ಚಟದಲ್ಲಿ ಎರಡು ವಿಧ.ಒಂದು ಹವ್ಯಾಸ ಅಂದರೆ ಒಳ್ಳೆಯ ಚಟ, ಇನ್ನೊಂದು ಬೇಡದ ಕೆಟ್ಟ ಚಟ. ಇಂದು ವಿದ್ಯೆ ಕಲಿತ ಹೆಣ್ಣು ಮಕ್ಕಳು ಕೂಡ ದುಶ್ಚಟದ ಪಾಲಾಗಿರುವದು ಖೇದನೀಯ. ನಾನು ಇಂದು ಶಾಲೆಯಿಂದ ಬರುತ್ತಿದ್ದೆ.ಬೇಕರಿಯ ಕಟ್ಟೆಯ ಮೇಲೆ ಪುರುಷನ ಸರಿಸಮ ಕುಳಿತು ಮಾತಾಡುತ್ತ ಸಿಗರೇಟು ಸೇದುತ್ತಿರುವ ಮಾಡರ್ನ ಹುಡುಗಿಯನ್ನು ನೋಡಿ ತಲೆ ಕೆಟ್ಟಂತಾಯಿತು. ಇಂತಹ ದ್ರಶ್ಯವನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ವಿದ್ಯೆ ಬುದ್ದಿ ಜ್ಞಾನ ಈ ಪದಗಳ ಅರ್ಥ ಎತ್ತ ಸಾಗುತಿದೆ ಇಂದು?
ಹೆಣ್ಣು ವಿದ್ಯಾವತಿಯಾಗಿ ಸುಂಸ್ಕ್ರತಳಾಗಿ ಸಂಸ್ಕ್ರತಿಯ ಬಿಂಬಿಸಿ ಉತ್ತಮ ಗುಣ, ಬಾಂದವ್ಯದ ಕೊಂಡಿಯಂತಿರಬೇಕು. ಪುರುಷನಿಗೆ ಸರಿಸಮಾನ ಎಂದು ಎದೆಯೊಡೆದುಕೊಂಡು
ದುಶ್ಚಟ ದುರಭ್ಯಾಸಗಳಲ್ಲಿ ಅವನಿಗೆ ಸಮಾನವಾದರೆ ಮಾದರಿ ಬದುಕು, ಮಾನವೀಯ ಮೌಲ್ಯಗಳ ವಾರಸುದಾರರು ಯಾರಾಗಬೇಕು? ಅವಿದ್ಯಾವಂತ ಹೆಣ್ಣಿಗೂ ಮೌಲ್ಯಗಳ ಪರಿಚಯ ಅನುಭವಗಳಿಂದ ಬಂದಿರುತ್ತದೆ. ಅಕೆಯೂ ಅನಾಗರೀಕತೆಯ ಬದುಕಿಗೆ ಒಗ್ಗಲು ತಯಾರಿರುವದಿಲ್ಲ. ಅದರೆ ಪರಿಸ್ಥಿತಿ ಅಕೆಯಲ್ಲಿ ಕಡುಕತನ,ಜಗಳ,ಹೆಮ್ಮಾರಿತನದ ಗುಣ (ಕೆಲವರಲ್ಲಿ ಮಾತ್ರ) ಬೆಳೆಸಿ, ಅವರ ಬದುಕಿನ ಕಿಮ್ಮತ್ತನ್ನು ಕಳೆಸಿವೆ.ಅಂತಹುದರಲ್ಲಿ ಈಗಿನ ಹೆಣ್ಮಕ್ಕಳು ಅದರಲ್ಲೂ ವಿದ್ಯಾವತಿಯರು ಹೆಂಡ, ಸಿಗರೇಟು,ಗಾಂಜಾ ಮುಂತಾದ ಮತ್ತಿಗೆ ಒಳಗಾಗಿ ತಮ್ಮ ಬದುಕನ್ನು ಬಲಿಯಾಗಿಸಿಕೊಳ್ಳುವದು ಎಷ್ಟರ ಮಟ್ಟಿಗೆ ಸರಿ?
ಯೋಚಿಸುವ ಶಕ್ತಿ ಇದೆ,ಕೈಯಲ್ಲಿ ಹಣವಿದೆ, ಮೈಯಲ್ಲಿ ರೂಪವಿದೆ, ಅದರೆ ಕೆಟ್ಟು ಹೋಗಿ ಸಮಾಜದ ಸ್ವಾಸ್ಥ್ಯ, ಸಂಸಾರದ ಸುಖ,ಸಂಸಾರದ ಬೆಸುಗೆಗಳನ್ನು ತೂತು ಮಾಡಿ
ದುಶ್ಚಟಗಳಿಗೆ ಬಲಿ ಕೊಡುವದು ಸರಿಯೇ? ವಿದ್ಯೆ ಸಂಸ್ಕಾರದ ತಾಯಿ.ಅದರೆ ಮೂಲದಲ್ಲಿಯೇ ಹುಳು ಹಿಡಿದು ಮರ ಟೊಳ್ಳಾಗಿ ಬತ್ತಿದರೆ ಮುಂದೆ ಹೂ ಕಾಯಿ ಬೀಜದ ಗತಿಯೇನು? ಅವುಗಳ ಸಂಸ್ಕಾರವೇನು? ನೀವೇ ಯೋಚಿಸಿ! ನವಗನಸ ಯುವತಿಯರೇ!
ಕಲ್ಪನಾಅರುಣ
ಬೆಂಗಳೂರು