ಕುಮಟಾ : ಕಾಡುಪ್ರಾಣಿಗಳು ಊರಿನತ್ತ ಬರುವುದು ಸಹಜ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಚಿರತೆಗಳು ಬಂದು ಮನೆಯ ಎದುರಿಗೆ ಮಲಗಿದ್ದ ಸಾಕುನಾಯಿ ಮತ್ತು ಅದರ ಮರಿಯನ್ನ ಎತ್ತುಕೊಂಡು ಹೋಗಿರುವ ಘಟನೆ ಇದೀಗ ಕುಮಟಾದ ಮಿರ್ಜಾನ್ ಸುತ್ತಮುತ್ತಲ ಜನರನ್ನು ಬೆಚ್ಚಿಬೀಳಿಸಿದೆ.
ತಾಲೂಕಿನ ಮಿರ್ಜಾನ್ ಗ್ರಾಮದ ಸಂತೆಗದ್ದೆಯ ಈಶ್ವರ ನಾಯ್ಕ ಎನ್ನುವವರ ಮನೆಗೆ ಒಂದೇ ದಿನ ಎರಡು ಚಿರತೆಗಳು ಬಂದು, ಮನೆಯೆದುರು ಮಲಗಿದ್ದ ಸಾಕು ನಾಯಿ ಮತ್ತು ಅದರ ಮರಿಯನ್ನು ಎತ್ತಿಕೊಂಡು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಮನೆಯವರೆಲ್ಲರೂ ಹಾಯಾಗಿ ಮಲಗಿದ್ದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಅಂದರೆ ಮನೆ ಎದುರಿಗೆ ಮಲಗಿದ್ದ ಸಾಕುನಾಯಿ ಮತ್ತು ಅದರ ಮರಿಯನ್ನು ಚಿರತೆಗಳು ಹೊತ್ತೊಯ್ದ ದೃಶ್ಯ ಇದೀಗ ವೈರಲ್ ಆಗುತ್ತಿದೆ. ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಚಿರತೆಗಳು ಒಮ್ಮಿಂದೊಮ್ಮೇಲೆ ಬಂದು ನಾಯಿ ಹಾಗೂ ಅದರ ಮರಿಯ ಮೇಲೆ ದಾಳಿ ಮಾಡಿ ಅವುಗಳನ್ನು ಹೋಗುತ್ತಿರುವ ದೃಶ್ಯ ಕಂಡು ಮನೆಯವರು ಕಂಗಾಲಾಗಿದ್ದಾರೆ. ಸಾಕು ನಾಯಿ ಇಲ್ಲದಿರುವುದನ್ನು ಗಮನಿಸಿದ ಮನೆಯವರು ಬೆಳಿಗ್ಗೆ ಸಿಸಿಟಿವಿ ಗಮನಿಸಿದಾಗ ಈ ದೃಶ್ಯ ಕಂಡುಬಂದಿದೆ ಎಂಬುದಾಗಿ ಸಮಾಜಿಕ ಜಾಲತಾಣದಲ್ಲಿ ವಿವರ ಹರಿದಾಡುತ್ತಿದೆ.
ವಿಡಿಯೋ
https://youtu.be/C_zGLrKrbKc