ಉತ್ತರ ಕನ್ನಡದ ಕೆಲವು ತಾಲೂಕುಗಳಲ್ಲಿ ಇಂದಿನ ಕರೋನಾ ವರದಿ ಇಲ್ಲಿದೆ. ತಾಲೂಕಿನ ವರದಿಗಳನ್ನು ಆಧರಿಸಿ ಮಾಹಿತಿಯನ್ನು ಹೊಂದಿಸಲಾಗಿದ್ದು, ತಾಲೂಕಿನ ಯಾವ ಸ್ಥಳಗಳಲ್ಲಿ ಕಾಣಿಸಿಕೊಂಡಿದೆ ಎನ್ನುವುದರ ಡೀಟೇಲ್ಸ್ ಇಲ್ಲಿದೆ.

ಕುಮಟಾದಲ್ಲಿ ಐದು ಜನರಿಗೆ ಕೊರೋನಾ

ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 5 ಕರೊನಾ ಪ್ರಕರಣ ದಾಖಲಾಗಿದೆ. ಯಾಣದ 45 ವರ್ಷದ ಪುರುಷ ಮತ್ತು ಕುಮಟಾದ 62 ವರ್ಷದ ಮಹಿಳೆ, ಹೆರವಟ್ಟಾದ 62 ವರ್ಷದ ಪುರುಷ, 29 ವರ್ಷದ ಯುವಕ, ಹುಬ್ಬಣಗೇರಿಯ 35 ವರ್ಷದ ಪುರುಷನಲ್ಲಿ ಕೊರೋನಾ ಸೋಂಕು ದೃಪಟ್ಟಿದೆ.

RELATED ARTICLES  ೨೦೨೧ ನೇ ಸಾಲಿನ “ವಿಶ್ವನಾಥ ಸಂಸ್ಕೃತಿ ಪುರಸ್ಕಾರಂ”

ಹೊನ್ನಾವರದಲ್ಲಿ ಎಂಟು ಕೇಸ್

ಹೊನ್ನಾವರ ತಾಲೂಕಿನಲ್ಲಿ ಇಂದು ಎಂಟು ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಸಾಲಕೋಡಿನ 48 ವರ್ಷದ ಪುರುಷ, 14 ವರ್ಷದ ಬಾಲಕಿ, ಹೊಸಾಕುಳಿಯ 42 ವರ್ಷದ ಪುರುಷ, ಮುಗ್ವಾದ 41 ವರ್ಷದ ಮಹಿಳೆ, ಗುಡ್ಡೆಬಾಳದ 42 ವರ್ಷದ ಪುರುಷ, ಹೊನ್ನಾವರ ಪಟ್ಟಣದ ಜೋಗಮಟ್ಟದ 72 ವರ್ಷದ ಪುರುಷ, 42 ವರ್ಷದ ಪುರುಷ, 64 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

RELATED ARTICLES  ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

 

ಅಂಕೋಲಾದಲ್ಲಿ ಒಂದು ಕೇಸ್.

ಅಂಕೋಲಾ ತಾಲೂಕಿನಲ್ಲಿ ಶುಕ್ರವಾರ 1 ಹೊಸ ಕೊವಿಡ್ ಕೇಸ್ ಪತ್ತೆಯಾಗಿವೆ. ಬಳಲೆ ವ್ಯಾಪ್ತಿಯ 20ರ ಯುವತಿಯಲ್ಲಿ ಸೋಂಕು ಲಕ್ಷಣಗಳು ಧೃಡಪಟ್ಟಿವೆ.

ಶಿರಸಿಯಲ್ಲಿಂದು 6 ಕೇಸ್:

ಶಿರಸಿ ತಾಲೂಕಿನಲ್ಲಿ ಶುಕ್ರವಾರ 6 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ನಗರದ ದೇವಿಕೆರೆಯಲ್ಲಿ 1, ಕರಿಗುಂಡಿ ರೋಡಿನಲ್ಲಿ 1, ನೆಹರು ನಗರದಲ್ಲಿ 1, ಬನವಾಸಿ ಗುಡ್ನಾಪುರದಲ್ಲಿ 1, ಕಡವೆಯಲ್ಲಿ 2 ಕೇಸ್ ದೃಢವಾಗಿದೆ. ಐವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.