ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ನಾರಾಯಣ ಭಾಗವತ
ಅಗೌರವ ತೋರುವ ವ್ಯಕ್ತಿಗಳನ್ನು ಮತ್ತೆ ಯಾರಾದರೂ ಹತ್ತಿರ ಸೇರಿಸುತ್ತಾರಾ ಹೇಳಿ. ಎಲ್ಲರೂ ಬಯಸುವುದು ಮೆಚ್ಚುಗೆಯ ಮಾತು ಮತ್ತು ಆದರವನ್ನೇ. ವಯಸ್ಸಿನಿಂದ ಮಾತ್ರ ಹಿರಿಯರಾದರಷ್ಟೇ ಸಾಲದು ನಾವು. ದೇಹಕ್ಕೆ ವಯಸ್ಸಾದಂತೆ ಅನುಭವವೂ ಪಕ್ವವಾಗಬೇಕು. ಕೆಲವು ಮಾವಿನ ಹಣ್ಣುಗಳು ಕಾಯಿಯಿದ್ದಾಗ ತುಂಬಾ ಹುಳಿ…..? ಹಣ್ಣಾದಾಗ ಹುಳ? ಯಾರಿಗೂ ಪ್ರಯೋಜನಕ್ಕಿಲ್ಲ. ಆದರೆ 25 ರ ತರುಣನಂತೆ ಕಾಣುವ ಬಹುಮುಖಿ ಪ್ರತಿಭಾನ್ವಿತ ಸರಳ ಸಜ್ಜನನೊಬ್ಬನನ್ನು ನಾನಿಲ್ಲಿ ಸ್ಮರಿಸಿಕೊಳ್ಳಬೇಕು. ದೀಪವೊಂದು ತನ್ನ ಪ್ರಭೆಯಿಂದಲೇ ಹೇಗೆ ಲೋಕಕ್ಕೆ ತನ್ನನ್ನು ತಾನು ಪರಿಚಯಿಸಿಕೊಳ್ಳುತ್ತದೋ ಹಾಗೆಯೇ ಈ ದೀಪವನ್ನು ಪರಿಚಯಿಸುವುದಕ್ಕೆ ಮತ್ತೊಂದು ದೀಪದ ಅವಶ್ಯಕತೆ ಇಲ್ಲ. ಆದರೂ ಅವರನ್ನು ಅಕ್ಷರಗಳ ರೂಪದಲ್ಲಿ ಚಿತ್ರಿಸುವ ಕಿರು ಪ್ರಯತ್ನ ನನ್ನದು.
ನಾರಾಯಣ ಭಾಗವತರು ಮಾರಿಕಾಂಬಾ ಪ್ರೌಢಶಾಲೆ ಶಿರಸಿಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಪ್ರತಿಮ ರಂಗಕರ್ಮಿ, ವಾಗ್ಮಿ, ನಿರೂಪಕ, ಸಂಪನ್ಮೂಲ ವ್ಯಕ್ತಿ, ಏನಲ್ಲ ಅವರು..ಎಲ್ಲಾ. ನಾರಾಯಣ ಭಾಗವತರು ಮೂಲತಃ ಕುಮಟಾದ ಹಂದಿಗೋಣದವರು.
ಬೆಳಗಾದರೆ ಸಾಕು… ಬಹುತೇಕ wats app ಗ್ರೂಪಗಳಲ್ಲಿ ಗುರುರಾಜ ಕರಜಗಿಯವರ ಕರುಣಾಳು ಬಾ ಬೆಳಕೆ ಕಥಾ ಮಾಲಿಕೆಯೊಂದಿಗೆ ಭಾಗವತರು ಎಲ್ಲರಿಗೂ ಶುಭ ಮುಂಜಾನೆ ಕೋರುತ್ತಾರೆ. ಸಂಗ್ರಹ ಯೋಗ್ಯ ಉಪನ್ಯಾಸ ಹಾಗೂ ಕಥಾ ಮಾಲಿಕೆಯೊಂದಿಗೆ ನಮ್ಮೆಲ್ಲರನ್ನೂ ಹೊಸ ಚಿಂತನೆಯತ್ತ ತೊಡಗಿಸಲು ಹಾದಿ ಮಾಡಿಕೊಡುವ ಭಾಗವತರು ನಿಗರ್ವಿ, ಸಜ್ಜನ ಸ್ನೇಹಿ. Hero ಅವರು.?
ಬಹುತೇಕರನ್ನು ನಾನು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮದೇ ಹವ್ಯಾಸಗಳಿರುವ ಕೆಲವರಿಗೆ ವೃತ್ತಿ ಮಾತ್ಸರ್ಯ ಇದ್ದು ಅವರು ಮುಂದಷ್ಟೇ ಮುಖವಾಡ ತೋರಿ ನಗೆಯಾಡುತ್ತಾ ಹೊಗಳಿ ಹಿಂಬದಿಯಿಂದ ಇಲ್ಲ ಸಲ್ಲದ ಮಾತುಗಳನ್ನೇ ಹೆಚ್ಚಾಗಿ ಆಡುತ್ತಾರೆ.? ಆದರೆ ನಮ್ಮ ನಾರಾಯಣ ಭಾಗವತರು ಹಿಂದೊಂದು ಮುಂದೊಂದು ಇಲ್ಲದ ಹೃದಯವಂತ ಮನುಷ್ಯ.
ಅನೇಕ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡು ನಾಟಕಾಭಿನಯದ ಮೂಲಕ ನಾಡಿನ ಶ್ರೇಷ್ಠ ಕಲಾವಿದರ ಸಾಲಿಗೆ ನಿಲ್ಲಬಲ್ಲ ಅವರು ತಮ್ಮ ವಿದ್ಯಾರ್ಥಿಗಳನ್ನೂ ಆ ದಿಶೆಯಲ್ಲಿ ನಿರ್ದೇಶಿಸಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರಣೆಯಾದವರು. ನಾಟಕ ಅಭಿನಯ, ನಿರ್ದೇಶನಗಳೆರಡೂ ಅವರಿಗೆ ಅಚ್ಚುಮೆಚ್ಚಿನ ವಿಷಯ. ಪಠ್ಯದ ನಾಟಕಗಳನ್ನು ವಿಡಿಯೋಗಳ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲಿಸುವ ಅವರ ಪ್ರಯತ್ನವನ್ನು ಮೆಚ್ಚಿ ಸಿರಿಗನ್ನಡ ಬಳಗದವರು ರಾಜ್ಯಮಟ್ಟದ ಸಕಲಕಲಾವಲ್ಲಭ ಬಿರುದನ್ನು ನೀಡಿ ಅವರನ್ನು ಗೌರವಿಸಿದ್ದನ್ನು ನಾನಿಲ್ಲಿ ಸ್ಮರಿಸಿಕೊಳ್ಳುತ್ತೇನೆ.
ನಾರಾಯಣ ಭಾಗವತರು ಅದ್ಭುತ ವಾಗ್ಮಿ. ಅವಿಶ್ರಾಂತ ಓದುಗರಾದ ಅವರ ಬತ್ತಳಿಕೆಯಲ್ಲಿ ಸಾಕಷ್ಟು ವಿಶೇಷ ಬಾಣಗಳಿವೆ. ವಿಷಯ ಪ್ರಭುತ್ವವಿದೆ. ಹಾಗೆಯೇ ಅದನ್ನು ಪ್ರಸ್ತುತಗೊಳಿಸುವ ಕಲೆಯೂ ಅವರಿಗೆ ಸಿದ್ಧಿಸಿದೆ. ಅತ್ಯುತ್ತಮ ಚಿತ್ರಕಾರರೂ ಕೂಡ ಅವರು. ಎಲ್ಲಕ್ಕಿಂತ ಹೆಚ್ಚಾಗಿ ಬೇರೆಯವರ ಸದ್ಗುಣಗಳನ್ನೂ ಸಲೀಸಾಗಿ ಒಪ್ಪಿಕೊಂಡು ವಿನಯ ಶೀಲರಾಗುವ ಅವರ ಗುಣಕ್ಕೆ ನಮೋ ನಮಹ.
ಹತ್ತಾರು ವರ್ಷಗಳಿಂದ ನನ್ನನ್ನು ಪ್ರೋತ್ಸಾಹಿಸುತ್ತಾ ನನ್ನ ಇಂದಿನ ದಿನದವರೆಗಿನ ಎಲ್ಲಾ ಸಾಹಿತ್ಯಿಕ ಚಟುವಟಿಗೆಗಳಿಗೆ ತುಂಬು ಹೃದಯದ ಪ್ರೋತ್ಸಾಹವಿತ್ತ ನಾರಾಯಣ ಭಾಗವತರನ್ನು ನಾನು ಸ್ಮರಿಸದ ದಿನಗಳಿಲ್ಲ. ಅವರು ನನ್ನೆಲ್ಲಾ ಪುಸ್ತಕಗಳನ್ನು ಕೊಂಡು ಓದಿದ್ದಲ್ಲದೇ ತನ್ನೆಲ್ಲಾ ಮಿತ್ರರಿಗೆ ಅದನ್ನು ಪರಿಚಯಿಸಿ ನನ್ನನ್ನು ಬೆಳೆಸಿದರು. ಶಿರಸಿಯಲ್ಲಿ ಉಪನ್ಯಾಸ ಏರ್ಪಡಿಸಿದಾಗ ದಂಪತಿಯ ಸಮೇತವಾಗಿ ಹಾಜರಿದ್ದು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಮನೆಗೆ ಕರೆದು ಆತಿಥ್ಯ ಮಾಡಿದರು.
ಇಂಥ ಪ್ರತಿಭಾವಂತ ನಾರಾಯಣ ಭಾಗವತರಿಗೆ ಸಾಧ್ವಿ ಮಡದಿ. ಪ್ರತಿಭಾನ್ವಿತ ಶಿಕ್ಷಕಿಯಾಗಿ ಗಂಡನಿಗೆ ಸಾಥ್ ಕೊಡುವ ಅರ್ಧಾಂಗಿ ಅವರ ಶ್ರೇಯಸ್ಸಿನ ನಿಜವಾದ ಅರ್ಧಪಾಲು. ಮಕ್ಕಳೋ ಅವರು ದೇವರೇ ಇತ್ತ ಸೌಭಾಗ್ಯ. ಮಗಳು ಸ್ವಾತಿ software engineer. ಮಗ ಸಾತ್ವಿಕನಿಗೆ ಪಿ.ಯು.ಸಿಯಲ್ಲಿ 600 ಕ್ಕೆ 11 ಅಂಕ ಮಾತ್ರ ಕಡಿಮೆ. Physics, Chemistry, Mathematics ಮೂರೂ ವಿಷಯಗಳಿಗೆ ಪ್ರಶ್ನೆ ಪತ್ರಿಕೆ ಮಾಡಿದವರೇ ಸೋತು ಹೋಗಿದ್ದಾರೆ.?? 100/100. ವಿನಯವಂತ ಮಕ್ಕಳು ನಾರಾಯಣ ಭಾಗವತ ದಂಪತಿಯ ಪ್ರತಿರೂಪ.
ಅವರ ಸ್ನೇಹಿತರ ಬಳಗ ಅಪಾರ. ಎಲ್ಲೆಡೆಗೂ ಅವರದ್ದೇ ಹವಾ. ? ಸಾಹಿತ್ಯಕ್ಕೂ ಸೈ, ಸಂಗೀತಕ್ಕೂ ಸೈ, ಮನೆಗೆಲಸಕ್ಕೂ ಸೈ, ಶಾಲಾ ಕರ್ತವ್ಯಕ್ಕೂ ಸೈ. ಒಂದು ಲೆಕ್ಕಕ್ಕೆ ನನ್ನ ಹಿರಿಯಣ್ಣ ಅವರು. ನಾನು ಅವರಿಗಿಂತ ಮುಂಜಾನೆ ಬೇಗ ಏಳಬೇಕೆಂದೂ ಬಳಗದಲ್ಲಿ ಮೊದಲೇ ನನ್ನ ಸಂದೇಶ ಕಳಿಸಬೇಕೆಂದೂ ಬಯಸುತ್ತೇನೆ….? ಆದರೆ ನಾನೇಳುವ ಮೊದಲೇ ಅವರ ಸಂದೇಶ ಬಂದು ಹೋಗಿರುತ್ತದೆ. ಯಾವತ್ತೂ ಬೇಡದ ವಿಷಯಗಳಿಗೆ ಅವರು ತಲೆ ಹಾಕುವವರೇ ಅಲ್ಲ. ನಾರಾಯಣ ಭಾಗವತರು ಎಲ್ಲರಂತಲ್ಲ ಇಷ್ಟು ಮಾತ್ರ ಹೇಳಬಲ್ಲೆ.
ಕಷ್ಟ ಏನು ಎಂದು ಗೊತ್ತಾಗಿ ಬಂದವರಿಗೆ ಸುಖದ ನಿಜವಾದ ಅನುಭವ ಆಗುವುದಕ್ಕೆ ಸಾಧ್ಯ. ಭಗವಂತನ ಆಶೀರ್ವಾದ ಸಿಗುವುದಕ್ಕೂ ನಮ್ಮ ಹೃದಯ ಅಷ್ಟೇ ಚೊಕ್ಕಾಗಿರಬೇಕು. ನಿಂತ ನೀರಲ್ಲಿ ಪಾಚಿಯಷ್ಟೇ ಬೆಳೆಯಬಲ್ಲದು. ಸೊಳ್ಳೆ….ಮರಿ ಹಾಕಬಲ್ಲದು. ? ಮನುಷ್ಯ ಹರಿವ ನೀರಾದಾಗ ಜೀವನ ಆಹ್ಲಾದಕರ ಎನಿಸುತ್ತದೆ. ಬೇರೆಯವರನ್ನು ಅವರು ಇದ್ದ ಹಾಗೇ ಸ್ವೀಕರಿಸುವ ಮತ್ತು ಅವರಿಂದ ಏನಾದರೂ ಕಲಿಯಬೇಕೆನ್ನುವ ಮನಸ್ಸಿರುವವರು ಎಷ್ಟು ಜನ ಸಿಗುತ್ತಾರೆ? ಹೇಳಿ. ಕಲಿಯಬೇಕು. ನಾನೂ ನಾರಾಯಣ ಭಾಗವತರನ್ನು ನೋಡಿ ಕಲಿಯಬೇಕು.
ಸದ್ಗುರು ಶ್ರೀಧರರ ಆಶೀರ್ವಾದ ನಾರಾಯಣ ಸರ್ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ನಾರಾಯಣ ಭಾಗವತರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 94818 61862
??????⚫⚪???????⚫⚪?????