“ಉತ್ಸವ ಪ್ರೀಯಾ ಹಿ ಮನುಷ್ಯಃ” ಎಂದು ಕಾಳಿದಾಸ ವಿಕ್ರಮೊರ್ವಶಿಯದಲ್ಲಿ ಹೇಳಿರುವಂತೆ ಸಕಲ ಮಾನವರು ಉತ್ಸವ ಪ್ರಿಯರಾಗಿದ್ದು ಮಾನವನು ಸೌಖ್ಯಕ್ಕಾಗಿ ಮನರಂಜನೆಗಾಗಿ , ಆತ್ಮೀಯರನ್ನು ಕೂಡಿಕೊಳ್ಳಲು ಸಂಘಟನೆಗಳಿಗಾಗಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತ ಬಂದಿದ್ದಾನೆ. ಇದೇ ರೂಪದಲ್ಲಿ ಬೆಳಕಿಗೆ ಬಂದು ನಾಡಿನಾದ್ಯಂತ ತನ್ನದೇ ಆದ ಮೆರುಗನ್ನು ಪಡೆದು ವೈಶಿಷ್ಟ್ಯಪೂರ್ಣವಾಗಿರುವಂತ ಹಬ್ಬಗಳಲ್ಲಿ ಸುಗ್ಗಿಹಬ್ಬವು ಒಂದಾಗಿದೆ. ವಿಶೇಷವಾಗಿ ಅಂಕೋಲಾದಲ್ಲಿ ನಡೆಯುವ ಹಾಲಕ್ಕಿಗಳ ಸುಗ್ಗಿ ಕುಣ ತ ವೈಶಿಷ್ಠಪೂರ್ಣವಾದದ್ದು.
ಶಿವರಾತ್ರಿ ಹಬ್ಬದ ನಂತರ ಫಾಲ್ಗುಣ ಮಾಸದಲ್ಲಿ ಬರುವ ಹಬ್ಬವೇ ಸುಗ್ಗಿಹಬ್ಬ. ಈ ಸಮಯದಲ್ಲಿ ರೈತರು ತಮ್ಮ ಪಾಲಿನ ಕೃಷಿ ಕೆಲಸವನ್ನೆಲ್ಲ ಮುಗಿಸಿಕೊಂಡು ಮಳೆಗಾಲಕ್ಕೆ ಅಗತ್ಯವಾದ ಧಾನ್ಯಗಳನ್ನು ಹಾಗೂ ಇತರೆ ಸಾಮಗ್ರಿಗಳಾದ ಉರುವಲಿಗೆ ಬೇಕಾದ ಸೌದೆ, ತರಗೆಲೆ, ಮಿಡಿ ಉಪ್ಪಿನಕಾಯಿ, ಒಣಮೀನು, ಒಣಶೆಟ್ಲಿ, ಹಪ್ಪಳ, ಸಂಡಿಗೆ ಇತ್ಯಾದಿ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗಿಕೊಂಡಿದ್ದು, ತಮ್ಮ ಬಿಡುವಿನ ಅವದಿಯಲ್ಲಿ ಬರುವ ಈ ಹಬ್ಬವನ್ನು ಅತೀ ವಿಜ್ರಂಭಣೆಯಿಂದ ಆಚರಿಸುತ್ತಾರೆ. ಅದರಲ್ಲು ಉತ್ತರ ಕನ್ನಡದಲ್ಲೇ ಹೆಚ್ಚಾಗಿ ಕಂಡುಬರುವ ಹಾಲಕ್ಕಿ ಒಕ್ಕಲಿಗರಿಗಂತು “ವಿಶೆಷವಾದಹಬ್ಬ” ಈ ಹಬ್ಬದಲ್ಲಿ ಅತೀ ಮುಖ್ಯವಾದುದ್ದು ಸುಗ್ಗಿಕುಣ ತ. ಹಾಲಕ್ಕಿಗಳ ಸುಗ್ಗಿ ಎಂದರೆ ಊರಿನ ಜನರಿಗೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ.
ಪರಂಪರಾಗತವಾಗಿ ಬಂದ ಸುಗ್ಗಿಯನ್ನು ಏಳಿಸುವುದು ಹಾಲಕ್ಕಿ ಒಕ್ಕಲಿಗರಿಗೆ ಹಿರಿಮೆಯ ಸಂಗತಿ. ಹಬ್ಬಕ್ಕೆ ಹತ್ತರಿಂದ ಹದಿನೈದು ದಿನ ಬಾಕಿ ಇರುವಾಗಲೇ ಸಮೂದಾಯದ ಗೌಡರು, ಬುದವಂತ ಕೋಲಕಾರ ಇವರೆಲ್ಲರ ಸಮ್ಮುಖದಲ್ಲಿ ಸುಗ್ಗಿ ಏಳಿಸುವ ವಿಷಯವಾಗಿ ಚರ್ಚಿಸಲಾಗುತ್ತದೆ. ಹಾಗಂತ ಸುಗ್ಗಿ ಏಳಿಸುವುದು ಅಷ್ಟು ಸುಲಭದ ಮಾತಲ್ಲ. ಸುಗ್ಗಿ ಏಳಿಸಿದ ಮೇಲೆ ಜಾಗರಣಕ್ಕೆ ಏಳೆಂಟು ದಿನಗಳ ಕಾಲ ವ್ಯವಸ್ಥೆ ಮಾಡಬೆಕಾಗುತ್ತದೆ. ಇದರ ಜವಾಬ್ದಾರಿಯನ್ನು ಬುಧವಂತರು ವಹಿಸಿಕೊಳ್ಳುವರು. ಸುಗ್ಗಿಯ ಮಕ್ಕಳು 51, 101 ಹೀಗೆ ಅವರವರ ಸಾಮಥ್ರ್ಯಕ್ಕನುಗುಣವಾಗಿ ಗೊಂಡೆಗಳ ತುರಾಯಿ ಕಟ್ಟಲು ಮುಂದಾಗುತ್ತಾರೆ. ಸುಗ್ಗಿ ಮಕ್ಕಳಿಗೆ ಅಗತ್ಯವಿರುವ ಹಣೆಕಟ್ಟು , ಜರಿಯ ಅಂಚನ್ನು ಹೊಂದಿರುವಂತ ಸೊಂಟದ ಉಡುಗೆ, ಹಳದಿ-ಕೆಂಪು, ಹಸಿರು-ಕೆಂಪು. ಕಪ್ಪು-ಕೆಂಪು ಹೀಗೆ ತೀರಾ ಘಾಡ ಬಣ್ಣದ ಉಡುಗೆಗಳನ್ನು ಧರಿಸುತ್ತಾರೆ. ಕುತ್ತಿಗೆಯಲ್ಲಿ ಒಂದೆರಡು ಮುತ್ತಿನಹಾರ, ಕಾಲ್ಗೆಜ್ಜೆ ವಿಶೇಷವಾಗಿ ಕಂಡುಬರುತ್ತದೆ. ಇವರಿಗೆ ಹಿಮ್ಮೇಳವಾಗಿ ಗುಮಟೆಪಾಂಗು (ವಿಶೇಷವಾದ ಗ್ರಾಮೀಣ ವಾದ್ಯ) ಇದ್ದೆ ಇರುತ್ತದೆ.
ಸುಗ್ಗಿಯ ಮಕ್ಕಳು ಹಬ್ಬದ ದಿನಕ್ಕಿಂತ ನಾಲ್ಕೈದು ದಿನ ಮುಂಚಿತವಾಗಿ ಗೌಡರ ಮನೆಯ ಮಂಡದ ಹತ್ತಿರ ಪೂಜೆ ಪುನಸ್ಕಾರಗಳನ್ನು ನೇರವೇರಿಸಿ ನಂತರ ಕರ್ರದೇವರ ಕಟ್ಟೆಯ ಹತ್ತಿರ ಮೊದಲ ಕೋಲನ್ನು ಹೊಡೆದು ಹಕ್ಕಿನ ಮನೆಗಳೆಂದು ಕರೆಯಲ್ಪಡುವ ಗಾಂವಕರಮನೆ, ಬುಧವಂತರ ಮನೆ, ಕೋಲಕಾರರ ಮನೆಗಳಲ್ಲಿ ಗೌರವದ ಕುಣ ತಗಳನ್ನು ಕುಣ ಯುತ್ತಾರೆ. ಮೂಲಸ್ಥಳದಲ್ಲಿ ಎಡಗೈಯಲ್ಲಿ ಕುಂಛ, ಬಲಗೈಯಲ್ಲಿ ಪುಟ್ಟ ಕೋಲು ಹಿಡಿದುಕೊಂಡು ಕುಂಛದ ಬುಡಕ್ಕೆ ಕೋಲಿನ ತುದಿಯನ್ನು ತಟ್ಟುತ್ತ ಅವರದೇ ಸಾಂಪ್ರದಾಯಿಕ ಹಾಡಾದ ಹೋ….. ಹೋ….. ಹೋ…..ಚೋ ಹಾಡಿನೊಂದಿಗೆ ಕುಣ ತವನ್ನು ಪ್ರಾರಂಭಿಸುವರು. ಕೊನೆಯ ಹೆಜ್ಜೆಗಳನ್ನು ಕುಣ ವಾಗ ಆರತಿ ತಟ್ಟೆಯನ್ನು ಹಿಡಿದು ಕುಣ ಯುವರು ಆಗ ಹಕ್ಕುದಾರರ ಮನೆಗೆ ಸಂಬಂಧಪಟ್ಟ ಹಿರಿಯರು ಗೌರವ ಪೂರ್ವಕವಾಗಿ ಕಾಣ ಕೆಗಳನ್ನು ಇಡುವರು.ಅದು ಸುಗ್ಗಿ ಮಕ್ಕಳಿಗೆ ಮೀಸಲು. ಸುಗ್ಗಿಮ್ಯಾಳದವರ ಜೊತೆಯಲ್ಲಿ ಒಂದೆರಡು ಕರಡಿ ಮಕ್ಕಳು ಇದ್ದೆ ಇರುತ್ತಾರೆ. ಮಕ್ಕಳಿಗೆಲ್ಲ ಮನರಂಜನೆ ನೀಡುವವರು ಇವರೇ. ಇವರ ವೇಷ-ಭೂಷಣಗಳೇ ವಿಶೇಷ. ಇವರು ಧರಿಸುವ ಕರಡಿ ರೊಣೆಯನ್ನು ಕತ್ತದ ಸುಂಬಿಂದ ಮಾಡಿರುತ್ತಾರೆ.
ಹೀಗೆ ಸಂಪ್ರದಾಯ ಬದ್ದವಾಗಿ ಆರಂಭವಾದ ಸುಗ್ಗಿಹಬ್ಬ ಹೋಳಿ ಹುಣ ್ಣಮೆಯ ಮೊದಲ ದಿನ ಮತ್ತೆ ಪುನಃ ಕರ್ರದೇವರ ಕಟ್ಟೆಯ ಹತ್ತಿರ ಬಂದು ಕೋನೆಯ ಕೋಲನ್ನು ಹೊಡೆದು ಕುಂಛವನ್ನು ಕೆಳಗಿಳಿಸುತ್ತಾರೆ, ಅದೇ ದಿನ ರಾತ್ರಿ ಕಾಮನನ್ನು ಸುಟ್ಟು ಹೋಳಿ ಆಡಿ ಸಮುದ್ರದ ನೀರಿನಲ್ಲಿ ಸ್ನಾನವನ್ನು ಮಾಡುವರು.ಹಾಲಕ್ಕಿಗಳಲ್ಲಿ ಸುಗ್ಗಿಮ್ಯಾಳ ಇರುವಂತೆ ಕೆಲವು ಇತರ ಜಾತಿಯವರಲ್ಲೂ ಸುಗ್ಗಿ ಇದೆ ಆದರೂ ಸುಗ್ಗಿ ಎಂದಾಕ್ಷಣ ನೆನಪಿಗೆ ಬರುವುದು ಹಾಲಕ್ಕಿಗಳ ಸುಗ್ಗಿಯೇ. ಸ್ಥಳೀಯವಾಗಿ ಐದು ದಿನ ನಡೆಯುವ ಈ ಹಬ್ಬ ಇತ್ತೀಚಿನ ದಿನಗಳಲ್ಲಿ ನಾಡಿನಾದ್ಯಂತ ತನ್ನ ಮೆರುಗನ್ನು ಪಡೆದುಕೊಂಡಿದೆ.