ಹೊನ್ನಾವರ: ತಾಲೂಕಿನ ಕವಲಕ್ಕಿ ಕಾಲೇಜಿನ ಪ್ರಾಚಾರ್ಯ ಎಸ್ ಜಿ ಭಟ್ ಅವರು ಇಂದು ಸೇವಾ ನಿವೃತ್ತಿ ಹೊಂದಿದರು. ಅವರನ್ನು ಇಂದು ಸಂಸ್ಥೆಯ ಪರವಾಗಿ ನೂತನ ಪ್ರಾಚಾರ್ಯ ವಿ. ಆಯ್. ನಾಯ್ಕ, ಪ್ರೌಢಶಾಲಾ ಮುಖ್ಯಾಧ್ಯಾಪಕ ಆರ್. ಆರ್. ಹೆಗಡೆ, ಕಾಲೇಜಿನ ಉದ್ಯೋಗಿಗಳಾದ ವಿನಾಯಕ ಹೆಗಡೆ ಹಾಗೂ ಮಂಜುನಾಥ ಗೌಡ ಅಭಿಮಾನಪೂರ್ವಕವಾಗಿ ಶಾಲು ಹೊದೆಸಿ ನಿವೃತ್ತಿ ಹೊಂದುತ್ತಿರುವ ಪ್ರಾಚಾರ್ಯ ಎಸ್. ಜಿ. ಭಟ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ಪತ್ತಿನ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷರಾದ ಬಿ.ಎಂ.ಭಟ್, ಉಪಾಧ್ಯಕ್ಷರಾದ ಮಹೇಶ ಶೆಟ್ಟಿ, ಮುಖ್ಯ ಕಾರ್ಯನಿರ್ವಹಕರಾದ ಜಿ. ಎಸ್. ಭಟ್ಟ ಸಹಕಾರಿ ಸಂಘದ ವತಿಯಿಂದ ಅಭಿನಂದಿಸಿದರು.

ಎಸ್ ಜಿ ಭಟ್ ಕಬ್ಬಿನಗದ್ದೆ ಅವರ ಬಗ್ಗೆ

bbe48cd4 79b1 44bd a8f2 9a19774bed4c

ಎಸ್ ಜಿ ಭಟ್ ಕಬ್ಬಿನಗದ್ದೆ ಹಡಿನಬಾಳ ಇವರು ಗಣಪತಿ ಸುಬ್ಬಾಭಟ್ಟ ಗೌರಿ ಭಟ್ ದಂಪತಿಗಳ ಸುಪುತ್ರರು. ಜನ್ಮ ದಿನಾಂಕ 16ನೇ ಮೇ 1960. ಪ್ರಾಥಮಿಕ ಶಿಕ್ಷಣ ಎಚ್ ಪಿ ಎಸ್ ಹಡಿನಬಾಳ. ಪ್ರೌಢ ಶಿಕ್ಷಣ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆ ಕವಲಕ್ಕಿ ಎಸ್.ಎಸ್.ಎಲ್.ಸಿ. 1976. ಪದವಿಪೂರ್ವ ಶಿಕ್ಷಣ ಎಸ್.ಕೆ.ಪಿ. ಅರೇಅಂಗಡಿ. ಪದವಿ ಶಿಕ್ಷಣ ಎಸ್. ಡಿ. ಎಂ ಕಾಲೇಜ್ ಹೊನ್ನಾವರ 1980-81. ಸ್ನಾತಕೋತ್ತರ ಶಿಕ್ಷಣ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಇತಿಹಾಸ ಮತ್ತು ಪುರಾತತ್ವ ವಿಭಾಗ. 1983 ಬಿ.ಇಡಿ. ಶಿಕ್ಷಣ ಮಾನಸಗಂಗೋತ್ರಿ ಮೈಸೂರು 1991.
ಕವಲಕ್ಕಿ ಕಾಲೇಜಿನಲ್ಲಿ ಕಾಲೇಜು ಆರಂಭದ ದಿನ 27 ಜುಲೈ 1984 ರಿಂದ ಇತಿಹಾಸ ಉಪನ್ಯಾಸಕರಾಗಿ ಸೇವೆ ಆರಂಭ. 1991 ಜನವರಿಯಿಂದ ಮೇ 2020ರ ವರೆಗೆ ಪ್ರಾಚಾರ್ಯರಾಗಿ ಸೇವೆ. 1994 ಗ್ರಾಮೀಣ ಭಾಗದ ಕವಲಕ್ಕಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದ ಆರಂಭ. 2009 ರಿಂದ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರ. 1994 ಡಿಸೆಂಬರ್ 1 ರಿಂದ ವೃತ್ತಿ ಶಿಕ್ಷಣ ವಿಭಾಗದ ಆರಂಭ. 1993ರಿಂದ ಜಿಲ್ಲಾ ಪದವಿಪೂರ್ವ ಪ್ರಾಚಾರ್ಯರ ಸಂಘದ ಕೋಶಾಧಿಕಾರಿ. 1998 ರಿಂದ ಜಿಲ್ಲಾ ಪದವಿಪೂರ್ವ ಪ್ರಾಚಾರ್ಯರಾಗಿ ಸಂಘದ ಉಪಾಧ್ಯಕ್ಷ. 2018ರಿಂದ ಜಿಲ್ಲಾ ಪದವಿಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷ. ಕಳೆದ ಒಂದು ದಶಕದಿಂದ ರಾಜ್ಯ ಪದವಿ ಪೂರ್ವ ಪ್ರಾಚಾರ್ಯರ ಸಂಘದ ಜಿಲ್ಲಾ ಪ್ರತಿನಿಧಿ. 1986 ರಿಂದ 89 ರವರೆಗೆ ಎಸ್ ಡಿ ಎಂ ಕಾಲೇಜಿನ ತಾತ್ಪೂರ್ತಿಕ ಇತಿಹಾಸ ಬೋಧಕ. ಜಿಲ್ಲಾ ಪದವಿ ಪೂರ್ವ ಇತಿಹಾಸ ಬೋಧಕರ ಸಂಘದ ಸಂಸ್ಥಾಪಕ ಅಧ್ಯಕ್ಷ. 1991 ರಿಂದ ಮೌಲ್ಯಮಾಪನ ಕಾರ್ಯದ ಸತತ ಅನುಭವ. ಡಿಡಿ ಚಂದನ ವಾಹಿನಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿಕಸನ ಕಾರ್ಯಕ್ರಮದಲ್ಲಿ ಉಪನ್ಯಾಸ. ಪದವಿಪೂರ್ವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯ ಹಾಗೂ ಪಠ್ಯ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

RELATED ARTICLES  ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅನಂತ ಹೆಗಡೆ.


ಚಿಟ್ಟಾಣಿ ಷಷ್ಟಬ್ದಿ ಸಮಿತಿಯ ಅಧ್ಯಕ್ಷರು. ಕೆರೆಮನೆ ಶಂಭು ಹೆಗಡೆ ಸನ್ಮಾನ ಸಮಿತಿ ಸದಸ್ಯರು. ನಾಟ್ಯಶ್ರೀ ಸಾಂಸ್ಕøತಿಕ ಸಂಘದ ನೇತೃತ್ವ. ವಿವೇಕಾನಂದ ಯುವಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಮಂಜುನಾಥ ಭಾಗವತರು, ಡಾಕ್ಟರ್ ಜಿಜಿ ಸಭಾಹಿತ್, ಶಂಭು ಹೆಗಡೆ ಕೆರೆಮನೆ, ದಿ|| ಪ್ರೊ. ಜಿ. ಎಸ್. ಅವಧಾನಿ ಮೊದಲಾದವರ ಒಡನಾಡಿ. ಯಕ್ಷಗಾನ, ಸಂಗೀತ ಕಲಾಭಿಮಾನಿ. ಕಾಲೇಜಿನಲ್ಲಿ ಎನ್.ಎಸ್.ಎಸ್. ಸ್ಪಿಕ್ ಮೆಕೆ ಘಟಕಗಳ ಆರಂಭ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಸಂಪನ್ಮೂಲ ವ್ಯಕ್ತಿ. ಶ್ರೀರಾಮಚಂದ್ರಾಪುರಮಠದ ಹವ್ಯಕ ಮಂಡಲ ಮಹಾಮಂಡಲದ ವಿದ್ಯಾ ಪ್ರಧಾನರಾಗಿ ಸೇವೆ. ರಾಜ್ಯ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಸಂಘದ ಸದಸ್ಯ. 1991ರ ಜನಗಣತಿ ಕಾರ್ಯಕ್ಕೆ ರಾಷ್ಟ್ರಪತಿ ಕಂಚಿನ ಪದಕ ಪುರಸ್ಕಾರ. ಇಂಟರನ್ಯಾಷನಲ್ ರೋಟರಿ ಮಕ್ಕಳ ರೈಲಾ ನೇತೃತ್ವ. ಹೊನ್ನಾವರದ ಶಿಕ್ಷಕರ ಪತ್ತಿನ ಸಹಕಾರಿ ಸಂಘದಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ. ಸಾಕ್ಷರತಾ ಆಂದೋಲನದಲ್ಲಿ ತಾಲೂಕು ಜಿಲ್ಲಾ ಮೌಲ್ಯಮಾಪನ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

RELATED ARTICLES  ಧಾರೇಶ್ವರ ಸಮೀಪ ರಾಮನಗಿಂಡಿ ಮಾರ್ಗದಲ್ಲಿ ಗುಡ್ಡ ಕುಸಿತ.

ಈ ಸಂದರ್ಭದಲ್ಲಿ ಮಾತನಾಡಿದ  ಎಸ್ ಜಿ ಭಟ್ ಕಬ್ಬಿನಗದ್ದೆ ಅವರು ಶ್ರೀ ಸುಬ್ರಹ್ಮಣ್ಯ ವಿದ್ಯಾಸಂಸ್ಥೆಯು ನೀಡಿದ ಸೇವಾ ಅವಕಾಶವು ಅನನ್ಯವಾದುದು ಮತ್ತು ಅನುಪಮವಾದುದು. ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು. ಶ್ರೀ ಸುಬ್ರಹ್ಮಣ್ಯ ವಿದ್ಯಾಲಯದ ಎಲ್ಲಾ ಸಹೋದ್ಯೋಗಿಗಳಿಗೆ ಹಾಗೂ ವಿದ್ಯಾಲಯದಲ್ಲಿ ತಮ್ಮ ಜೀವನ ರೂಪಿಸಿಕೊಂಡ ಸಕಲ ಚೇತನಗಳಿಗೂ ದೇವರು ಒಳಿತು ಉಂಟುಮಾಡಲಿ ಎಂಬ ಶುಭ ಹಾರೈಕೆ. ಜಿಲ್ಲೆಯ ಸಮಸ್ತ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಬಳಗಕ್ಕೆ ಪ್ರೀತಿಪೂರ್ವಕ ಅಭಿನಂದನೆಗಳು ಎಂದರು.