ಯಲ್ಲಾಪುರ: ಪಟ್ಟಣದ ದೇವಿ ಮೈದಾನ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಫೊಟೊ ಮತ್ತು ವಿಡಿಯೋಗ್ರಾಫರ್ಸ್ ಸಂಘದ ವತಿಯಿಂದ ಮಕ್ಕಳಿಗಾಗಿ ಏರ್ಪಡಿಸಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯ ವಿಜೇತರಿಗೆ ಸಂಘದ ಅಧ್ಯಕ್ಷ ಎಸ್. ಜಿ. ಭಟ್ಟ ಬಹುಮಾನ ವಿತರಿಸಿದರು. ಗೌರವಾಧ್ಯಕ್ಷ ಜಿ. ಆರ್. ಹೆಗಡೆ, ಕಾರ್ಯದರ್ಶಿ ಗಣೇಶ ಪತ್ತಾರ, ಖಜಾಂಚಿ ನಾಗರಾಜ ಬದ್ದಿ, ಸದಸ್ಯರಾದ ಪ್ರಭಾಕರ ಥಾಮಸ್, ಜಗದೀಶ ಬೋರ್ಕರ್ ಇತರರಿದ್ದರು.