ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಎನ್.ಎಸ್.ನಾಯ್ಕ

ಎಲ್ಲರಲ್ಲೂ ಎಲ್ಲಾ ತರಹದ ಗುಣಗಳಿರುವುದಿಲ್ಲ. ಅದನ್ನು ನಿರೀಕ್ಷಿಸುವುದೂ ಸಲ್ಲ. ಜನನಾಯಕರಾಗುವುದಕ್ಕೆ ಸಹಕಾರ ಮನೋಭಾವ, ಹೊಂದಾಣಿಕೆ, ಸಿಟ್ಟಿಗೇಳದ ಗುಣ, ಸಿಟ್ಟು ಬಂದರೂ ತೋರದ ಗುಣ, ? ಎಲ್ಲಕ್ಕಿಂತ ಹೆಚ್ಚಾಗಿ ಚಾಣಾಕ್ಷ ನಡೆ ನುಡಿ ಮುಖ್ಯವಾಗಿ ಬೇಕಾಗುತ್ತದೆ. ಇವು ಯಾವವೂ ನನ್ನಲ್ಲಿಲ್ಲದ ಕಾರಣ ಇದುವರೆಗೂ ನಾನು ಕ್ಲಾಸಿನ ಮುಖ್ಯಮಂತ್ರಿ ಕೂಡ ಆಗಿದ್ದಿಲ್ಲ. ಆದರೂ ಆಗೊಮ್ಮೆ ಪಾಠ ಕೊಡುವ ತಂಡಕ್ಕೆ ನನ್ನನ್ನು leader ಮಾಡಿದ್ದರು. ? ಇಲ್ಲೊಬ್ಬರು ನರ-ಸಿಂಹ ಒಟ್ಟೂ ಆರೇಳು ಬಾರಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆಂದರೆ ಅವರು ನಿಜವಾದ ನಾಯಕ ಎಂದೆನಿಸುವುದು ನನಗೆ. ಶ್ರೀಯುತ ಎನ್.ಎಸ್.ನಾಯ್ಕ ನನ್ನ ಇಂದಿನ ಅಕ್ಷರ ಅತಿಥಿ.
ನಾಯಕರೊಬ್ಬರು ಬೇಕು ಅಲ್ಲದೇ ಹೋದರೆ ವ್ಯವಸ್ಥೆ ನಮ್ಮನ್ನು ಮುರಿದು ಮುಕ್ಕಿ ಬಿಡುತ್ತದೆ. ಕಾರ್ಯಕ್ರಮ ಸಂಘಟಿಸುವುದೂ ಒಂದು ಕಲೆ. ಯಾವಾಗಲೂ ಗೊಣಗಾಡಿದರೆ ಕೆಲಸವಾಗುವುದಿಲ್ಲ. ಕೆಲವೊಮ್ಮೆ ಬಾಯಿ ಮಾಡಬೇಕಾಗುತ್ತದೆ. ಬಾಯಿ ಮಾಡಲಿಕ್ಕೆ ಗೊತ್ತಿಲ್ಲದೇ ಹೋದರೆ ಬೇರೆಯವರ ಬಾಯಿ ನಮಗೆ ಬೇಕಾಗುತ್ತದೆ. ಕೆಲವರಿಗೆ ಸೂಕ್ಷ್ಮವಾಗಿ ಹೇಳಿದರೆ ಅರ್ಥವಾಗುವುದಿಲ್ಲ ವದರಿ ಹೇಳಬೇಕಾಗುತ್ತದೆ. ಶ್ರೀಯುತ ಎನ್.ಎಸ್.ನಾಯ್ಕ ಲೆಕ್ಕ ಮಾಡಲಾಗದಷ್ಟು ಹುದ್ದೆಗಳಲ್ಲಿದ್ದಾರೆ. ನನಗೆ ಸ್ಪಷ್ಟವಾಗಿ ಗೊತ್ತಿರುವುದು ಹೊನ್ನಾವರ ತಾಲ್ಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರು ಅವರು ಎಂಬುದು ಮಾತ್ರ. ಶಿಕ್ಷಕರ ಕೊ ಆಪರೇಟೀವ್ ಸೊಸೈಟಿಗೆ ನಾಲ್ಕೈದು ಬಾರಿ ಆಯ್ಕೆಯಾದ ಅವರು ಇದೀಗ ಅದರ ಉಪಾಧ್ಯಕ್ಷರು. ಸರಕಾರಿ ನೌಕರರ ಸಂಘದ ಗೌರವಾನ್ವಿತ ಸದಸ್ಯರೂ ಆಗಿದ್ದಾರೆ ಅವರು. ಹೀಗೆ ಹತ್ತು ಹಲವಾರು ಕಡೆಗೆ ಹತ್ತು ಹಲವಾರು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಅವರು ಕಳೆದ 15-20 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕಿನ ಅಧ್ಯಕ್ಷರಾಗಿ ಘನತೆವೆತ್ತ ಸೇವೆ ಮಾಡುತ್ತಾರೆ.
ಎನ್.ಎಸ್.ನಾಯ್ಕರ ಬಳಿ ಹೇಳಿದ ಕೆಲಸ ಆದಂತೆಯೇ ಸರಿ. ಅವರ ಕೈಯಿಂದ ಆಗುವುದಾದರೆ ಅದನ್ನು ಅವರು ಮಾಡಿಯೇ ಸಿದ್ಧ. ನಾನು 2011 ಕ್ಕೆ ಹೊನ್ನಾವರಕ್ಕೆ ವರ್ಗಾವಣೆಗೊಂಡು ಬಂದಾಗಿನಿಂದ ಅವರನ್ನು ಗಮನಿಸಿದ ಹಾಗೆ ಅವರು ಅವರದೇ ಆದ ಖದರ್ ಮೆಂಟೇನ್ ಮಾಡುತ್ತಾರೆ.
ನಾಯಕರೆಂದ ಮೇಲೆ ಶಿಕ್ಷಕರು ತಮ್ಮ ಅನೇಕ ಸಮಸ್ಯೆಗಳನ್ನು ಅವರ ಬಳಿ ಹೇಳಿ ಕೊಳ್ಳುತ್ತಾರೆ. ಮೊಬೈಲ್ ಫೋನುಗಳು ಬಂದ ಮೇಲಂತೂ ಅವರು ಕೈಯನ್ನು ಕಿವಿಯಿಂದ ಕೆಳಗಿಳಿಸಿದ್ದೇ ಸುಳ್ಳು. ? ಸಮಸ್ಯೆಗಳನ್ನು ಕೇಳಿ‌ ಕೇಳಿ ಅವರ ತಲೆ ಮತ್ತು ಗಡ್ಡದ ಕೂದಲು ಇನ್ನೂ ಉದುರದೇ ಕಪ್ಪಗಿದೆ ಎನ್ನುವುದು ನನಗೆ ಸೋಜಿಗವನ್ನುಂಟು ಮಾಡುತ್ತದೆ. ? ನಾನು ನನಗೊಂದು ಅದು ಮಾಡಿಕೊಡಿ. ಇದು ಮಾಡಿಕೊಡಿ ಎಂದು ಅವರ ಬಳಿಗೆ ಆಗಾಗ ಹೋದವನಲ್ಲ. ಆದರೂ ನನ್ನನ್ನು ಅತ್ಯಂತ ಆತ್ಮೀಯವಾಗಿ ಕಂಡು ಗೌರವಿಸುವ ವ್ಯಕ್ತಿ ಅವರಾದುದರಿಂದ ಮತ್ತು ನನ್ನ ಎಲ್ಲಾ ಸಾಹಿತ್ಯಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಅವರು ಮುಕ್ತವಾಗಿ ಸ್ಪಂದಿಸುವುದರಿಂದ ನಮ್ಮ ನಾಯಕರ ಬಗ್ಗೆ ನಾಲ್ಕಕ್ಷರ ಬರೆಯ ಬೇಕೆನಿಸಿತು.
ನಾನು ಹೊನ್ನಾವರ ಬಂದ ವರ್ಷವೇ ನನಗೆ ನನ್ನ ಪ್ರಥಮ ಪುಸ್ತಕ ಮೌಲ್ಯಗಳು ಎಲ್ಲಿ ಸಿಗುತ್ತವೆ?! ಪುಸ್ತಕ ಬಿಡುಗಡೆಗೊಳಿಸಬೇಕಿತ್ತು. ಶಿಕ್ಷಕರ ದಿನಾಚರಣೆ ಹತ್ತಿರ ಬಂದುದರಿಂದ ಅವಾಗಲೇ ಬಿಡುಗಡೆಗೊಳಿಸೋಣವೆಂದು ನಿರ್ಧರಿಸಿದೆ. ಕೊಳಗದ್ದೆಯ ಕ್ರೀಡಾಂಗಣದಲ್ಲಿ ಕ್ರೀಡಾಕೂಟದಲ್ಲಿ ನಮ್ಮ ವಿ.ಜಿ.ಹೆಗಡೆಯವರು ಎನ್.ಎಸ್.ನಾಯ್ಕರನ್ನು ಪರಿಚಯಿಸಿದರು. ಅವರ ಹತ್ತಿರ ಹೀಗೊಂದು ವಿನಂತಿ ಇಟ್ಟೆ. ತಕ್ಷಣ ಸ್ಪಂದಿಸಿ ವ್ಯವಸ್ಥೆ ಮಾಡಿಕೊಟ್ಟರು. ಕೆಲವೊಮ್ಮೆ ಕಾರ್ಯ ಒಳ್ಳೆಯದೇ ಆದರೂ ಅಡ್ಡಗಾಲು ಹಾಕುವವರು ಬಹಳ ಮಂದಿ ಇರುತ್ತಾರೆ. ” ಅವನಿಗ್ಯಾಕೆ ದೊಡ್ಡ ಮನುಷ್ಯನನ್ನಾಗಿ ಮಾಡುತ್ತಿ?! ? ಅವನು ನಮ್ಮ ಜಾತಿಯವನಲ್ಲ. ? ಅವನೆಂತ ಬರದವನ್ಯೋ ? ನೀ ಮುಂದ ಬರುಕೆ ಕೊಡುಕಾಗ್ವ ? ಒಂದಿನ ಅವ ನಿನ್ನೇ ಅಕ್ಕಸತ ನೋಡು ? ನೀವೆಲ್ಲ ಸೇರಿ ಅವನೊಂದು ದೊಡ್ಡ ಪಳದಿ ಮಾಡತ್ರಿ ? ಅವಂಗೆ ತನ್ನ ಬೇಳೆ ಬೇಯಸಕಳಬೇಕಾಗದೆ. ? ಅವಂಗೆ ಬೇರೆ ಕೆಲಸಿಲ್ಲ ಪುಸ್ತಕ ಬರುದು ಶಾಲೆಗೆ ಹಂಚುದು ? ಹೀಗೆ ನೂರಾರು ಜನ ನೂರಾರು ರೀತಿಯ ಕಮೆಂಟ್ ಕೊಡುವ ಸಂದರ್ಭದಲ್ಲಿ ಕೂಡ ಅವರು ಯಾವತ್ತೂ ನನ್ನನ್ನು ಬಿಟ್ಟುಕೊಟ್ಟವರಲ್ಲ.
ಎನ್.ಎಸ್.ನಾಯ್ಕರು ನಿಗರ್ವಿ ಮನುಷ್ಯ. ತಾಲೂಕಿನಲ್ಲಿ ಯಾವುದೇ ಶೈಕ್ಷಣಿಕ ಕಾರ್ಯಕ್ರಮ ಇರಲಿ ಅದನ್ನು ಅಭೂತಪೂರ್ವವಾಗಿ ಸಂಘಟಿಸಿ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ. ಅಯ್ಯೋ ಎಂದಾಗ ಹಗಲಿರುಳೆನ್ನದೇ ತನು-ಮನ-ಧನ ಸಹಕಾರ ನೀಡಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸ್ಪಂದಿಸಿದ್ದಾರೆ. ಶಿಕ್ಷಕರಾಗಿ ಅನೇಕ ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಇದೀಗ ಪದೋನ್ನತ ಮುಖ್ಯಾಧ್ಯಾಪಕರಾಗಿ ಭಡ್ತಿ ಹೊಂದಿದ್ದಾರೆ.
ಒಮ್ಮೆ ಯಾರೋ ನಾನೂ ಶಿಕ್ಷಕರ ಸಂಘದ ಚುನಾವಣೆಗೆ ನಿಲ್ಲುವವನು ಅಂತ ಗುಮಾನಿ ಹಾಕಿಬಿಟ್ಟಿದ್ದರು. ? ಹೀಗೊಂದು ವಾರ್ತೆ ನನ್ನ ಕಿವಿಗೆ ಬಂದು ಬಿದ್ದಾಗ ನನಗೆ ಮಜವೋ ಮಜ.? ಪಾಪ ಹಲವಾರು ಜನ ಹಲವಾರು ಕಸರತ್ತಿಗೆ ಕೂಡ ಪ್ರಾರಂಭಿಸಿದ್ದರಂತೆ. ? ಅಯ್ಯೋ ಶಿವಾ…..ಅವಿರೋಧವಾಗಿ ಸಿಂಹಾಸನವೇ ನನ್ನ ಪಾಲಿಗೆ ಬಂದರೂ ಖಂಡಿತ ಆ ಸಿಂಹಾಸನದಲ್ಲಿ ಬೇರೆಯವರನ್ನು ಕೂರಿಸಿ ಆ ಆಸ್ಥಾನದ ಆಸ್ಥಾನ ವಿದ್ವಾಂಸನಾಗಿ ಕಾರ್ಯ ಮಾಡಬಲ್ಲೆನೇ ಹೊರತೂ ಜನರ, ಶಿಕ್ಷಕರ ನಾಯಕನಾಗುವ ಯಾವ ಲಕ್ಷಣಗಳು ನನ್ನ ಬಳಿ ಇಲ್ಲ. ಮತ್ತು ಅದನ್ನು ನನ್ನ ಜಾತಕದಲ್ಲೂ ಬರೆದಿಲ್ಲ. ?
ಎನ್.ಎಸ್.ನಾಯ್ಕರು ನನ್ನನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಅವರು ನಿವೃತ್ತಿ ಹೊಂದಿದ ಸಮಯಕ್ಕೂ ನನಗೆ ನೆನಪಿರುತ್ತಾರೆ. ಅನೇಕ ಅಧಿಕಾರಿಗಳನ್ನು ನೋಡಿ ಅವರಿಂದ ಹೊನ್ನಾವರಕ್ಕೆ ಆಗಬೇಕಾದ್ದನ್ನು ಸರಿಯಾಗಿ ಆಗುವಂತೆ ಮಾಡಿದ ಅವರ ನಾಯಕತ್ವ ಗುಣಕ್ಕೆ ನಮೋ ನಮಹ. ?
ನೋವು ನುಂಗಿ ನಲಿವು ಹಂಚುವ ಶ್ರೀಯುತರಿಗೆ ಕೀರ್ತಿವಂತ ಮಗನಿದ್ದಾನೆ. ಮಗಳಿದ್ದಾಳೆ. ಇಬ್ಬರೂ ಕನ್ನಡ ಮಾಧ್ಯಮದಲ್ಲೇ ಕಲಿತು ಇದೀಗ B.E students ಆಗಿರುವುದು ವಿಶೇಷ ಸಾಧನೆ. ಪತ್ನಿ ಕೂಡ ಆದರ್ಶ ಶಿಕ್ಷಕಿಯಾಗಿದ್ದರು. ತಾಲೂಕಿನ ಶಿಕ್ಷಕರಿಗೆ, ಪಾಲಕರಿಗೆ, ವಿದ್ಯಾರ್ಥಿಗಳಿಗೆ ಚಿರ ಪರಿಚಿತರಾಗಿರುವ ಅವರದ್ದು ಕೊಡುವ ಗುಣ. ಬೇಡುವ ಗುಣವಲ್ಲ. ಹೋದ ಹೋದಲ್ಲಿ ಮಕ್ಕಳಿಗೂ ಬಹುಮಾನ ಹಂಚಿ ಬರುವ ಅವರ ದೊಡ್ಡಗುಣಕ್ಕೆ ನಾವು ಶರಣು ಎನ್ನಲೇ ಬೇಕು. ಅವರವರ ಸಮಸ್ಯೆ, ಜಂಜಾಟ, ರೋಗ, ರುಜಿನಗಳ ನಡುವೆಯೂ ಸಮಾಜಕ್ಕೆ ತನ್ನಿಂದಾದುದನ್ನು ಮಾಡಿಹೋಗಬೇಕು ಎನ್ನುವ ನಾಯಕರು ಇರುವುದರಿಂದಲೇ ಸಮಾಜ ಸುಭಿಕ್ಷವಾಗಿ ಇರುವುದಕ್ಕೆ ಸಾಧ್ಯ.
ಸದ್ಗುರು ಶ್ರೀಧರರ ಆಶೀರ್ವಾದ ಎನ್ ಎಸ್ ನಾಯ್ಕ ಸರ್ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ನ್ಯಾಯ ಸಿಗುವುದು ಯಾವಾಗ?!

ಎನ್.ಎಸ್.ನಾಯ್ಕರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 96204 27954

??????⚫⚪???????⚫⚪?????

RELATED ARTICLES  ಆಶ್ರಯ