ಸಮಾಜ ಸೇವೆಯನ್ನು ಮೂಲ ಗುರಿಯಾಗಿಸಿಕೊಂಡ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) ಪ್ರಥಮ ವರ್ಷದ ಸಂಭ್ರಮ.

ಹೌದು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಒಳ್ಳೆಯ ಕೆಲಸವನ್ನು ಮಾಡಬಹುದು ಎಂಬುದಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) ಸಾಕ್ಷಿಯಾಗಿದೆ.

ಕಳೆದ ಆಗಸ್ಟ್ ೧೪ ೨೦೧೬ ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶಿರ್ವಾದದೊಂದಿಗೆ ಶ್ರೀಯುತ ನವೀನ್ ಪಿ ಮಿಜಾರ್ ಇವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಈ ಟ್ರಸ್ಟ್ ಒಂದು ವರ್ಷದಲ್ಲಿ ಸುಮಾರು ೨೪ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಮಾಜದ ಅಶಕ್ತರ ಕಣ್ಣೀರನ್ನು ಒರೆಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನರ ಮಣ್ಣನೆಗೆ ಪಾತ್ರವಾಗಿದೆ.
ಟ್ರಸ್ಟ್ ನ ಅಧ್ಯಕ್ಷರಾದ ನವೀನ್ ಪಿ ಮಿಜಾರ್ ಅವರು ಹೇಳುವುದೆನೆಂದರೆ “ನಾವು ಯಾರೂ ಶ್ರೀಮಂತರಲ್ಲ ನಮ್ಮಲ್ಲಿ ಇದ್ದದರಲ್ಲಿ ಅಲ್ಪ ಪ್ರಮಾಣದ ಹಣವನ್ನು ಈ ಸಮಾಜ ಸೇವೆಗಾಗಿ ಅರ್ಪಿಸುತ್ತಿದ್ದೆವೆ.ಈ ಕಾರ್ಯದಿಂದಾಗಿ ನಮ್ಮ ಮನಸ್ಸಿಗೆ ತೃಪ್ತಿಯಿದೆ .ನಮ್ಮ ಈ ಕಾರ್ಯದಿಂದ ನಮಗೆ ಏನು ಕಡಿಮೆಯಾಗಿಲ್ಲ ನಾವೆಲ್ಲ ಹೆಚ್ಚಿನ ಸಮಾಜ ಸೇವೆ ಮಾಡಲು ನಮಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶಿರ್ವಾದ ಇದೆ .ಎಂದು ಟ್ರಸ್ಟ್ ನ ಅಧ್ಯಕ್ಷರಾದ ನವೀನ್ ಅವರ ಮನದಾಳದ ಮಾತು.
ದಿನಾಂಕ ೨೭.೮.೨೦೧೭ ಭಾನುವಾರದಂದು ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಫೇಸ್ಬುಕ್ ಮತ್ತು ವಾಟ್ಸಪ್ ತಂಡದ ಏಳನೇ ತುರ್ತು ಸೇವಾ ಯೋಜನೆಯ ಫಲಾನುಭವಿಯಾದ, ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಬಂಟ್ವಾಳ ತಾಲೂಕು ಕನಪಾದೆ ನಾವೂರು ನಿವಾಸಿ ದಿ. ಶೀನಾ ಮತ್ತು ರತ್ನ ಇವರ ಮಗ ಕೃಷ್ಣಪ್ಪ ಇವರ ಚಿಕಿತ್ಸೆಗೆ ರೂ.10,000 ಚೆಕ್ ಅನ್ನು ಇಂದು ಕೃಷ್ಣಪ್ಪರವರ ಮನೆಯಲ್ಲಿ
ಹಸ್ತಾಂತರಿಸಲಾಯಿತು.

RELATED ARTICLES  ತೃಪ್ತಿ -ನೆಮ್ಮದಿ, ಸಂತೋಷ ಸಮಾಧಾನದ 5 ನೇ ಭಾಗ

ಈ ಸಂದರ್ಭದಲ್ಲಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್® ಇದರ ನಿರ್ವಾಹಕರುಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಇನ್ನಷ್ಟು ಸಮಾಜಮುಖಿ ಕಾರ್ಯವನ್ನು ಮಾಡಲು ದಾನಿಗಳ ನೆರವಿನಿ ಸಹಾಯವನ್ನು ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಬಯಸುತ್ತಿದೆ.

RELATED ARTICLES  ಕನವರಿಕೆ (ಉಮೇಶ ಮುಂಡಳ್ಳಿಯವರು ಬರೆದ ಕವನ)

ವರದಿ
ಸಂತೋಷ್ ಪೂಜಾರಿ ಪಾಂಡವರ ಕಲ್ಲು
೭೮೯೯೫೩೦೩೪೨