ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ವಿ.ಎನ್.ಹೆಗಡೆ
ದೊಡ್ಡ ದೊಡ್ಡ ಕೋಟೆ ಕೊತ್ತಲಗಳನ್ನೋ, ದೊಡ್ಡ ದೊಡ್ಡ ಸೇತುವೆ, ಅಣೆಕಟ್ಟುಗಳನ್ನೋ ನಿರ್ಮಿಸಿದವರು ಮಾತ್ರ ದೊಡ್ಡವರಾಗುವುದಿಲ್ಲ. ನಮ್ಮ ಬದುಕಿನಲ್ಲಿ ಸಣ್ಣದೊಂದು ಉಪಕಾರ ಮಾಡಿದವರೂ ನಮಗೆ ದೊಡ್ಡವರೇ ಆಗಿರಬಹುದು. ದೊಡ್ಡ ಮನುಷ್ಯರು ದೊಡ್ಡವರಲ್ಲ….ದೊಡ್ಡವರಲ್ಲ….? ಎಂಬ ಹಾಡು ನನಗೆ ತುಂಬಾ ಇಷ್ಟವಾಗುತ್ತದೆ. ಸಣ್ಣತನ ತೋರುವವರಂತೂ ಎಷ್ಟೇ ದೊಡ್ಡವರಾದರೂ ಸರಿ ಅವರು ನಮ್ಮ ಹೃದಯದಲ್ಲಿ ದೊಡ್ಡವರೆನಿಸಿಕೊಳ್ಳಲು ಸಾಧ್ಯವೇ ಇಲ್ಲ. ನನ್ನ ಪ್ರೀತಿಯ ಗುರುಗಳು ಶ್ರೀಯುತ ವಿ.ಎನ್.ಹೆಗಡೆಯವರ ಬಗ್ಗೆ ಬರೆಯುವುದೆಂದರೆ ಅದೊಂದು ಸಂಭ್ರಮ.
ಶ್ರೀಯುತರು ಉತ್ತರಕನ್ನಡ ಜಿಲ್ಲೆ ಹೊನ್ನಾವರ ನಿವಾಸಿ. ಮೂಲತಃ ನಮ್ಮದೇ ಊರಿನವರಾದ ವಿ.ಎನ್ ಹೆಗಡೆಯವರು ಅತ್ಯಂತ ಸೌಮ್ಯ ಸ್ವಭಾವದ ಸಜ್ಜನ. ಕೆಲವೇ ತಿಂಗಳುಗಳ ಹಿಂದೆ ಎಸ್.ಕೆ.ಪಿ. ಪ್ರೌಢಶಾಲೆ ಅರೆಅಂಗಡಿಯಿಂದ ನಿವೃತ್ತರಾದ ವಿ.ಎನ್.ಹೆಗಡೆ ಸರ್ ನಮಗೆ ಹೈಸ್ಕೂಲಿನಲ್ಲಿ ಇಂಗ್ಲೀಷ್ ಹಾಗೂ ಸಮಾಜ ಭೋದಿಸಿದವರು. ಯಾರ ಜೊತೆಗೂ ವೈಮನಸ್ಸು ತೋರದ ಸರಳತೆಯೇ ಮೈಯೆತ್ತಂತೆ ತೋರುವ ವಿ.ಎನ್.ಹೆಗಡೆ ಸರ್ ಕಂಡರೆ ಮಾತ್ರ ನಾವೆಂದೂ ಭಯಭೀತರಾದದ್ದಿಲ್ಲ. ಯಾಕೆಂದರೆ ಅವರಿಗೆ ದೊಡ್ಡ ಕಣ್ಣು ಬಿಟ್ಟು ಕೂಡ ಅಭ್ಯಾಸವಿಲ್ಲ. ??
ಹೈಸ್ಕೂಲ್ ದಿನಗಳಲ್ಲಿ ನಮ್ಮದು 40-40 ಜನರ A,B,C class ಗಳು. A ಮತ್ತು B ಪ್ರಥಮ ಭಾಷೆ ಕನ್ನಡ, ಆದರೆ C ವಿಭಾಗ ಪ್ರಥಮ ಭಾಷೆ ಸಂಸ್ಕೃತದ್ದು. ನಾವೆಲ್ಲ C……see ? class ನವರು. ಹೀಗಾಗಿ ಪ್ರತಿಯೊಂದು ಗುರುಗಳ ಚಲನವಲನಗಳೂ ನಮ್ಮ ಮನಸ್ಸಿನಲ್ಲಿ ಇಂದು ಅಚ್ಚೊತ್ತಿವೆ.
ನಮ್ಮ ಸರ್ ಇಂದು ಯಾವ shirt ಹಾಕಿದ್ದಾರೆ, ಯಾವ ಪ್ಯಾಂಟ್ ಹಾಕಿದ್ದಾರೆ ಅವರ ಪ್ಯಾಂಟಿಗೂ ಶರ್ಟಿಗೂ ಮ್ಯಾಚಿಂಗ್ ಇದೆಯಾ? ಇಲ್ಲವಾ? ಅವರು ಸರಿಯಾಗಿ ಕೂದಲು ಬಾಚಿದ್ದಾರೆಯೇ?! ??? ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾನು ಆಮೇಲೆ ಅವರ ಪಾಠದಲ್ಲಿ ತಲ್ಲೀನನಾಗುತ್ತಿದ್ದೆ. ? ದೂಸರಾ ಮಾತಾಡಿ ಅಭ್ಯಾಸವಿಲ್ಲ. ಹೀಗಾಗಿ ವಿ.ಎನ್ ಹೆಗಡೆ ಸರ್ ಅವಧಿಯಲ್ಲಿ ನಾನಾಗಲೀ ನಮ್ಮ ಸಹಪಾಠಿಗಳಾಗಲೀ ಎಂದೂ ಕಿರಿಕ್ ಮಾಡದ್ದಿಲ್ಲ. ನಮ್ಮ ಸರ್ marks ಕೊಡುವಾಗ ಮಾತ್ರ ಬಹಳ ಕಂಜೂಸಿ ಮಾಡುತ್ತಿದ್ದರು. 1/2 marks cut cut cut….. ಆಗ ನಮಗೆ ಬರುತ್ತಿತ್ತು ಅವರ ಮೇಲೆ ಸಿಟ್ ಸಿಟ್ ಸಿಟ್….ಅವರ ಟೇಬಲ್ ಹತ್ತಿರ ಹೋಗಿ ಕೊಸರಾಡಿದರೂ ಅವರು ಊಹೂಂ…..1/2 marks ಕೊಡುವುದೆಂದರೆ 2000 ರೂ ನೋಟನ್ನು ಜೇಬಿಂದ ತೆಗೆದು ಕೊಟ್ಟಂತೆ ಮಾಡುತ್ತಿದ್ದರು. ??
ವಿ.ಎನ್ ಹೆಗಡೆ ಸರ್ ದಿನಕ್ಕೊಂದು ರೀತಿಯ ಮೂಡಲ್ಲಿ ಇರುವ ಮನುಷ್ಯರಲ್ಲ. ಅವರದು 24×7 ಒಂದೇ ಮೂಡ್. ಅವರು ಕಾಲೆಳಿಸಿಕೊಳ್ಳುವವರೂ ಅಲ್ಲ. ಕಾಲೆಳೆದೂ ಅವರಿಗೆ ಗೊತ್ತಿಲ್ಲ. ಹೀಗಾಗಿ ಅವರು ಯಾವ ವಿದ್ಯಾರ್ಥಿಗಳಿಗೂ hurt ಮಾಡುವವರಲ್ಲ. ತಮ್ಮ ವಿಷಯಗಳನ್ನು ಅಚ್ಚುಕಟ್ಟಾಗಿ ಭೋದಿಸುವ ಅವರ ವರ್ಗ ಅದು ಶಾಂತವಾಗಿ ಪ್ರವಹಿಸುವ ನದಿಯಿದ್ದಂತೆ. ಭೋರ್ಗರೆವ ಜಲಪಾತವಲ್ಲ ಅದು.
ವಿ.ಎನ್.ಹೆಗಡೆ ಸರ್ ಇವತ್ತಿಗೂ ನನ್ನನ್ನು ಪ್ರೀತಿ ಕಾಳಜಿಯಿಂದ ಮಾತನಾಡಿಸುತ್ತಾರೆ. ನನ್ನ ಹೆಮ್ಮೆಯ ವಿದ್ಯಾರ್ಥಿ ನೀನು ಎಂದು ಬೆನ್ನು ತಟ್ಟುತ್ತಾರೆ. ಅವರ ಮಮತೆ ತುಂಬಿದ ಮಾತುಗಳೇ ನನಗೆ ಮರೆಯಲಾಗದ ಬಹುಮಾನ.
ವಿ.ಎನ್ ಹೆಗಡೆ ಸರ್ ಸಂಬಳಕ್ಕಾಗಿ ಮಾತ್ರ ಕೆಲಸ ಮಾಡಿದವರಲ್ಲ. ಅವರಿಗೆ ಪ್ರತಿಯೊಬ್ಬರ ಬಗೆಗೂ ಕಾಳಜಿಯಿತ್ತು. ತನಗೆ ವಹಿಸಿದ ಜವಾಬ್ದಾರಿಯಿಂದ ನುಣುಚಿಕೊಳ್ಳದ ಅವರಿಗೆ ಮೈಮೇಲೆ ಬಿದ್ದು ತಾನೇ ಮೇಲೆ ಆಗಬೇಕೆಂಬ ಯಾವ ಮಹತ್ವಾಕಾಂಕ್ಷೆ ಕೂಡ ಇಲ್ಲದ್ದರಿಂದ ಹಲವಾರು ವಿಷಯಗಳು ಅವರಿಗೆ ಗೊತ್ತಿದ್ದರೂ ಸುಮ್ಮನಿದ್ದು ಬಿಡುತ್ತಾರೆ. ಬೈಕು ಮತ್ತು ಹೆಲ್ಮೇಟಿನ ಮೇಲೆಯೇ ಕಿ.ಮೀ ದೂರದಿಂದಲೇ ನಾನು ವಿ.ಎನ್.ಹೆಗಡೆ ಸರ್ ನ್ನು ಗುರುತಿಸಿ ಬಿಡುತ್ತಿದ್ದೆ. ? ಬರೆಯಲು ಸ್ವಲ್ಪ ಲೇಟಾದರೂ ಕನಿಕರ ತೋರಿ ಬಯ್ಯದ ವಿ.ಎನ್.ಹೆಗಡೆ ಸರ್ ಎಂದೆಂದೂ ವ್ಯಂಗ್ಯವಾಗಿ ಕೂಡ ಮಾತನಾಡಿದವರಲ್ಲ. ತಮ್ಮ ಸಹೋದ್ಯೋಗಿಗಳ ಬಗೆಗಂತೂ ಚಕಾರ ಮಕ್ಕಳ ಮುಂದೆ ಹೇಳಿದವರಲ್ಲ ಅವರು. ನಿಧಾನ ನಡಿಗೆ. ಬಹುತೇಕ ಅವರು ನೂರು ಹೆಜ್ಜೆ ಹಾಕಿದರೂ ಅದು accurate ಒಂದೇ ಅಂತರದಲ್ಲಿರುತ್ತದೆ. ?
ನಮ್ಮ ಸರ್ ಕಂಡರೆ ಇಂದೂ ಕೈಜೋಡಿಸಿ ನಮಸ್ಕರಿಸುತ್ತೇನೆ. ಯಾಕೆಂದರೆ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ನನ್ನ ಮೇಲೆ ಅಗಾಧವಾದ ಪರಿಣಾಮ ಬೀರಿದ್ದಾರೆ. ಒಬ್ಬ ವಿದ್ಯಾರ್ಥಿ ಆದವನಿಗೆ ಜಿಗಿದಾಡಿದ ಶಿಕ್ಷಕರು ಮಾತ್ರ ನೆನಪಿರುವುದಿಲ್ಲ. ನಲ್ಮೆ ತೋರಿದ ಗುರುಗಳ ಮೌನವೂ ನನಗೆ ತುಂಬಾ ಇಷ್ಟವಾಗುತ್ತದೆ. ಸದಾ ಅಲ್ಲಿಲ್ಲಿ ಮಾತನಾಡುತ್ತಲೇ ಇರುವ ನನಗೆ ವಿ.ಎನ್ ಹೆಗಡೆ ಸರ್ ಶಾಂತ ಸ್ವಭಾವ ಬಲುವೇ ಇಷ್ಟ. ಮಡದಿ ಕೂಡ ಸಭ್ಯ ಆದರ್ಶ ಶಿಕ್ಷಕಿ. ಮಗ ಕೂಡ ಪ್ರತಿಭಾವಂತ.
ವಿ.ಎನ್ ಹೆಗಡೆಯವರ ಮಾತು ಎದುರಿಗಿದ್ದವನಿಗೆ ಮಾತ್ರ ಕೇಳುತ್ತದೆ. ಅತ್ಯಂತ ಮೃದು ಮಧುರವಾಗಿ ಹಾಗೂ ತೂಕಭರಿತ ಮಾತನಾಡುವ ಅವರ ಧ್ವನಿ ಮೂರನೆ ವ್ಯಕ್ತಿಗೆ ಕೇಳುವಷ್ಟು ದೊಡ್ಡದಾಗಿ ಇರುವುದಿಲ್ಲ. ? ಹೀಗಾಗಿ ನಾವೂ ಅವರ ಹತ್ತಿರ ಮಾತನಾಡುವಾಗ ಮೆಲುದನಿಯಲ್ಲೇ ಮಾತನಾಡುವುದು ಅನಿವಾರ್ಯ. ? ಅಕಸ್ಮಾತ್ ಅವರಿಗೆ ಏನಾದರೂ ಬಯ್ದು ಬಿಡೋಣ ಎಂದು ಬಂದವನೂ ಅವರ ಕಾಲು ಹಿಡಿದು ನಮಸ್ಕಾರ ಮಾಡಿ ಹೊರಟು ಹೋಗುತ್ತಾನೆ. ?
ಅವರ ಶಿಷ್ಯರನೇಕರು ಇಂದು ದೇಶ, ವಿದೇಶಗಳಲ್ಲಿ ನೆಲೆಸಿದ್ದಾರೆ. ವಿ.ಎನ್.ಹೆಗಡೆ ಸರ್ ಬಗ್ಗೆ ಅವರು ಅಭಿಮಾನ ಪಡುವಂಥಾದರೆ ಬರೆದ ನನ್ನ ಅಕ್ಷರಗಳೂ ಧನ್ಯವಾಗುತ್ತವೆ.
ಮನುಷ್ಯ ಸಾವಿರ, ಎರಡು ಸಾವಿರ ವರ್ಷ ಬದುಕಿರುವುದಿಲ್ಲ. ಇನ್ನೂರು ಮುನ್ನೂರು ವರ್ಷ ಬದುಕಿದವರನ್ನೂ ನಾನು ನೋಡಿಲ್ಲ. ಇದ್ದ ಸಂಕ್ಷಿಪ್ತ ಬದುಕಿನಲ್ಲಿ ಸಭ್ಯ ಸುಸಂಸ್ಕೃತ ಬದುಕಿನ ಪಾಠ ಹೇಳಿಕೊಟ್ಟ ವಿ.ಎನ್ ಹೆಗಡೆ ಸರ್ ಅಂಥವರಿಗೆ ಕೈ ಮುಗಿಯುವ ಪುಣ್ಯ ನನ್ನ ಈವರೆಗಿನ ಒಟ್ಟೂ ಪುಣ್ಯದ ಮೊತ್ತಕ್ಕೆ ಸಮ. ?.
ಸದ್ಗುರು ಶ್ರೀಧರರ ಆಶೀರ್ವಾದ ವಿ.ಎನ್ ಹೆಗಡೆಯವರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ವಿ.ಎನ್.ಹೆಗಡೆ ಸರ್ ಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 94838 06765
??????⚫⚪???????⚫⚪?????