ಹುಟ್ಟದ ಗುಣ ಘಟ್ಟ ಹತ್ತಿದರೂ ಬಿಡುವದಿಲ್ಲ ಎಂಬ ಗಾದೆ ಮಾತಿದೆ. ಮನುಷ್ಯನ ಮೆದುಳಿನಲ್ಲಿ ಕೆಲವು ಗುಣಗಳು
ಅಚ್ಚೊತ್ತಿ ಅವು ದೊಡ್ಡವರಾಗುತ್ತಿದ್ದಂತೆ ಬೆಳಕಿಗೆ ಬರುತ್ತದೆ . ಮಗುವಿನ ಅನೇಕ ಸ್ವಭಾವಗಳು ತಂದೆ ತಾಯಿಯರ ಅನುವಂಶಿಯತೆಯಿಂದಲೂ ಬರುತ್ತದೆ. ಅದಕ್ಕಿಂತ ಹೆಚ್ಚಾಗಿ
ಪರಿಸರ ಅವರ ಮೇಲೆ ಪ್ರಭಾವ ಬೀರುತ್ತದೆ. ಮಗುವಿನ ಸ್ವಭಾವಅದು ಬೆಳೆದಂತಹ ರೀತಿಯಲ್ಲಿ
ರೂಪುಗೊಳ್ಳಬಹುದು. ಕೆಲವರಿಗೆ ಕೋಪ. ಕೆಲವರಿಗೆ ಅಸಹನೆ. ಕೆಲವರು ಶಾಂತಚಿತ್ತರು ಮೌನಿಗಳು ಕೆಲವರು ತುಂಬಾ ತುಂಟರು ಹೀಗೆ ಅನೇಕ ರೀತಿಯ ಸ್ವಭಾವವುಳ್ಳ ಜನ ಜಗತ್ತಿನಲ್ಲಿ ಇದ್ದಾರೆ. ಸಾತ್ವಿಕ ಗುಣ ಮನುಷ್ಯನಲ್ಲಿ ಇದ್ದರೆ ಶಾಂತಿ ಸಮಾದಾನದ ಬದುಕು ನಮ್ಮದಾಗುತ್ತದೆ. ಅದೇ ಕೋಪ ಅಸಹನೆ ಇವು ಪರ ಮನಸಿಗೆ ಕಿರಿಕಿರಿ ನೋವು ತಂದು ಬಿಕ್ಕಟ್ಟಿಗೆ ಕಾರಣವಾಗುತ್ತದೆ.

RELATED ARTICLES  ಹಾಲಿ ಶಾಸಕರ ಊರಿನಲ್ಲಿಯೇ ಬಿಜೆಪಿ ಬೆಂಬಲಿತರ ಗೆಲುವು : ಚುನಾವಣೆ ನಡೆದ 9 ಗ್ರಾ.ಪಂ.ಗಳಲ್ಲಿ 6 ಬಿಜೆಪಿ ತೆಕ್ಕೆಗೆ.


ಮನುಷ್ಯ ಅಸಂತೋಷಗೊಂಡಾಗ ಈ ಅಸಹನೆ ಕೋಪ ಕಾಣಿಸಿಕೊಳ್ಳಬಹುದು. ಕಾರಣ ಅಂತವರು ತಮ್ಮನ್ನು ತಾವು ಹಿಡಿತದಲ್ಲಿಟ್ಟುಕೊಂಡು ಪರರ ಹಿತಕ್ಕೆ ಪೂರಕವಾಗಬೇಕು. ಸಿಟ್ಟು ಬರದಂತ ಮಾರ್ಗದತ್ತ ತಮ್ಮನ್ನು ಎಳೆದುಕೊಂಡು ಖುಶಿ ಪಡುವ ದಾರಿ ಹಿಡಿಯಬೇಕು. ಉತ್ತಮ ಹವ್ಯಾಸ ಧ್ಯಾನ ಯೋಗ ಮುಂತಾದ ಶಾಂತತೆಯ ಗುಣ ಬೆಳೆಸುವ ನಿಟ್ಟಿನಲ್ಲಿ ಜೀವನ ಕ್ರಮ ಇರಬೇಕು. ಮಾದರಿ ಜೀವನದ ಕಲ್ಪನೆ ಮನಸಿನಲ್ಲಿ ಮೂಡಿಸಿಕೊಂಡು ಎಲ್ಲಿ ತಪ್ಪಿದೆಯೋ ಅಲ್ಲಿ ತಿದ್ದಿಕೊಂಡು ಖುಶಿ ಜೀವನ ನಡೆಸಬೇಕು.
ಮೊಂಡು ಹಠ ಇವೆಲ್ಲ ಕಿರಿಕಿರಿ ಮಾಡುವ ಮೊದಲೇ ಸಾಧನೆಯತ್ತ ಛಲವಿರಬೇಕು. ಸಮಾದಾನ ತಾಳ್ಮೆ ತ್ಯಾಗ ಮನೋಬಾವ ಇವೆಲ್ಲ ಸಹಜ ಜೀವನಕ್ಕೆ ಅಗತ್ಯ ಗುಣಗಳು.
ಕೋಪ ತಾಪ ಅಸಹನೆ ಇವೆಲ್ಲ ಪಶ್ಚಾತ್ತಾಪದ ಕೆಲಸ ಮಾಡಿಸುವಂದು. ಕಾರಣ ಸ್ವಬಾವದಲ್ಲಿ ಬೇಡದ ಗುಣಗಳನ್ನು ಕಳೆದು ಬದುಕು ಸುಂದರ ಎನ್ನುವಂತಹ ಕಲ್ಪನೆಯಲ್ಲಿ ಸಂತಸಕರ ವಾತಾವರಣ ನಿರ್ಮಿಸಿ ಸಂಸಾರ ಸುಖವನ್ನು ಸಂಪೂರ್ಣವಾಗಿ ಅನುಭವಿಸಬೇಕು.

RELATED ARTICLES  ಮಾನವೀಯ ಮೌಲ್ಯ ಸಾರುವ ಸ್ನೇಹ ಸೋದರತೆಯ ಸಂಜೀವಿನಿ ರಕ್ಷಾ ಬಂಧನ

ಕಲ್ಪನಾಅರುಣ