ಗೊಂದಲ ಮನಸ್ಸಿನಲ್ಲಿದ್ದರೆ ತುಂಬಾ ಕಷ್ಟ. ಸರಿಯಾದ ನಿರ್ದಾರ ತೆಗೆದುಕೊಳ್ಳಲಾರದೆ ಮನಸು ವಿಹ್ವಲವಾಗಿ ಎತ್ತ ಕಡೆಯ ಪ್ರತಿಕ್ರಿಯೆಗೂ ಸ್ಪಂದಿಸಲು ಸಾಧ್ಯವಾಗುವದಿಲ್ಲ. ಮನಸ್ಸಿನಲ್ಲಿ ಇಲ್ಲದ ಭಯ ಹತಾಶೆ ತುಂಬಿಕೊಂಡು ಅಸಾದ್ಯತೆಯೇ ಮನದ ಯೋಚನೆಯಲ್ಲಿ ಕೊರೆಯುತ್ತದೆ. ನನ್ನಿಂದ ಇದು ಸಾದ್ಯವಿಲ್ಲ ನಾನು ಅಬಲ ಎಂಬ ಧೊರಣೆ ಗೊಂದಲದಲ್ಲಿರುತ್ತದೆ. ಮಕ್ಕಳಿಗೆ ಓದು ಬರೆಹದಲ್ಲಿ ಗೊಂದಲ. ದೊಡ್ಡವರಿಗೆ ಮನೆಯಲ್ಲಿ. ಕೆಲಸದಲ್ಲಿ ಗೊಂದಲ. ಒಟ್ಟಿನಲ್ಲಿ ಗೊಂದಲ
ದೊಡ್ಡ ವ್ಯೂಹ ರಚಿಸಿ ಮನಸ್ಸಿನಲ್ಲಿ ನೂರು ಅಲ್ಲ ಸಲ್ಲದ ವಿಚಾರಗಳನ್ನು ಬಿತ್ತುತ್ತವೆ. ನಕಾರತ್ಮಕತೆಯು ಅಲ್ಲಿ ನೆಲೆಯೂರುತ್ತದೆ. ಈ ಗೊಂದಲಗಳಿಗೆ ಕಾರಣ ಸದ್ಯದ ಪರಿಸ್ತಿತಿಯಲ್ಲಿ ಅರ್ಥವಾಗದ ನಡೆವಳಿಕೆ ಮಾತು ಕತೆ ಸಹವಾಸ ದೋಷ ಮಾನಸಿಕ ಅನ್ಯಮನಸ್ಕತೆ ಇವೆಲ್ಲ ಕಾರಣಗಳು. ಗೊಂದಲ ಎಲ್ಲರ ಮನಸಿಗೂ ಉಂಟಾಗುವ ಸಮಸ್ಯೆ. ಅದರೆ ಅದರ ಪರಿಹಾರವೂ ಅಷ್ಟೆ ಬೇಗ ಅದರೆ ಸ್ಪಷ್ಟ ನಿಲುವು ಅರ್ಥವಾಗುತ್ತದೆ. ಪರಿಸ್ಥಿತಿಯ ನಿರ್ವಹಣೆ ಸುಲಭ ವಾಗುತ್ತದೆ. ಅದರೆ ಹೇಳಲು ಕೇಳಲು ಹಿಂಜರಿದು ಕೀಳರಿಮೆಯ ಮನೋಭಾವ ಬೆಳೆಸಿಕೊಂಡರೆ ಗೊಂದಲಗಳೂ ಬೆಳೆಯುತ್ತವೆ.
ಪರೀಕ್ಷೆಯಲ್ಲಿ ಮಕ್ಕಳು ಅನುತ್ತೀರ್ಣರಾಗಲು ಗೊಂದಲಗಳು ಕಾರಣ. ಗೊಂದಲ ತೊಲಗಬೇಕೆಂದರೆಗುರುವಿನ ಮಾರ್ಗದರ್ಶನ ಒಳ್ಳೆಯ ಸ್ನೇಹಿತರ ಸಹವಾಸ ಮನಸಿನ ಹತೋಟಿ ಕಾರ್ಯದಲ್ಲಿ ಶ್ರದ್ದೆ ತಿಳುವಳಿಕೆಯ ಮಟ್ಟ ಜ್ಞಾನದ ಬೆಳವಣಿಗೆ ಸ್ಪಷ್ಟ ನಿಲುವು ಇವೆಲ್ಲ ಮನುಷ್ಯನಲ್ಲಿ ಬೆಳೆಯಬೇಕು. ಅನುಭವಗಳ ಸರಮಾಲೆ ಓದು ಅಭಿಪ್ರಾಯಗಳ ಹಿನ್ನೆಲೆ ಇವೆಲ್ಲ ಮನುಷ್ಯನಿಗೆ ಜ್ಞಾನವನ್ನು
ದೈರ್ಯವನ್ನು ನೀಡುತ್ತದೆ ಗೊಂದಲಗಳ ಪರಿಹಾರವಾಗಿ
ಜೀವನವನ್ನು ಸ್ಪಷ್ಟ ದಿಕ್ಕಿನಲ್ಲಿ ಕೊಂಡೊಯ್ಯಲು ಸುಲಭವಾಗುತ್ತದೆ.
ಕಲ್ಪನಾಅರುಣ
ಬೆಂಗಳೂರು