ಇಂದು ಚಿಕ್ಕ ವೈರಾಣು ಇಡೀ ಜಗತ್ತನ್ನು ವ್ಯಾಪಿಸಿ ತನ್ನ ಅಟ ನಡೆಸುತ್ತಿದೆ ಎಂಬುದು ತಿಳಿದ ವಿಚಾರ. ಈ ಪರಿಸ್ಥಿತಿ ಇಂದು ಮಕ್ಕಳ ಶಿಕ್ಷಣದ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ. ಶಾಲೆ ಕದ ಮುಚ್ಚಿದೆ. ಅನ್ ಲೈನ್ ಪಾಠ ಅರಂಭವಾಗಿದೆ.ಮಕ್ಕಳಿಗೆ ಶಾಲೆಗೆ ಬಂದು ಶಿಕ್ಷಕರು ಸ್ವತಃ ನಿಂತು ಪಾಠ ಹೇಳಿ ಚಟುವಟಿಕೆ ಮಾಡಿಸಿ,ಪುನರ್ನಮನ ಮಾಡಿದರೂ ಎಲ್ಲರಿಗೂ ಅರ್ಥಮಾಡಿಕೊಂಡು ಗಟ್ಟಿಯಾಗಿ ಹೇಳುವ,ಬರೆಯುವ ಸಾಮರ್ಥ್ಯ ಬರುವದಿಲ್ಲ.ಅದರೆ ಮೊಬೈಲ್ ನೋಡಿ,ಕಂಪ್ಯುಟರ್ ನೋಡಿ ಮಕ್ಕಳು ಅರ್ಥಮಾಡಿಕೊಳ್ಳಬಲ್ಲರೇ? ಪಾಲಕರು ಮನೆಯಲ್ಲಿದ್ದು ಮಕ್ಕಳಿಗೆ ಸಹಕಾರ ಕೊಟ್ಟರೆ ಸ್ವಲ್ಪ ಮಟ್ಟಿಗಾದರೂ ಯಶಸ್ಸು ಇರಬಹುದು.ಅದರೆ ಪಾಲಕರು ಹೊರಗೆ ಕಾರ್ಯದ ನಿಮಿತ್ತ ಹೋಗುವವರಾದರೆ ಮೊಬೈಲ್
ಸೌಲಭ್ಯ ಮಗುವಿಗೆ ಸಿಗುವದಿಲ್ಲ. ಅಗ ಪಾಠ ಮಗುವಿಗೆ ಲಭ್ಯವಾಗುವದಿಲ್ಲ.

RELATED ARTICLES  ಕೊಡುತ ಕೊಳುವ ಸಂತಸವ


ಚಿಕ್ಕ ಮಕ್ಕಳಿಂದ ಹಿಡಿದು ಕಾಲೇಜ್ ವರೆಗೂ ಈ ರೀತಿಯ ಪಾಠ ನಡೆಯುತ್ತಿದೆ.ಕಾರಣ ಶಿಕ್ಷಣದ ಗತಿ ಬದಲಾಗಿ ಜ್ಞಾನ ಕುಸಿಯುತ್ತಿದೆ.ಕರೋನಾ ಭೀತಿ ಎಲ್ಲರಲ್ಲೂ ಇದೆ. ಶಿಕ್ಷಕರೂ ಇದಕ್ಕೆ ಹೊರತಾಗಿಲ್ಲ. ಅದರೆ ಭಯದಲ್ಲೂ ಮಕ್ಕಳ ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಂಸ್ಥೆಯ ಅದೇಶದಂತೆ ಶಿಕ್ಷಣ ಕೊಡುವ ತಯಾರಿ ಶಿಕ್ಷಕರದ್ದು.
ಅದರೆ ಮಕ್ಕಳನ್ನು ಇದು ಎಷ್ಟರ ಮಟ್ಟಿಗೆ ತಲುಪಬಲ್ಲುದು ಎಂಬುದು ಪ್ರಶ್ನೆ. ಮಕ್ಕಳಿಗೆ ಮೊಬೈಲ್ ಹವ್ಯಾಸ ಹಿಡಿಸಿ
ಅವರ ಗಮನವನ್ನು ಬೇರೆಡೆ ಸೆಳೆಯುವ ವಿದಾನ ಅಗುವದಿಲ್ಲವೇ? ಪೋಷಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ. ಕಾರಣ ಮಕ್ಕಳಿಗೆ ಪರಿಸ್ಥಿತಿ ವಿವರಿಸಿ ಮನೆಯಲ್ಲಿ ಇದ್ದು ಶಾಲೆ ಅರಂಭ ವಾಗುವವರೆಗೆ ಹಿಂದಿನ ತರಗತಿಯ ಪುಸ್ತಕಗಳನ್ನು ಓದಿ ಹಿರಿಯರು ಅವರು ಮನದಟ್ಟು ಮಾಡಿದ್ದನ್ನು ಖಚಿತಗೊಳಿಸಿಕೊಳ್ಳಬೇಕು.

RELATED ARTICLES  ವಿದೇಶ ಪ್ರಯಾಣಕ್ಕೆ ಶುಭ ಹಾರೈಸಿದರು ಶ್ರೀಧರರು .

ಓದು ನಿರಂತರವಾಗಿದ್ದು ಅದು ಮಗುವಿಗೆ ಗಲಿಬಿಲಿಯಾಗದೇ ಸರಿಯಾದ ಜ್ಞಾನದ ಬೆಳವಣಿಗೆಗೆ ಪೂರಕವಾಗಿರಬೇಕು.ಮಗು ಮನಪೂರ್ವಕವಾಗಿ ಕಲಿಕೆಯಲ್ಲಿ ತೊಡಗಿ ಅದರಿಂದ ಸಂತೋಷ ಹೊಂದಬೇಕು.ಒತ್ತಾಯದ ಕಲಿಕೆ,ಬಂಧನದಂತಹ ಪಾಟಾಭ್ಯಾಸ ಮಗುವಿಗೆ ಒಗ್ಗಲಾರದೆಂಬುದು ನನ್ನ ಅಭಿಪ್ರಾಯ.ಶಾಲೆ ಅರಂಭವಾಗುವವರೆಗೆ ಮಗು ಹಾದಿ ತಪ್ಪದಂತೆ ಬೀದಿಗೆ ಬೀಳದಂತೆ ಅಭ್ಯಾಸ ಮರೆಯದಂತೆ ಎಚ್ಚರಿಕೆ ವಹಿಸುವದು ಪಾಲಕರ ಜವಾಬ್ದಾರಿ. ಕರೋನಾ ಕಾಟ ತಪ್ಪಿಸಿ ಮಕ್ಕಳನ್ನು ರಕ್ಷಿಸಲು ಪಾಲಕರು ತಮ್ಮ ಮುಂಜಾಗ್ರತೆಗಳನ್ನು ನಿರ್ವಹಿಸಿ
ಪಾಲಿಸುವದು ಅವಶ್ಯಕ.

ಕಲ್ಪನಾಅರುಣ
ಬೆಂಗಳೂರು