ಮಾನವ ಎಂದಾಕ್ಷಣ ಬುದ್ದಿವಂತಿಕೆ, ಸಹಜೀವನ, ಬದುಕಿನ ಕಲೆ, ವಿದ್ಯೆ,ಉದ್ಯೋಗ,ಆಸ್ತಿ, ಅಂತಸ್ತು ಈ ಎಲ್ಲ ಪದಗಳ ಸಮೂಹ ನೆನಪಿಗೆ ಬರುತ್ತದೆ.
ಇವೆಲ್ಲಕ್ಕೂ ಮಿಗಿಲಾಗಿ ಮಾನವನ ಮನಸ್ಸು,ಆ ಮನಸ್ಸಿನ ಯೋಚನೆಗಳು, ಭಾವನೆಗಳು, ನಡೆವಳಿಕೆ ಇವೆಲ್ಲ
ಆತನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಮಾನವ ಮಾನಸ ಯಾತ್ರಿ ಅತನ ಮನಸ್ಸು ಅತನಿಗೆ ಜೀವನದ ರೀತಿ ನೀತಿಗಳಿಗೆ ಚಾಲನೆ ಕೊಡುತ್ತದೆ. ಮನಸ್ಸು ಸಮಾದಾನದಿಂದ ಧ್ರಡ ಸಂಕಲ್ಪ ಹೊಂದಿದ್ದರೆ ಮಾನವ ನಿರಾತಂಕವಾಗಿ ತನ್ನ ಬದುಕ ಬಂಡಿ ಎಳೆಯುತ್ತಾನೆ. ಅದೇ ಮನಸ್ಸು ಚಂಚಲವಾಗಿ ವಿಕಾರವಾಗಿದ್ದರೆ ಅತನ ಬದುಕು ನಿರ್ದಾರಕ್ಕೆ ಬರಲಾಗದೆ ಅಸ್ತವ್ಯಸ್ತಗೊಳ್ಳುವ ಸಾದ್ಯತೆ ಬಹಳವಾಗಿ ಕಂಡುಬರುತ್ತದೆ. ಮನಸ್ಸು ಸರಿ ತಪ್ಪುಗಳ ಯೋಚನೆ ಮಾಡಿ,ನಿರ್ಣಯಕ್ಕೆ ಬರಬೇಕು.
ಅಗಲೇ ಸಾದನೆಯ ಹಾದಿ ಬಲವಾಗುತ್ತದೆ.ವಿದ್ಯೆ ಕಲಿಯುವಾಗ, ಅದರ ಕುರಿತು ಚಿಂತಿಸಿ, ಸತತ ಅಭ್ಯಾಸ ಮಾಡುವ ಏಕಾಗ್ರತೆ ಬೆಳೆಸಿಕೊಳ್ಳಬೇಕು.ಅಗಲೇ ಸಾಧನೆಯ ಮಂತ್ರ ಸಿದ್ದಿಯಾಗುತ್ತದೆ. ಬದುಕಿನಲ್ಲಿ
ಏನೆಲ್ಲ ಘಟನೆಗಳು ನಡೆಯುವದು ಈ ಮನಸ ಕ್ರಿಯೆಯಿಂದಲೇ. ಮಾನವನಿಗೆ
ಉತ್ತಮ ಸಂಸ್ಕಾರ ಉತ್ತಮ ಮನಸಿಗೆ ಉತ್ತಮ ಯೋಚನೆಗೆ ಎಡೆ ಮಾಡಿಕೊಡುತ್ತದೆ. ಕೆಟ್ಟದರ ಕಡೆ ಅಸಕ್ತಿ ಕೆಟ್ಟ ಕಾರ್ಯದತ್ತ ಮುಖ ಮಾಡುತ್ತದೆ. ಸಮಾಜದ ಕೆಡುಕುಗಳೂ ಈ ಮನಸ ವ್ಯತಿರಿಕ್ತ ಪರಿಣಾಮ. ಜಗದ ಅನೇಕ ಅನಾಹುತ, ಅವಘಡಗಳಿಗೆ,ಅನಾಚಾರಗಳಿಗೆ, ಮನಸಿನ ಮೇಲೆ ಹಿಡಿತವಿಲ್ಲದ ಅಡ್ಡ ಪರಿಣಾಮಗಳು ಕಾರಣ. ವ್ಯಸನ,ಬ್ರಷ್ಟಾಚಾರ ಮುಂತಾದ
ವುಗಳೂ ಮನಸ ಭಾವನೆಗಳ ಪ್ರತಿರೂಪ. ಮಾನವನ ಮನಸೇ ಅವನ ನಡೆವಳಿಕೆಯ ಪ್ರತಿಬಿಂಬ.ಹಾಗಾಗಿ ಉತ್ತಮ ಯೋಚನೆ, ಉತ್ತಮ ಪರಿಸರ,
ಉತ್ತಮ ಸಂಸ್ಕಾರ, ಉತ್ತಮ ಜೀವನ ಮುಂದಿನ ಪೀಳೀಗೆಗೆ ಬೇಕು. ಹೊಸ ಸಮಾಜ ಹೊಸ ರೀಪದಿಂದ ಭಾವನಾತ್ಮಕವಾಗಿ
ರೂಪುಗೊಳ್ಳಲು ಮನಸ ಮೇಲೆ
ಅಗಾದವಾದ ಪ್ರಭಾವ ದುಷ್ಟ ಬದುಕಿಂದ ದೂರವಾಗಿ ಸಂಸ್ಕಾರಯುತ ಸೌಜನ್ಯತೆಯ
ಹೊಂಗಿರಣವಾಗಬೇಕು.
ಕಲ್ಪನಾಅರುಣ
ಶಿಕ್ಷಕಿ ಬರೆಹಗಾರ್ತಿ