ಕುಮಟಾ: ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ವರ್ಷಪ್ರತಿಯಂತೆ 10 ನೇ ವರ್ಗದ ವಿದ್ಯಾರ್ಥಿಗಳಿಂದ ಸರಸ್ವತಿ ಪೂಜೆ ನಡೆಸಲಾಯಿತು. ಹಿರೇಗುತ್ತಿ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶಿವಾನಂದ ಭಟ್ ಪೂಜಾ ಕಾರ್ಯ ನೆರವೇರಿಸಿಕೊಟ್ಟರು. ನಂತರ ಪ್ರಸಾದ ವಿತರಿಸಲಾಯಿತು. ಸಿಹಿ ಹಂಚಲಾಯಿತು.

ಸರಸ್ವತಿ ಪೂಜೆಯನ್ನು 10 ನೇ ವರ್ಗದ ಶಿಕ್ಷಕರಾದ ಎನ್ ರಾಮು ಹಿರೇಗುತ್ತಿ ಮತ್ತು ಶಿಲ್ಪಾ ವಿ ನಾಯಕ ಮಾರ್ಗದರ್ಶನದಲ್ಲಿ ನಡೆಯಿತು. ವಿದ್ಯಾರ್ಥಿ ಪ್ರತಿನಿಧಿ ಸನಿದ ನಾಯಕ, ಶಬರೀಶ, ರಾಘವೇಂದ್ರ, ಚೇತನ, ಪ್ರಥಮ, ನಾಗಶ್ರೀ, ಸ್ವಾತಿ, ಶೃತಿ, ಕುಮುದಾ, ನಿರ್ಮಲಾ ಹಾಗೂ 10 ನೇ ವರ್ಗದ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಪೂಜಾ ಕಾರ್ಯದಲ್ಲಿ ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ, ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಮಹಾದೇವ ಗೌಡ, ಬಾಲಚಂದ್ರ ಹೆಗಡೆಕರ್, ಜಾನಕಿ ಗೊಂಡ, ಇಂದಿರಾ ನಾಯಕ, ಕವಿತಾ ಅಂಬಿಗ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು.

RELATED ARTICLES  ಹೊಸಾಡ ಗೋ ಶಾಲೆಯಲ್ಲಿ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ.

ವರದಿ:ಎನ್.ರಾಮು.ಹಿರೇಗುತ್ತಿ