾಡಿದ್ದಾರೆ ಮಾಡುತ್ತಾರೆ. ಅದರೆ ಇದು ತಪ್ಪು ಅನ್ನಿಸಿದಾಗ ತಕ್ಷಣ ತಿದ್ದುಕೊಂಡು ತನಗೂ ತನ್ನವರಿಗೂ ಒಳಿತು ಮಾಡಬೇಕು. ಅಗತ್ಯ ಬಂದಾಗ ಮಾತ್ರ ಕಟು ಮಾತು ಬಳಸಬೇಕು.ಸೌಜನ್ಯತೆ ಜನರಿಗೆ ಮೆಚ್ಚುಗೆಯಾಗುವಂತದು.
ಪರಿಸ್ತಿತಿಗೆ ತಕ್ಕಂತೆ ಮಾತಾಡಿ ಜನರ ಮಕ್ಕಳ ಹ್ರದಯ ಗೆಲ್ಲಬೇಕು ಮಾತು ಬಲ್ಲವನಿಗೆ ಜಗಳವಿಲ್ಲ
ಕಟುಮಾತು ಸತ್ಯದ ಅನಾವರಣವು ಮನಸ ಪರಿವರ್ತಿಸುವ ಚಿಂತನೆಯು ತಪ್ಪ ತಿದ್ದಲು ಅನುವು ಅರಿಯಲದುವೇ ಜೀವನದ ಸಾರವು……ಕಲ್ಪವಲ್ಲಿ
ಕಲ್ಪನಾಅರುಣ
ಬೆಂಗಳೂರು