Home Food ಏನಿದು ಸಮಾಧಿ ಸ್ಥಿತಿ? ಇದಕ್ಕೆ ಉತ್ತರ ಶ್ರೀಧರರ ನುಡಿಯಲ್ಲಿದೆ.

ಏನಿದು ಸಮಾಧಿ ಸ್ಥಿತಿ? ಇದಕ್ಕೆ ಉತ್ತರ ಶ್ರೀಧರರ ನುಡಿಯಲ್ಲಿದೆ.

ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ.ಪುಣೆ

 

ಯಾವ ಆನಂದ ಸ್ವಸಂವೇದ್ಯ ಮತ್ತು ಸ್ವಮಾತ್ರ ಇರುವದೋ, ಅದೇ ‘ಆತ್ಮಾ’ ಅಂದರೆ ‘ನಾನು’ ಎಂಬ ಪ್ರಜ್ಞೆಯ ಲಕ್ಷವೆಂದು ಅರಿತು, ತದಾಕಾರ ಸ್ಥಿತಿಯಲ್ಲಿ, ಇತರ ಯಾವುದೇ ಭಾವ ಏಳದಂತೆ ಹೆಚ್ಚೆಚ್ಚು ವೇಳೆ ಇರುವ ಅಭ್ಯಾಸವೇ ಸಮಾಧಿಯ ಅಭ್ಯಾಸವೆಂದು ಹೇಳಲ್ಪಡುತ್ತದೆ.
(ಇಸವಿ ಸನ ೧೯೬೨ರಲ್ಲಿ ಮುಂಬಾಯಿ ವಿಮಾನತಳದಲ್ಲಿ ಶ್ರೀ ಪೆಂಢಾರಕರ, ವಿಲೇಪಾರ್ಲೆಯವರ ಪ್ರಶ್ನೆಗಳಿಗೆ ಸ್ವಾಮಿಗಳು ಬರೆದು ತಿಳಿಸಿದ ಉತ್ತರ)

||ಶ್ರೀರಾಮ ಸಮರ್ಥ||

ಶ್ರೀರಾಮ ಪೆಂಢಾರಕರನಿಗೆ ಆಶೀರ್ವಾದ,
ಇದು ನೋಡು! ಶಾಶ್ವತ ವಸ್ತುವಿನ ಶೋಧಕ್ಕೆ ಹೊರಟ ಜೀವಕ್ಕೆ ಸ್ವರೂಪದ ಪರಿಚಯವಾಗಿ ಆನಂದಘನ ಸ್ವರೂಪದ ಅನುಭವದಲ್ಲಿ ಅವನು ಕರಗಿ ಒಂದಾಗಿರಬೇಕು; ಇದೇ ಉದ್ದೇಶದಿಂದ ಶ್ರೀಗುರು ಶಿಷ್ಯನ ಮೇಲೆ ಅನುಗ್ರಹ ಮಾಡುವನು.
‘ಸಾಧಕ ಭಕ್ತಿಯಿಂದ ನಮಸ್ಕಾರ ಮಾಡುವನು| ಅವನ ಚಿಂತೆ ಸಾಧುವಿಗೆ ತಗಲಿತು| ಸುಗಮಪಥದಲ್ಲಿ ಕರೆದೊಯ್ಯುವನು| ಅವನೆ ಆ ಕ್ಷಣದಿಂದಲೇ||’
ನಿತ್ಯನಿಯಮದ ಜಪ-ಧ್ಯಾನ ಪಾರಾಯಣಗಳಿಂದ ಸಾಧಕನ ಭೂಮಿಕೆ ಉನ್ನತವಾಗುತ್ತಾ ಹೋಗುತ್ತದೆ. ಶ್ರೀಗುರು ಅಂದರೆ ಈ ಚರಾಚರ ವಿಶ್ವದ, ಕೊರೆದು ರಚಿಸಿದ ಸತ್ಯ ಆನಂದರೂಪವೇ. ಇದಕ್ಕೇ ‘ಜಗತ್ಕಾರಣ ಅದ್ವಯ ಬ್ರಹ್ಮ’ ಎನ್ನುತ್ತಾರೆ. ಎರಡನೆಯದು ಎಂದು ಅಲ್ಲಿ ಏನೂ ಇಲ್ಲ. ಈ ರೀತಿ ‘ನಮ್ಮ ನಿಷ್ಪ್ರಪಂಚ ಆನಂದರೂಪ ಅಂದರೆ ಶ್ರೀಗುರು’ ಎಂದು ನಿಷ್ಠೆ ಪಾಲಿಸಿ, ಆ ಆನಂದದಲ್ಲೇ ಸಮರಸವಾಗಿ ಇರುವದೇ ಅವರ ಜಪ-ಧ್ಯಾನಾದಿಕಗಳ ತುಟ್ಟ ತುದಿ ಎಂದು ಗಣಿಸಬೇಕು.
‘ವಾಸನಾತ್ಮಕಂ ಮನಃ| ಸಂಕಲ್ಪಾತ್ಮಕಂ ಮನಃ’
ಈ ರೀತಿ ನಮ್ಮ ಪೂರ್ವಾಚಾರ್ಯರು ಮನದ ವ್ಯಾಖ್ಯೆ ಮಾಡಿದ್ದಾರೆ. ಆದರೆ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಹೇಳುವದಿದ್ದರೆ ‘ಮನನಾನ್ಮನಃ’ ಅಂದರೆ, ಸ್ವರೂಪಾನಂದದ ಕೇವಲ ಅರಿವಿನಿಂದಲೇ, ತತ್ವಜ್ಞಾನದ ಅಥವಾ ಆತ್ಮಜ್ಞಾನದ ದೃಢ ನಿಶ್ಚಯ ಅಂದರೇನೇ ‘ಮನ’ ಎಂದು ಹೇಳಬಹುದು. ಕೇವಲ ಆನಂದದಲ್ಲಿಯೇ ಸಮರಸವಾಗಿರುವ ‘ಅರಿವು’ ಅಂದರೇ ‘ಮನ’ ಎಂದು ಜ್ಞಾನಧ್ಯಾನಾಭ್ಯಾಸೀ ಸಾಧಕನು ಗ್ರಹಿಸಬೇಕು. ಯಾವ ಆನಂದ ಸ್ವಸಂವೇದ್ಯ ಮತ್ತು ಸ್ವಮಾತ್ರ ಇರುವದೋ, ಅದೇ ‘ಆತ್ಮಾ’ ಅಂದರೆ ‘ನಾನು’ ಎಂಬ ಪ್ರಜ್ಞೆಯ ಲಕ್ಷವೆಂದು ಅರಿತು, ತದಾಕಾರ ಸ್ಥಿತಿಯಲ್ಲಿ, ಇತರ ಯಾವುದೇ ಭಾವ ಏಳದಂತೆ ಹೆಚ್ಚೆಚ್ಚು ವೇಳೆ ಇರುವ ಅಭ್ಯಾಸವೇ ಸಮಾಧಿಯ ಅಭ್ಯಾಸವೆಂದು ಹೇಳಲ್ಪಡುತ್ತದೆ. ದೇಹದಲ್ಲಿ ಅಂತಃಕರಣದ ಸ್ಥಾನ ಮೂಲಾಧಾರ, ಚಿತ್ತದ ಸ್ಥಾನ ಹೊಕ್ಕಳು, ಅಹಂಕಾರದ ಸ್ಥಾನ ಹೃದಯ(ಎದೆ), ಮನಸ್ಸಿನ ಸ್ಥಾನ ಕಂಠ ಮತ್ತು ಬುದ್ಧಿಯ( ‘ನಾನು’ ಎಂಬ ಸ್ಮೃತಿಯ) ಸ್ಥಾನ ಮುಖ ಹೀಗೆ ವರ್ಗೀಕರಣವಿದೆ. ನಿನ್ನ ಪ್ರಶ್ನೆ ‘ಚಿತ್ತದ ಏಕಾಗ್ರತೆಯ ಸ್ಥಾನಗಳು ಯಾವ ಯಾವದಿವೆ?’ ಇದರ ಬಗ್ಗೆ ವಿಚಾರ ಮಾಡಲು ಇರಬೇಕು. ಮೂಲಾಧಾರ, ನಾಭಿ, ಹೃದಯ, ನಾಸಿಕಾಗ್ರ, ಭ್ರೂಮಧ್ಯ, ಬ್ರಹ್ಮರಂಧ್ರ ಇವು ಮುಖ್ಯ ಸ್ಥಳಗಳು. ಆ ಸ್ಥಳಗಳಲ್ಲಿ ಧ್ಯಾನ ಮಾಡುವದರಿಂದ ಚಿತ್ತದ ಏಕಾಗ್ರತೆ ಶೀಘ್ರದಲ್ಲಿ ಆಗುತ್ತದೆ. ಎರಡನೆಯ ಧಾರಣೆಯ ಪ್ರಕಾರವೆಂದರೆ, ತರಂಗದಿಂದ ನೀರು ಯಾವ ರೀತಿ ಇರುತ್ತದೆಯೋ ಅದೇ ರೀತಿ, ‘ಎಲ್ಲ ವೃತ್ತಿಗಳಿಂದ ಒಂದೇ ಒಂದು ಚಿದಾನಂದ ಸ್ವರೂಪ ವ್ಯಾಪಿಸಿಕೊಂಡಿದೆ’, ಎಂಬ ತತ್ವಜ್ಞಾನದಿಂದ, ವೃತ್ತಿಗಳಲ್ಲಿಯ ನಾಮಸ್ವರೂಪಾದಿಕಗಳ ತೋರುವಿಕೆಯನ್ನು ತೊರೆದು, ಕೇವಲ ಆನಂದ ಸ್ವರೂಪದ ಸಂವೇದನೆಯನ್ನಷ್ಟೇ ಉಳಿಸಿಕೊಳ್ಳುವದು.
(ಈ ಪತ್ರ ಮುಂದುವರಿಯುವದು)