ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ
ಈ ಕವಿವಾಣಿ ಜೀವನದ ಮಹತ್ವವನ್ನು ಸಾರುವ ಪ್ರಸಿದ್ದ
ಸಾಲು. ಮನುಷ್ಯನಾಗಲೀ, ಪ್ರಾಣಿಯಾಗಲೀ,ಸರಸದಿಂದ ತುಂಬು ಜೀವನ ನಡೆಸಬೇಕು.


ಸಮರಸ ಅಂದರೆ ಅಡುಗೆಯಲ್ಲಿ ಉಪ್ಪು,ಹುಳಿ ,ಖಾರ,ಎಲ್ಲ ಸಮನಾಗಿ ಬೆರೆತರೆ ಎಲ್ಲರೂ ಊಟವನ್ನು ಖುಶಿಯಿಂದ ತ್ರಪ್ತಿಯಾಗಿ ಊಟ ಮಾಡುತ್ತಾರೆ. ಅಂತೆಯೆ ಸಂಸಾರದಲ್ಲಿ ಸರಸ ಮನೆಯ ಒಗ್ಗಟ್ಟು,ಪ್ರೀತಿ,ಮಮತೆಯಂತಹ‌ ಸಂತೋಷಕರ ವಾತಾವರಣ ನಿರ್ಮಾಣವಾಗಿ‌ ಸುಖೀ ಕುಟುಂಬ ಎನಿಸಿಕೊಳ್ಳುತ್ತದೆ.


ಅಂತಹ ಕುಟುಂಬ ಸಮಾಜದಲ್ಲಿ ಉತ್ತಮ ಬಾಂಧವ್ಯ ಉಂಟುಮಾಡುತ್ತದೆ. ಗಂಡ ಹೆಂಡತಿ ಸಾಮರಸ್ಯ,‌ಅತ್ತೆ ಸೊಸೆ ಸಾಮರಸ್ಯ,ಅತ್ತಿಗೆ ನಾದಿನಿಯರ ಸಾಮರಸ್ಯ,ಸಹೋದರ ಸಹೋದರಿಯರ ನಡುವಿನ ಸಾಮರಸ್ಯ, ಹೀಗೆ‌ ಸಾಮರಸ್ಯ ಬೆಸುಗೆಯಾದರೆ ಜನರಲ್ಲಿ‌‌ತನ್ನಿಂದ ತಾನೆ ನೆಮ್ಮದಿ, ಉತ್ತಮ‌‌ಸಂಬಂದಗಳ ಸಂಕಲನವಾಗಿ ಅಹಿತಕರ ವಾತಾವರಣ ದೂರವಾಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು


ನಾಲ್ಕು ದಿನದ ಈ ಬದುಕಿಗೆ
ಇರುವಷ್ಟು ದಿನ ಉತ್ತಮ‌ ನೆಲೆ ಸಿಕ್ಕರೆ ಸಾರ್ಥಕ ಎನಿಸುವದಿಲ್ಲವೇ? ಅದು ಬಿಟ್ಟು ವಿರಸ ಭಾವನೆ ಬೆಳೆದು ಸಿಟ್ಟು, ಕೋಪ,ಜಗಳ,ಹಿಂಸೆಯೇ ಬದುಕಾದರೆ ಎಲ್ಲಿದೆ‌ ಶಾಂತಿ?
ಸಮಾದಾನ‌ ಹಿತವಾದ ಪರಿಸರ? ಬರೀ ನೋವು, ಅಂಜಿಕೆ, ಹಠ‌ ಸಾದನೆಗೆ‌ ಸಮಯ ವ್ಯರ್ಥವಾಗಿ
ಜೀವನ ಇಷ್ಟೇ ಎಂಬ ಜಿಗುಪ್ಸೆ ಮನೆಮಾಡುತ್ತದೆ. ಗಂಡ ಹೆಂಡತಿ ಕಿತ್ತಾಡಿ ವಿಚ್ಚೇದನದತ್ತ, ಕೊಲೆ, ಸುಲಿಗೆಯಂತಹ ಕಲಸಕ್ಕೆ ಇಳಿದು ಭರಿಸಲಾಗದ ದುಃಖ ಜೀವಿಯಾಗುತ್ತಾರೆ. ಸಮಾಜದ ಅಶೋತ್ತರಗಳು ವಿಮುಖವಾಗಿ ದ್ಯೇಯ,‌ಉದ್ದೇಶಗಳು ನಶಿಸಿ ಅದರ್ಶದ ಘನತೆ ಮೂಲೆಸೇರುತ್ತವೆ.ನಿರಾಶೆ,‌ಅಸಹಾಯಕತೆ, ನತದ್ರಷ್ಟತೆ ಜೀವನದಲ್ಲಿ ಹಾಸುಹೊಕ್ಕಾಗಿ ಪಶ್ಚಾತ್ತಾಪ‌ , ಬಸವಳಿಕೆ ಬಳುವಳಿಯಾಗುತ್ತದೆ. ಇಂದಿನ ಅಧುನಿಕ ಸಮಾಜದಲ್ಲಿ
ಹಲವಾರು ಅಂಶಗಳು ವಿರಸದ ದಾರಿ ಹಿಡಿದು ಅತ್ಮಹತ್ಯೆ, ಒಂಟಿತನ, ಕ್ರೌರ್ಯಗಳೆಡೆ‌ ಮುಖ ಮಾಡಿ ಬದುಕಿನ ಸಾರವನ್ನೇ‌ ಸತ್ವವಿಲ್ಲದಂತಾಗಿಸಿದೆ. ಬದುಕಿದರೆ ನಾಲ್ಕು ಜನರ ಮನ್ನಣೆ ಸಿಗಬೇಕು, ನಾವು ಮತ್ತೊಬ್ಬರ ಗೌರವಿಸಿ, ಆದರ ಅಬಿಮಾನ ಗಳಿಸಿಕೊಳ್ಳಬೇಕು.

RELATED ARTICLES  ಬೈಕ್ ಅಡ್ಡಗಟ್ಟಿ ಹಣದೋಚಿ ಪರಾರಿ : ಶಿರಸಿಯಲ್ಲಿ ಮತ್ತೆ ದರೋಡೆ


ಅದುವೇ ಸರಸ ಸಂಬಂದ.
ಪ್ರೀತಿ , ಸೌಹಾರ್ದತೆ, ಹೊಂದಾಣಿಕೆಯೇ ಸರಸ.
ಬದುಕಿನಲ್ಲಿ ಸಾಮರಸ್ಯ ಹೆಚ್ಚಾಗಿ ಜೀವನದ ರಹದಾರಿ
ಸುಗಮವಾಗಿ,ಸುಖಮಯವಾಗಿ,‌ಸಂಸಾರ,ಸಮಾಜ,‌ಪ್ರಗತಿಯ
ಒಕ್ಕೂಟವಾಗಿ,ದೇಶದ‌ ಸಂಚಲನೆ‌ಯ ಪಥ‌ ಸಂಸ್ಕ್ರತಿ, ಸಂಸ್ಕಾರಗಳ‌ ಒಲವ ಜನಮನಗಳು‌ ಅನುಸರಿಸವಂತಾದರೆ!
ನಿಜಕ್ಕೂ ಸಾಮರಸ್ಯ‌ ಪದಕ್ಕೆ‌ಕಟ್ಟಲಾಗದ ಬೆಲೆ.‌

ಕಲ್ಪನಾಅರುಣ
ಬೆಂಗಳೂರು