ಅದು ಇದು ಕೆಲಸಕೆ ಐದು ಪ್ರಹರ.
ಮೂರು ಪ್ರಹರ ನಿದ್ರೆಗೆ.
ಒಂದು ಗಂಟೆಯೂ ಭಜಿಸಲೆ ಇಲ್ಲ.
ನಿಮಗೆ ಮುಕ್ತಿ ಹೇಗೆ?- ಕಬೀರ.
ಇಂದಿನ ಒತ್ತಡದ, ವೇಗದ, ಆಧುನಿಕ ಯುಗದಲ್ಲಿ ನಮ್ಮ ಕೆಲಸ ಮತ್ತು ನಿದ್ರೆಯಲ್ಲಿಯೇ ಪೂರ್ಣ ಸಮಯ ಕಳೆದುಹೋಗುತ್ತದೆ. ಕಾರ್ಯದ ಒತ್ತಡದಲ್ಲಿ ಸಮಯ ಹೊಂದಾಣಿಕೆ ಕಷ್ಟ ಸಾಧ್ಯ. ಹೀಗಿರುವಾಗ ಆ ಭಗವಂತನನ್ನು ಕುರಿತು ಭಜಿಸಲು ಸಮಯ ಸಿಗುತ್ತಿಲ್ಲ. ಎನ್ನುವವರನ್ನು ಕುರಿತು ಸಂತ ಕಬೀರರು ಹೇಳಿದ್ದು “ನಿಮ್ಮ ಕೆಲಸ ಮತ್ತು ನಿದ್ರೆಯಲ್ಲಿಯೇ ಸಂಪೂರ್ಣ ಸಮಯ ಕಳೆದಿರಿ. ಒಂದು ಗಂಟೆಯೂ ಭಜಿಸಿದ ನಿಮಗೆ ಮುಕ್ತಿ ಸಿಗುವುದು ಹೇಗೆ? ಎಂದು .
ಇಂದಿನ ಆಧುನಿಕ ಜಗತ್ತಿನಲ್ಲಿ ಭಗವಂತನನ್ನು ಕುರಿತು ಭಜಿಸು ಎಂದರೆ ಸಮಯವಿಲ್ಲ ಎನ್ನುವ ವರೇ ಹೆಚ್ಚು. ಮಾಯಾಲೋಕದ ಮಾರ್ಗದಲ್ಲಿ ಸಾಗುತ್ತಿರುವ ನಮಗೆ ಮುಕ್ತಿಯ ಮಾರ್ಗ ಗೋಚರಿಸುವುದು ಹೇಗೆ ?ನಮ್ಮ ಶಕ್ತಿಯೆಲ್ಲ ಕೆಲಸ, ನಿದ್ರೆಯಲ್ಲೇ ಕಳೆದುಹೋಗುತ್ತಿರುವಾಗ ಭಕ್ತಿಗೆ ಅಲ್ಲಿ ಅವಕಾಶವೆಲ್ಲಿ? ಭಕ್ತಿ ಇಲ್ಲದ ಮೇಲೆ ಭಗವಂತನ ಇರುವಿಕೆ ಅಲ್ಲಿ ಹೇಗೆ ಕಾಣಲು ಸಾಧ್ಯ ? ಭಗವಂತನ ಇರುವಿಕೆ ಇಲ್ಲದ ಮೇಲೆ ಆತನ ಅನುಗ್ರಹ ಸಿಗಲು ಹೇಗೆ ಸಾಧ್ಯ? ಆತನ ಅನುಗ್ರಹವಿಲ್ಲದ ಮೇಲೆ ಮುಕ್ತಿಯ ಪಥ ಗೋಚರಿಸಲು ಹೇಗೆ ಸಾಧ್ಯ? ಎಂಬುದು ಕಬೀರರ ಪ್ರಶ್ನೆ.
ಈ ಜಂಜಾಟದ ಬದುಕಿನಲ್ಲಿ ಎಲ್ಲದ್ದಕ್ಕೂ ಸಮಯ ಹೊಂದಿಸಿಕೊಳ್ಳುವ ನಾವು ಭಗವಂತನ ಸ್ಮರಣೆಗೆ ಸ್ವಲ್ಪ ಸಮಯ ಹೊಂದಿಸಿ ಕೊಳ್ಳೋಣ. ಬದುಕಿರುವಾಗಷ್ಟೇ ಅಲ್ಲದೆ ಮರಣ ಕಾಲಕ್ಕೂ ಅವನ ಸ್ಮರಣೆ ನಮಗೆ ಒಳಿತು ಮಾಡುತ್ತದೆ ಎಂಬ ಸತ್ಯ ಅರಿಯೋಣ. ಇದನ್ನು ಕವಿವಾಣಿಯೊಂದು ಹೇಳಿದ್ದು ಹೀಗೆ……………………
ನೆನೆಯಬೇಕೆಂದಾಗನೆನೆಯಲಾಗದು ಅವನ
ಮನದಿ ಶಾಶ್ವತವಿರಿಸು ಅವನ ನೆನಪ.
ತನುವನ್ನುಕಾಲನವಸೆಳೆದೊಯ್ಯುತಿರುವಾಗ
ನೆನೆವುದೆಂತೋ ಅವನ-ಭಾವಜೀವಿ
✍️ ಡಾ.ರವೀಂದ್ರ ಭಟ್ಟ ಸೂರಿ.