ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಶಾರ್ವರಿ ಸಂವತ್ಸರದ ಶ್ರಾವಣ ಮಾಸದ ಮೊದಲ ಸೋಮವಾರದ ಪೂಜೆ “ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ”  ಮಾರ್ಗದರ್ಶನದಂತೆ ನಡೆಯಿತು.

ಲೋಕಕಲ್ಯಾಣಾರ್ಥವಾಗಿ ಏಕಾದಶ ರುದ್ರಾಭಿಷೇಕ, ಸುವರ್ಣ ಶಂಖ ಗಂಗಾಜಲಾಭಿಷೇಕ, ಪಂಚಾಮೃತ ನವಧಾನ್ಯಭಿಷೇಕ ಗಳೊಂದಿಗೆ ವಿಶೇಷವಾಗಿ ನಡೆಯಿತು.

ಆತ್ಮಲಿಂಗಕ್ಕೆ ನವರತ್ನ ಖಚಿತ ಸುವರ್ಣ ಕವಚ ತೊಡಿಸಿ ಬಿಲ್ವಾರ್ಚನೆ, ಸುವರ್ಣ ನಾಗಾಭರಣ ಅಲಂಕಾರದೊಂದಿಗೆ, ವಿಶೇಷ ನೈವೇದ್ಯಗಳನ್ನು ಸಮರ್ಪಿಸಿ, ದೀಪಾರಾಧನೆ, ಮಹಾಮಂಗಳಾರತಿ ಜರುಗಿದವು.

ಈ ದಿನ  ಬ್ರಾಹ್ಮಿ ಮುಹೂರ್ತದಲ್ಲಿಯೇ ಪ್ರಾರಂಭಗೊಂಡ ಈ ವಿಶೇಷ ಸೇವೆಗಳನ್ನು ವೇ||ಗಣಪತಿ ಉಪಾಧ್ಯರು ನೆರವೇರಿಸಿದರು.

 
ಭೂಖಂಡವನ್ನು ಹಿಂಸಿಸುತ್ತಿರುವ ಮಹಾವ್ಯಾಧಿಯಿಂದ ಸಕಲ ಜನ ಸಮುದಾಯವನ್ನು ಕಾಪಾಡಬೇಕೆಂದು ಜಗದೀಶ್ವರನ ಪದತಲಗಳಲ್ಲಿ ಶ್ರೀದೇವಾಲಯದ ಆಡಳಿತಾಧಿಕಾರಿ ಜಿ. ಕೆ. ಹೆಗಡೆ ರವರು ಪ್ರಾರ್ಥನೆ ಮಾಡಿಕೊಂಡರು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು