ಜಗಳ ಎಂಬ ಪದ ಬೇಸತ್ತು ಮನಸಿಗೆ ಖೇದವನ್ನುತರುತ್ತದೆ.
ಅದರೆ ಕೆಲವು ಜನ ಜಗಳ ಮಾಡಿ,ಇನ್ನೊಬ್ವರ ನೆಮ್ಮದಿ ಕೆಡಿಸಿ,ತಾವೂ ಸಮಾದಾನ ಪಡದೆ ಸಿಟ್ಟು,‌ ಅಸಹನೆಯಲ್ಲಿ
ಬೇಯುತ್ತಾರೆ.ಈ ಜಗಳಗಂಟಿತನ ಚಾಡಿ,ದ್ವೇಷ,ರೋಷ, ಹಿಂಸೆಯತ್ತ ಮುಖ ಮಾಡಿ ಸದಾ ನಕಾರಾತ್ಮಕ ಮನೋಭಾವನೆಯ ಚಿಂತೆನೆಯಲ್ಲಿ ತೊಡಗಿರುತ್ತದೆ.
ಹಾಗಾದರೆ ಜಗಳಗಂಟಿತನಕ್ಕೆ ಕಾರಣಗಳೇನು? ಎಂಬ ಪ್ರಶ್ನೆ ಎದುರಾಗುತ್ತದೆ. ಆಶಾಭಂಗ, ತಮ್ಮ ಬಗ್ಗೆ ನಿರ್ಲಕ್ಷ ಎಂಬ ಭಾವನೆ, ಅಸಹನೆ, ಕೋಪ,‌ ಪ್ರತಿಷ್ಠೆ, ದುರಭಿಮಾನ, ಸೊಕ್ಕು, ಮುಂತಾದ ಕೆಟ್ಟ ಮನೋಬಾವಗಳು ಜಗಳಕ್ಕೆ
ಪ್ರಚೋದನೆ ನೀಡುತ್ತವೆ.

ಮನಸಿಗೆ ಪರರ ಮಾತು ವರ್ತನೆ ಹಿಂಸೆಯಾಗಿ ಬೈಗುಳ ನಿಂದನೆಗೆ ತೊಡಗಿಕೊಳ್ಳುತ್ತಾರೆ.ಅಸಮಯದಲ್ಲಿ ನೋಡಿ ಕೇಳಿ
ಮಜಾ ತೆಗೆದುಕೊಳ್ಳುವ ಜನರು ಹುಟ್ಟಿಕೊಳ್ಳುತ್ತಾರೆ. ಇನ್ನೂ ಪ್ರಚೋದನೆಗೊಳಗಾದ ಅಂತಹ ಜನರು ಸಮಯಾಸಮಯ ನೋಡಿ ಜಗಳ ತೆಗೆಯುತ್ತಾರೆ. ಇಂತಹ ಜಗಳಗಳು ಸಾರ್ವಜನಿಕ ಸ್ಥಳಗಳಲ್ಲಿ,ಉದ್ಯೋಗದ ಜಾಗಗಳಲ್ಲಿ, ಮನೆಗಳಲ್ಲಿ ಹೀಗೆ ಅಸಹನೆಯ ಎಡೆಗಳಲ್ಲಿ ಹೊರಬಂದು ಅಗಬಾರದ ಚಟುವಟಿಕೆಗಳು ನಡೆಯುವ ಸಂದರ್ಭ ಉಂಟಾಗುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು


ಇದರಿಂದ ಬೇಸರ ನೋವು ವಿವಾದ ಸ್ರಷ್ಟಿಯೇ ವಿನಃ‌ ಕುಳಿತು ಮಾತನಾಡಿ ಬಗೆಹರಿಸಿಕೊಂಡ ಸಮಸ್ಯೆ ಪರಿಹಾರದಂತೆ ಸಮಾಧಾನಕರವಾಗಿರುವದಿಲ್ಲ. ಹೊಂದಾಣಿಕೆ ಸಾಮರಸ್ಯಗಳು
ಹೊರಟುಹೋಗಿ ಬರಿ ಸಮಸ್ಯಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಪರರ ವ್ಯಂಗ್ಯ ಹಾಸ್ಯಕ್ಕೆ ಗುರಿಯಾಗುವ ಸಂಭವ ಉಂಟಾಗುತ್ತದೆ. ಕೆಲವರಿಗೆ ಜಗಳಗಂಟಿತನ ಅಭ್ಯಾಸವಾಗಿ ನೊಂದುಕೊಳ್ಳುವ ಪರಿಸ್ಥಿತಿ ಬರಬಹುದು.ಕಾರಣ ಯಾವುದೇ ಸಮಸ್ಯೆ ಮನಸಿನಲ್ಲಿ ಕಿರಿ ಕಿರಿ ಮಾಡುತ್ತಿದ್ದರೆ ಮುಚ್ಚಿಕೊಂಡು ಒಳಗೊಳಗೆ ಕುದಿಯದೆ ಪರಿಹಾರ ಕಂಡುಕೊಳ್ಳಬೇಕು.

RELATED ARTICLES  ಮಾವಿನಕಾಯಿ ಹಣ್ಣಾಗುವ ಮೊದಲು ಹುಲ್ಲಿನ ಪೆಟ್ಟಿಗೆಗೆ ಬರಬೇಕಾಗುತ್ತದೆ! ಶ್ರೀಧರರು ಹೀಗೆ ಹೇಳಿದರು.


ಸಮಾದಾನದಿಂದ ಅಲೋಚನೆ ಮಾಡಿ ತೀರ್ಮಾನಕ್ಕೆ ಬಂದು ತಾಳ್ಮೆ ಅತ್ಮವಿಶ್ವಾಸದಿಂದ‌ ತನ್ನೊಳಗಿನ ತರ್ಕ ನಡೆಸಿ‌ ಜಗಳದ ಸನ್ನಿವೇಶವನ್ನು ತಪ್ಪಿಸಿ ಸಾವದಾನ ಚಿತ್ತರಾಗಬೇಕು. ಮೌನ ಬಂಗಾರ ಮಾತು ಬೆಳ್ಳಿ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ನಾಣ್ಣುಡಿ ತಿಳಿಸುವಂತೆ ನಯವಾಗಿ ವಿಶ್ವಾಸದಿಂದ ಬದುಕುವ ಕಲೆ ಮನುಷ್ಯನಲ್ಲಿ ಬೆಳೆಯಬೇಕು.

ಸದಭಿಮಾನ
ಸಹಕಾರ ಸಹಾಯ ಸ್ನೇಹ ಗುಣಗಳಿಂದ ಜಗವನ್ನು ಔದಾರ್ಯದಿಂದ ಶಾಂತಿ‌ ಸಹಬಾಳ್ವೆ‌ಯುತವನ್ನಾಗಿ‌ ಮಾಡಿ ಮನುಜರು ಮನುಜರನ್ನು ಅರಿತು ‌ಕೂಡಿ ಬಾಳುವ
ಪ್ರಯೋಜನಗಳ ಕುರಿತು‌ ಅಸಕ್ತಿವಹಿಸಿ‌ ಜೀವನವನ್ನು‌
ರೂಢಿಸಿಕೊಂಡರೆ! ಮೊಟಕು ಭಯೋತ್ಪಾದನೆ, ಹಿಂಸೆ, ರಕ್ತಪಾತ ಮತ್ತಿತರ ಎಲ್ಲವೂ!!

ಕಲ್ಪನಾಅರುಣ
ಬೆಂಗಳೂರು