ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ಎಸ್.ಜಿ.ಭಟ್ಟ ವಂದೂರು
ರೂಪವಂತರೂ ಅನೇಕರು ಸಿಗುತ್ತಾರೆ. ಗುಣವಂತರೂ ಅನೇಕರು ಸಿಗುತ್ತಾರೆ. ಆದರೆ ರೂಪ ಮತ್ತು ಗುಣ ಎರಡನ್ನೂ ಹೊಂದಿರುವವರು ವಿರಳಾತಿ ವಿರಳ. ರೂಪ ಭಗವಂತ ನೀಡಿದ ವರ. ನನಗೆ ಒಮ್ಮೊಮ್ಮೆ ಹೀಗನಿಸುತ್ತದೆ. ರೂಪ ಪಿತ್ರಾರ್ಜಿತ. ಗುಣ ಸ್ವಯಾರ್ಜಿತ. ಹಾಗಂತ ರೂಪ ಎನ್ನುವುದು ಅವರಿರುವ ಶಿಸ್ತಿನ ಆಧಾರದ ಮೇಲೂ ನಿರ್ಧರಿಸಲ್ಪಡುತ್ತದೆ. ರೂಪ ಮಾಸಬಹುದು ಆದರೆ ಗುಣ ಹಾಗಲ್ಲ. ಕೆಲವರು ಮೈಮೇಲೆ ಎಷ್ಟೇ ಆಭರಣಗಳನ್ನು ಹೇರಿಕೊಂಡರೂ ಸುಂದರವಾಗಿ ಕಾಣುವುದಿಲ್ಲ ಯಾಕೆಂದರೆ ಅವರ ಅಹಂಕಾರವನ್ನು ಗೌರವಿಸುವವರು ಯಾರೂ ಇರುವುದಿಲ್ಲ. ಹದಿನಾರರಲ್ಲಿ ಸುಂದರವಾಗಿ ಕಾಣುವುದು ನಿನ್ನ ಶ್ರೇಷ್ಠತೆಯಲ್ಲ. ಅರವತ್ತರಲ್ಲೂ ನೀನು ನಿನ್ನ ಕಾರ್ಯಗಳಿಂದ ಸುಂದರವಾಗಿ ಕಂಡರೆ ಅದೇ ನಿನ್ನ ಶ್ರೇಷ್ಠತೆ…ಎಂದು ಹಿರಿಯರೊಬ್ಬರು ಹೇಳಿದ ಮಾತು ನನಗಿನ್ನೂ ಜ್ಞಾಪಕದಲ್ಲಿದೆ. ರೂಪದಲ್ಲೂ ಗುಣದಲ್ಲೂ ಅತ್ಯಂತ ಸಿರಿವಂತರಾದ ನಮ್ಮ ಎಸ್.ಜಿ.ಭಟ್ಟ ಸರ್ ಅವರಿಗೆ ನನ್ನ ಅಕ್ಷರಗಳ ಮೂಲಕ ಇಂದು ಕೃತಜ್ಞತಾರ್ಪಣೆ ಮಾಡಬೇಕು.
ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಶ್ರೀ ಕರಿಕಾನ ಪರಮೇಶ್ವರಿ ಪದವಿಪೂರ್ವ ಮಹಾವಿದ್ಯಾಲಯ ಅರೆಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಎಸ್. ಜಿ. ಭಟ್ಟ ಸರ್ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ವಂದೂರಿನವರು. ಎಂ.ಜಿ.ಭಟ್ಟ ಮತ್ತು ಎಸ್.ಜಿ.ಭಟ್ಟ ಸಹೋದರರು ತಮ್ಮ ಜೀವನದಲ್ಲಿ ಮಾಡಿದ ಸಾಧನೆ ಅಪಾರವಾದದ್ದು. ಮೂಲತಃ ಒಬ್ಬ ಬಿಸಿನೆಸ್ ಮ್ಯಾನ್ ಆಗಿದ್ದ ನಮ್ಮ ಸರ್ ಅರ್ಥ-ಶಾಸ್ತ್ರಕ್ಕೇ ಉಪನ್ಯಾಸಕರಾಗಿದ್ದು ಒಂದು ಸೋಜಿಗ.
ನಿಜವಾಗಿ ಹೇಳುವುದಾದರೆ ನಾನು ಅರ್ಥಶಾಸ್ತ್ರದ ವಿದ್ಯಾರ್ಥಿಯಲ್ಲ. ಆದರೂ ಎಸ್.ಜಿ.ಭಟ್ಟ ಸರ್ ಪ್ರೀತಿ, ಕಾಳಜಿ, ಒಡನಾಟ ನನಗೆ ನಮ್ಮೆಲ್ಲಾ ಗುರುಗಳಂತೆ ಅವರನ್ನೂ ಶ್ರೇಷ್ಠ ಸ್ಥಾನದಲ್ಲಿಟ್ಟು ಪೂಜಿಸುವಂತೆ ಮಾಡಿದೆ. ನಾನು ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುವ ವೇಳೆಗೆ ಕಾಲೇಜಿಗೆ ಹೊಸ ಉಪನ್ಯಾಸಕರೊಬ್ಬರ ಆಗಮನವಾಗಿತ್ತು. ಪಕ್ಕಾ…… ಶಾರೂಕ್ ಖಾನ್ ರವರನ್ನೇ ಹೋಲುತ್ತಿದ್ದ ನಮ್ಮ ಸರ್ ಅನ್ನು ನಾವು ಬಹಳ ದಿನ ಅದೇ ಹೆಸರಿನಿಂದಲೇ ಸಂಬೋಧಿಸುತ್ತಿದ್ದೆವು. ( ಅವರಿಗೆ ಕೇಳದಂತೆ ) ಕಟ್ಟುಮಸ್ತಾದ ಶರೀರ…ಗಂಭೀರ ನಡಿಗೆ, ಚೆಲುವಾದ ನಗೆ…… ನಮ್ಮ ಹುಡುಗರ ಪಾಲಿಗಂತೂ ಅವರೇ ರೋಲ್ ಮೊಡೆಲ್. ನಾನು ಅವರನ್ನು ನೋಡಿ ಅವರ ಹಾಗೆ body builder ಆಗಬೇಕೆಂದು ಕನಸುಕಂಡು ಕನ್ನಡಿಯ ಮುಂದೆ ನಿಂತು practice ಮಾಡಿದ ದಿನಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ???? ದಾಡಿ ಬೆಳೆಯದ ಕಾಲಕ್ಕೇ ಬಾಡಿ ಬೆಳೆಸುವ ಅಮೋಘ ಕನಸು. ? ನಮ್ಮ ಇಡೀ ವಿದ್ಯಾಸಂಸ್ಥೆಯ ಗುರು-ಗುರುಮಾತೆಯರಲ್ಲಿ ಅತ್ಯಂತ strong ಗುರು ನಮ್ಮ ಸರ್.
ಎಸ್.ಜಿ.ಭಟ್ಟ ಸರ್ ಕಂಡರೆ ಒಂಥರಾ ಭಯ ಭಕ್ತಿ. ಕಾಲೇಜಿನ ಹುಡುಗರು ತುಟಿಕ್ ಪಿಟಿಕ್ ಎನ್ನದೇ ಸಂಸ್ಥೆಗೆ ಕೆಟ್ಟ ಹೆಸರು ತರದೇ ಹೋದದ್ದರಲ್ಲಿ ನಮ್ಮ ಸರ್ ಪಾತ್ರ ಬಹಳಷ್ಟು. ಹೈಸ್ಕೂಲಿನಲ್ಲಾಗಲೀ ಕಾಲೇಜಿನಲ್ಲಾಗಲೀ ಹುಡುಗರು ಹುಡುಗಿಯರನ್ನ ರೇಗಿಸುವದಾಗಲೀ ಅಥವಾ ಅವರ ಜೊತೆ ಅಸಭ್ಯವಾಗಿ ವರ್ತಿಸುವುದಾಗಲೀ ನಡೆಯದಿರುವುದಕ್ಕೆ ನಮ್ಮ strong ಗುರು ಎಸ್ ಜಿ ಭಟ್ಟರೇ ಮುಖ್ಯ ಕಾರಣ.
ಸ್ವಾತಂತ್ರ್ಯ ಸುವರ್ಣ ಮಹೋತ್ಸವ ನಡೆದ ವರ್ಷ ಅದು. ನಮ್ಮ ವಿದ್ಯಾರ್ಥಿಗಳ ಬಹುದೊಡ್ಡ ಮೆರವಣಿಗೆ ಸಾಗಿತ್ತು. ಈ ಸಂದರ್ಭಕ್ಕೆ ಕೆಲವು ಜನ ಕಿಡಿಗೇಡಿಗಳು ಜೋರಾಗಿ ಬೈಕ್ ಓಡಿಸಿಕೊಂಡು ರಸ್ತೆಯಲ್ಲಿ ಆಚೀಚೆ ಓಡಾಡುತ್ತಿದ್ದರು. ಅವರ ಬೈಕಿನ ಕರ್ಕಶವಾದ ಸೈಲೆನ್ಸರ್ ಧ್ವನಿ ಹಳೆಯ ಸಿನಿಮಾದ ವಿಲನ್ ಗಳನ್ನು ನೆನಪಿಸುತ್ತಿತ್ತು. ಆ ಸಂದರ್ಭಕ್ಕೆ ಒಬ್ಬಾತ ಆಕಸ್ಮಿಕವಾಗಿ ನಮ್ಮ ವಿದ್ಯಾರ್ಥಿನಿಯೊಬ್ಬಳಿಗೆ accident ಮಾಡಿ ಬಿದ್ದ. ಆ ಕ್ಷಣಕ್ಕೆ ಥಟ್ಟನೆ ಓಡಿ ಬಂದ ನಮ್ಮ ಎಸ್.ಜಿ ಭಟ್ಟ ಸರ್ ಒಂದು ಕೈಯಲ್ಲಿ ಆ ಬೈಕನ್ನೂ, ಇನ್ನೊಂದು ಕೈಯಲ್ಲಿ ಆ ಮನುಷ್ಯನನ್ನೂ ಎತ್ತಿ ನಿಲ್ಲಿಸಿದ್ದರು. ?? ಅಬ್ಭಾ ಅವರ ಶೌರ್ಯವೇ. ನಮ್ಮ ನಿಜವಾದ ಹೀರೋ ಅವರು. ವಿದ್ಯಾರ್ಥಿಗಳಿಗೆ ಹೊರಗಿನವರಿಂದ ಯಾವುದೇ ತೊಂದರೆಯಾಗುವುದಕ್ಕೂ ಅವರು ಈವರೆಗೂ ಬಿಟ್ಟಿಲ್ಲ.
ಪರೀಕ್ಷೆಯಲ್ಲಿ ಕೂಡ ಅವರು ಬಲುವೇ strict. ಆಚೀಚೆ ಕೊರಳಲ್ಲಾಡಿಸುವುದಕ್ಕೂ ಬಿಡದ ಜನ. ಒಮ್ಮೆ ನಾನು ಪಿ.ಯು.ಸಿ. second year ಪರೀಕ್ಷೆ ಬರೆಯುತ್ತಿದ್ದ ಸಂದರ್ಭ. ಡೆಸ್ಕಿನ ಮೇಲಿಟ್ಟು ಬರೆಯುವ ರೂಢಿಯಿಲ್ಲದ ನಾನು ಡೆಸ್ಕಿನ ಕೆಳಗೆ ಕಾಲ ಮೇಲೆ exam pad ಇಟ್ಟುಕೊಂಡು ಪರೀಕ್ಷೆ ಬರೆಯುತ್ತಿದ್ದೆ. ಆಗ ನಮ್ಮ ಸರ್ ಗೆ ಏನನ್ನಿಸಿತೋ ಏನೋ ನನ್ನ ಹತ್ತಿರ ಸೀದಾ ಬಂದರು. ನನ್ನ pant ಜೇಬು shirt ಜೇಬು ಎಲ್ಲವನ್ನೂ check ಮಾಡಿದರು. ಡೆಸ್ಕನ್ನೆಲ್ಲಾ ಸೂಕ್ಷ್ಮ ದರ್ಶಕ ಹಿಡಿದವರಂತೆ ಹುಡುಕಿದರು. ನನಗೆ ಒಂದು ಸಣ್ಣ ಅವಮಾನವಾದಂತೆನಿಸಿದರೂ ಉಳಿದ ವಿದ್ಯಾರ್ಥಿಗಳಿಗೆ ಇದು ಎಚ್ಚರಿಕೆ ಎನ್ನುವುದು ಸ್ಪಷ್ಟವಾಯಿತು. ಅವರಿವರು ಎನ್ನುವ ಭೇದವಿಲ್ಲ ಅವರಿಗೆ. ಪಿ.ಯು.ಸಿ ಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಾಗ ಮೊದಲು ಪ್ರಶಂಸೆ ತೋರಿದವರೂ ಅವರೇ.
ಎಸ್.ಜಿ.ಭಟ್ಟ ಸರ್ ಪ್ರಭಾವಿ ವ್ಯಕ್ತಿ. ಅವರ ಧೈರ್ಯ, ಸ್ಥೈರ್ಯ ಎಂಥವರೂ ಮೆಚ್ಚುವಂತಹುದು. ಅವರಿಂದ ಬದುಕು ಕಂಡುಕೊಂಡ ಅದೆಷ್ಟೋ ಜನರಿದ್ದಾರೆ ಇಂದು. ವಿದ್ಯಾರ್ಥಿಗಳನ್ನು ಪ್ರೇರೇಪಿಸುವದಷ್ಟೇ ಅಲ್ಲದೇ ಅವರಿಗೆ ಒಂದು ಬದುಕನ್ನು ಕಟ್ಟಿ ಕೊಡುವಲ್ಲಿಯವರೆಗೂ ಅವರು ಬೆಂಗಾವಲಾಗಿ ನಿಲ್ಲುತ್ತಿದ್ದರು. ಅಷ್ಟು ಸುಂದರವಾಗಿದ್ದರೂ ಕೂಡ ಅವರು ಒಂದೇ ಒಂದು ದಿನ ವಿದ್ಯಾರ್ಥಿಗಳ ಜೊತೆಗಾಗಲೀ ವಿದ್ಯಾರ್ಥಿನಿಯರ ಜೊತೆಗಾಗಲೀ ತೀರಾ ಸಲಿಗೆಯಿಂದ ವರ್ತಿಸಿದ್ದಿಲ್ಲ.
ಎಸ್.ಜಿ.ಭಟ್ಟ ಸರ್ ನಮ್ಮ ಗುರುಗಳು ಎನ್ನುವುದೇ ನಮಗೊಂದು ಹೆಮ್ಮೆ. ನಾನು ಒಮ್ಮೆ ಅತಿ ಅಪಾಯಕಾರಿ ಸನ್ನಿವೇಶದಲ್ಲಿ ಕಣ್ಣೀರಿಡುವ ಸ್ಥಿತಿ ತಲೆದೋರಿದಾಗ ಯಾರದೋ ಮುಖಾಂತರ ಸುದ್ದಿ ತಿಳಿದ ನಮ್ಮ ಸರ್ ಜಾಗೃತರಾಗಿ ನನ್ನನ್ನು ತಕ್ಷಣಕ್ಕೆ ಕಾಪಾಡಿದರು. ಹೆದರಬೇಡ ನಾನಿದ್ದೇನೆ ಎನ್ನುವ ಧೈರ್ಯ ನೀಡಿದರು. ನೀನು ಗಟ್ಟಿತನ ಬೆಳೆಸಿಕೊಳ್ಳಬೇಕೆಂದೂ ನಿನ್ನ ಶ್ರೇಯಸ್ಸಿನ ಪಥಕ್ಕೆ ನಾವು ಎಂದಿಗೂ ನಿಲ್ಲುತ್ತೇವೆಂದೂ ಅಭಯ ನೀಡಿದರು. ಹಿಂಸೆಗಳನ್ನೆದುರಿಸಿಯೂ ಬದುಕುವ ಪಾಠ ಹೇಳಿಕೊಟ್ಟ ಎಸ್ ಜಿ ಭಟ್ಟ ಸರ್ ನನಗೆ ಕ್ಲಾಸಿನಲ್ಲಿ ಪಾಠ ಮಾಡುವ ಸಂದರ್ಭ ಬರದೇ ಹೋದರೂ ಜೀವನದಲ್ಲಿ ಬಹುದೊಡ್ಡ ಪಾಠ ಮಾಡಿದ ಗುರುಗಳು. ಚಿಕ್ಕ ಚಿಕ್ಕ ವಿಷಯಗಳಿಗೂ ಜಗತ್ತೇ ಮುಳುಗಿ ಹೋದಂತೆ ಬೇಸರ ಮಾಡಿಕೊಳ್ಳುತ್ತಿದ್ದ ನನ್ನ depression ಅಳಿಸಿಹಾಕುವಲ್ಲಿ ನಮ್ಮ ಸರ್ ಪಾತ್ರ ಬಹಳ ದೊಡ್ಡದು.
ನಮ್ಮ ಸರ್ ಬದುಕಿನಲ್ಲೂ ಸಿರಿವಂತರು. ಹೃದಯದಲ್ಲೂ ಸಿರಿವಂತರು. ಎಸ್.ಜಿ.ಭಟ್ಟ ಸರ್ ಮನೆಯವರೂ ಕೂಡ ತುಂಬಿದ ಕೊಡ. ಇಬ್ಬರು ಮುದ್ದಾದ ಪ್ರತಿಭಾ ಸಂಪನ್ನ ಹೆಣ್ಣುಮಕ್ಕಳು. ನನ್ನನ್ನೂ ಸರಸ್ವತಿಯನ್ನೂ ಮನೆಗೆ ಕರೆಸಿಕೊಂಡು ತಾವೂ ನಮ್ಮ ಜೊತೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ನನಗೆ ಅನಿಸಿದ್ದು ಚಿನ್ನದ ಅಥವಾ ಬೆಳ್ಳಿಯ ಬಟ್ಟಲಿನಲ್ಲೇ ಊಟ ಮಾಡುವಷ್ಟು ಸಿರಿ ಸೌಭಾಗ್ಯವನ್ನು ಪಡೆದೂ ನಮ್ಮ ಸರ್ ಇಷ್ಟು ಸರಳ ಸಜ್ಜನ ಅಂತ. ಮನದುಂಬಿದ ಅವರ ಆತಿಥ್ಯವನ್ನು ನಾವು ಜೀವನಪೂರ್ತಿ ಮರೆಯುವುದಿಲ್ಲ. ಯಾಕೆಂದರೆ ನಮ್ಮ ಜೀವನದ ಆದರ್ಶ ಅವರು.
ಸಂಸ್ಥೆಯ ಮೇಲೂ ನಮ್ಮ ಗುರುಗಳಿಗೆ ಅಷ್ಟೇ ಅಭಿಮಾನ. ತನ್ನದೇ ಸ್ವಂತ ಹಣದಿಂದ ಸಂಸ್ಥೆಗಾಗಿ ಒಂದು ಕೊಠಡಿಯನ್ನೇ ನಿರ್ಮಾಣ ಮಾಡಿ ಕೊಟ್ಟ ಶ್ರೇಯಸ್ಸು ನಮ್ಮ ಗುರುಗಳದ್ದು. ಸಂಸ್ಥೆ ನಮಗೆ ಗೌರವಯುತವಾಗಿ ಬದುಕುವುದಕ್ಕೊಂದು ಹಾದಿ ಮಾಡಿಕೊಟ್ಟಿರುವಾಗ ನಾವೂ ಸಂಸ್ಥೆಯನ್ನು ಗೌರವಯುತವಾದ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂಬ ಅವರ ಕರ್ತವ್ಯಪ್ರಜ್ಞೆಯನ್ನು ನಾನು ಗೌರವಿಸುತ್ತೇನೆ. ನಮ್ಮ ಸರ್ ತನು ಮನ ಧನ ಗಳಿಂದ ಅದೆಷ್ಟು ಜನರಿಗೆ ನೆರವಾಗುತ್ತಾರೆ. ಕೈಯೆತ್ತಿ ಕೊಡುವ ಸೌಭಾಗ್ಯ ಸಂಪತ್ತು ಹಾಗೆಯೇ ಸೌಂದರ್ಯ ಎಲ್ಲವನ್ನೂ ಪಡೆದ ಭಾಗ್ಯವಂತರು ನಮ್ಮ ಗುರುಗಳು.
ಎಸ್.ಜಿ.ಭಟ್ಟ ಸರ್ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಅರ್ಥಶಾಸ್ತ್ರ ಕಲಿತು ಜೇಬು ತುಂಬಿಸಿಕೊಂಡಿದ್ದಾರೆ. ?? ಅರ್ಥ ಶಾಸ್ತ್ರ ಕಲಿಯದ ನಾನು ಪದಗಳ ಅರ್ಥ ಹುಡುಕುತ್ತಾ ಪದಾರ್ಥ ಚಿಂತಾಮಣಿ ಮಾಡುತ್ತಿದ್ದೇನೆ. ??? ಚಾಣಕ್ಯನ ನಡೆ ಬೇಕು ಜೀವನಕ್ಕೆ. ಅದನ್ನು ನಾನು ಕಲಿಯುವುದರಲ್ಲಿ ಹಿಂದೆ ಬಿದ್ದೆ. ?? ಕುಳಿತುಕೊಳ್ಳುವುದಕ್ಕೂ ಪುರುಸೊತ್ತಿಲ್ಲದ ನಮ್ಮ ಸರ್ ಕಠಿಣ ಪರಿಶ್ರಮಿ. ಅವರ ಕಾರ್ಯ ವೈಖರಿ ಎಂಥವರಿಗೂ ಮಾದರಿ. ದೇವರು ಅವರಿಗೆ ಮಾತ್ರ ದಿನಕ್ಕೆ 48 ಗಂಟೆ ಕೊಟ್ಟಿದ್ದಾನೆ ಎಂದು ನನಗನಿಸುತ್ತಿರುತ್ತದೆ. ಆರಕ್ಕೇರದ ಮೂರಕ್ಕಿಳಿಯದ ನಮ್ಮ ಸರ್ ಗೆ ಬಡ ವಿದ್ಯಾರ್ಥಿಯ ಬರಹವನ್ನು ಓದುವಷ್ಟು ಕಾಲವಕಾಶವನ್ನು ಇಂದು ಮೀಸಲಾಗಿರಿಸು ಎಂದು ಭಗವಂತನನ್ನು ಪ್ರಾರ್ಥಿಸುತ್ತಾ ಅವರಿಗೆ ಜಯ ಕೋರುತ್ತೇನೆ.
ಸದ್ಗುರು ಶ್ರೀಧರರ ಆಶೀರ್ವಾದ ಎಸ್ ಜಿ ಭಟ್ಟ ಸರ್ ಹಾಗೂ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟ ದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಎಸ್.ಜಿ.ಭಟ್ಟ ಸರ್ ಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???