ಕೊಡುವದೇನು ಕೊಂಬುದೇನು ಒಲವು ಸ್ನೇಹ ಪ್ರೀತಿ ಎಂಬ ಕವಿವಾಣಿ ಅಕ್ಷರಶಃ ಸತ್ಯ. ಸ್ನೇಹ ಪ್ರೀತಿ ಅಪ್ಯಾಯಮಾನವಾದುದು. ಅದಕ್ಕೆ ಅದಿ ಅಂತ್ಯ ಇಲ್ಲ.
ಅದರೆ ಸ್ನೇಹ ಪ್ರೀತಿ ಜೀವನದಲ್ಲಿ ತಿಳಿವು , ಅನುಭವಗಳ ಅರಿವು, ಭವಿಷ್ಯದ ಒಳಿತಿಗೆ ಪೂರಕವಾಗಬೇಕು. ಮಕ್ಕಳು ಸ್ನೇಹಿತರ ಬಳಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲಿ ಅಸೂಯೆಯಾಗಲೀ, ಕಪಟವಾಗಲೀ, ಇರಲಾರದು.
ಸ್ನೇಹಿತರ ಜೊತೆ ಅಟ , ಮಾತುಕತೆ, ಬೆರೆಯುವಿಕೆ, ಇವೆಲ್ಲ ಸಾಮಾಜಿಕ ಅಂಶಗಳು. ಮಗು ಸಮಾಜದಲ್ಲಿ ಕಲೆಯುವ
ಬದುಕುವ ಮಾರ್ಗದರ್ಶಿಗಳು. ಸ್ನೇಹ ಪ್ರೀತಿಯ ಬದುಕು ಸಮಾದಾನ , ಬಾಂದವ್ಯ ಬೆಸುಗೆ, ಉತ್ತಮ ಚಾರಿತ್ರ್ಯದ ಹೊಸೆಯುವಿಕೆಗೆ ಕಾರಣೀಭೂತವಾದುದು.
ಸಮಾಜದ ದುರಾಚಾರ, ದುಶ್ಚಟಗಳ , ವಿರುದ್ದ ಈ ಸ್ನೇಹ ಸಾಗಬೇಕು. ಇಲ್ಲಿ ಅಪ್ಪಟ ಅಪೇಕ್ಷೆ ಸಹಾಯ, ಸಹಕಾರ, ಜ್ಞಾನ ಬೆಳವಣಿಗೆ,ಮುಂತಾದ ಅನುಕೂಲಕಾರಿ ವಿಷಯಗಳು
ಸಂಘಟನೆಯಾಗುವದು.ಮಗು ದುಷ್ಟ ಯೋಚನೆ ದುರ ಅಹಂಕಾರ, ದುಷ್ಟ ವರ್ತನೆಯತ್ತ ಸಾಗುವದನ್ನು ತಪ್ಪಿಸಬೇಕೆಂದರೆ ಮಗುವಿಗೆ ಪ್ರೀತಿಯ ಭದ್ರತೆ ನೀಡಬೇಕು.
ಚಿಕ್ಕಂದಿನಲ್ಲಿ ತಾನು ಮನೆಯಲ್ಲಿ ಪ್ರೀತಿ ವಿಶ್ವಾಸದಲ್ಲಿ ಬೆಳೆಯುತ್ತಿದ್ದೇನೆ ಎಂಬ ಧ್ರಡ ನಂಬಿಕೆ ಇರಬೇಕು. ತಾಯಿ ತಂದೆಯರು ಮಾರ್ಗದರ್ಶಕರಾಗಿ , ಸ್ನೇಹಿತರಾಗಿ. ಪ್ರೀತಿ ಮಮತೆಯ ಸಾಕಾರವಾಗಿ, ಮಗುವಿನ ಸರ್ವತೋಮುಖ
ಬೆಳವಣಿಗೆಗೆ ಹಾದಿ ತೋರಬೇಕು. ಉತ್ತಮ ಪರಿಸರ
ಉತ್ತಮ ಬಾಂದವ್ಯ ಉತ್ತಮ ಚಿಂತನೆಯತ್ತ ಮನವನ್ನು
ಮನೆಯನ್ನು ಮಗುವಿನ ಜೊತೆ ಹಂಚಿಕೊಳ್ಳಬೇಕು.
ಇಂದಿನ ಮಗು ನಾಳಿನ ಪ್ರಜೆ. ಹಾಗಾಗಿ ನಾಳಿನ ಉಳಿವಿಗೆ
ನಾಳಿನ ಬೆಳಗಿಗೆ ಇಂದಿನ ಮಗು ಊದಾತ್ತ ,ಉತ್ತಮ ಸಾಂಘಿಕ ಜೀವನದತ್ತ ದಾಪುಗಾಲು ಹಾಕಿ
ಕುಟುಂಬದ ಊರುಗೋಲಾಗಬೇಕು. ದೇಶದ ಸಂಸ್ಕ್ರತಿ ಸಂಸ್ಕಾರಗಳ ಉಳಿಕೆಗೆ ,ಮಾನವೀಯತೆಯ
ಬಳಕೆಗೆ , ತನ್ನ ಜೀವನದ ಅದರ್ಶತೆಯನ್ನು ಮಗು ಕನಸು ಕಟ್ಟಿ ,ಪ್ರತಿ ಹೆಜ್ಜೆಯಲ್ಲೂ ಮನಸನ್ನು ರೂಢಿಸಿಕೊಂಡು,
ಕಾರ್ಯಗತಗೊಳಿಸುವಲ್ಲಿ ಯಶಸ್ಸು ಪಡೆಯಬೇಕು.
ಉತ್ತಮ ಗುಣಗಳ ಸ್ನೇಹ, ಉತ್ತಮ ಬಾಂದವ್ಯ, ಪ್ರೀತಿಯ
ಒಡನಾಟ ಇವೆಲ್ಲ ದೊರೆತು ಮಗು ಸಾಮಾಜಿಕವಾಗಿ ಸಮಾಧಾನದ ಸಾಮರಸ್ಯದ ಬದುಕಿಗೆ ಸಿದ್ದವಾಗಬೇಕು.
ಕಲ್ಪನಾಅರುಣ
ಬೆಂಗಳೂರು