. ಗಣೇಶ ಕೆ ಎಸ್

10504949 651194228297402 3204176111845298447 o

ದಿನ ಬೆಳಗಾದರೆ ಯಾವುದೇ ಪತ್ರಿಕೆ ತಿರುವಿಹಾಕಿದರೂ ಆತ್ಮಹತ್ಯೆಯ ಸುದ್ದಿ ಸರ್ವೇ ಸಾಮಾನ್ಯವಾಗಿದೆ.. ಕಾರಣಗಳು ಹಲವಾರು.. ಸಾಲಬಾಧೆ, ಅತ್ತೆ ಮಾವಂದಿರ ಕಿರುಕುಳ, ಗಂಡನ ಕಿರುಕುಳ, ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ, ಅನಾರೋಗ್ಯ ಮಾನಕ್ಕೆ ಅಂಜಿ.. ಹೀಗೆ ಹತ್ತು ಹಲವಾರು ಕಷ್ಟಗಳನ್ನು ತಾಳಲಾರದೆ ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕುತ್ತಾರೆ.ಒಮ್ಮೆ ಈ ಜೀವನದಿಂದ ತಪ್ಪಿಸಿಕೊಳ್ಳುವ ಯೋಚನೆ.ತನ್ಮೂಲಕ ತನ್ನೆಲ್ಲ ಕಷ್ಟಗಳಿಗೂ ಸಾವೇ ಪರಿಹಾರವೆನ್ನುವ ಧ್ರಢ ನಂಬಿಕೆ.. .

ಆತ್ಮಹತ್ಯೆ ಮಾಡಿಕೊಂಡರೆ ನೆಮ್ಮದಿ ಸಿಗುತ್ತಾ? ಯಾರಿಗೆ ಸಿಗುತ್ತದೆ..? ಸಿಗುತ್ತೆ ಅಂತ ಹೇಳಿದವರ್ಯಾರು..? ಪ್ರಾಚೀನ ಗ್ರಂಥಗಳ ಪ್ರಕಾರ ಸಾವು ದೇಹಕ್ಕೇ ಹೊರತು ಆತ್ಮಕ್ಕಲ್ಲ.. ಹಾಗಿದ್ದ ಮೇಲೆ ಆ ಆತ್ಮವನ್ನು ನಾವು ಹತ್ಯೆ ಮಾಡಲು ಸಾಧ್ಯವೇ.? ಭಗವದ್ಗೀತೆಯಲ್ಲಿ ಹೇಳಿರುವ ಪ್ರಕಾರ ಸಾವು ಅಂದರೆ ಒಂದು ಜನ್ಮದಿಂದ ಇನ್ನೊಂದು ಜನ್ಮಕ್ಕೆ ವರ್ಗಾವಣೆ. ಒಂದು ಆತ್ಮವು ಒಂದು ದೇಹದಲ್ಲಿ ಸೇರುತ್ತದೆ. ಅದು ಆ ದೇಹದ ಜೊತೆ ಇರುತ್ತದೆ.. ಆ ದೇಹ ಮಾಡಿದ ಎಲ್ಲಾ ಕೆಲಸಗಳಿಗೂ ಅದು ಸಾಕ್ಷಿಯಾಗುತ್ತದೆ. ನಂತರ ದೇಹಜರ್ಜರಿತವಾದಂತೆ ಅದು ಆ ದೇಹವನ್ನು ಬಿಟ್ಟೂ ಇನ್ನೊಂದು ದೇಹವನ್ನು ಸೇರುತ್ತದೆ, ನಾವು ಹರಿದ ಅಂಗಿಯನ್ನು ಬದಲಾಯಿಸಿದಂತೆ. ಹೀಗಿರುವುದು ನಿಜ ಎಂದು ನಂಬುವುದಾದರೆ ಆತ್ಮಹತ್ಯೆ ಸಾಧ್ಯವೇಇಲ್ಲ. ಇದು ಕೇವಲ ದೇಹದ ಹತ್ಯೆಯಷ್ಟೆ. ಅದೇನೇ ಇರಲಿ .. ಒಟ್ಟಿನಲ್ಲಿ ಜನ ತನ್ನ ಕಷ್ಟ ನೋವು ಬೇಸರವನ್ನು ಎದುರಿಸಲಾಗದೆ ಬರದ ಸಾವನ್ನು ತಂದುಕೊಳ್ಳುತ್ತಾರೆ.

ಕರ್ಮ ಭೂಮಿ ಅಂತ ಈ ಭೂಮಿಯನ್ನು ಕರೆಯುತ್ತಾರೆ,, ಇಲ್ಲಿ ಮನುಜನಾಗಿ ಜನಿಸಿದರೆ ಇಲ್ಲಿ ಮಾಡುವ ಕೆಲಸಗಳಿಂದ ಪೂರ್ವ ಜನ್ಮದ ಪಾಪಗಳನ್ನು ಕಳೆಯಬಹುದಂತೆ. ಈ ಅವಕಾಶ ಬೇರೆ ಯಾವ ಜನ್ಮಕ್ಕೂ ಇಲ್ಲವಂತೆ. ಆ ಅವಕಾಶವನ್ನು ಬಳಸಿಕೊಳ್ಳದೆ ಕೊಟ್ಟ ಜೀವನವನ್ನು ಮೊಟಕುಗೊಳಿಸುವುದರಿಂದ ಏನನ್ನು ಸಾಧಿಸಿದಂತಾಯ್ತು.. !! ಜೀವನದಲ್ಲಿ ಸಾಧಿಸಲು ಹಲವು ದಾರಿಗಳಿವೆ. ಒಂದನ್ನು ಆಯ್ಕೆ ಮಾಡಿಕೊಂಡು ಸಾಧಿಸಬೇಕು.. ಕಷ್ಟ ಅಂತ ಕುಳಿತರೆ ಯಾವುದೂ ಆಗುವುದಿಲ್ಲ.

ಕಷ್ಟಗಳು ಯಾರನ್ನು ಬಿಟ್ಟಿದೆ? ದೇವಾನು ದೇವತೆಗಳನ್ನೂ ಬಿಟ್ಟಿಲ್ಲ..  ಸ್ರಷ್ಟಿಕರ್ತ ಬ್ರಹ್ಮನಿಂದ ಹಿಡಿದು ವಿಷ್ಣು, ಶಿವ, ದೇವಾನು ದೇವತೆಗಳಿಗಳೂ ಕಷ್ಟ ಅನುಭವಿಸಿದ್ದನ್ನ ಪುರಾಣಗಳು ಹೇಳುತ್ತವೆ. ಕಷ್ಟವಿಲ್ಲದೆ ಸಮಸ್ಯೆಗಳಿಲ್ಲದೆ ನಾವು ಬದುಕಲು ಸಾಧ್ಯವೇ? ಒಮ್ಮೆ ಯೋಚಿಸಿ. ಮಗು ಚಿಕ್ಕದಾಗಿದ್ದಾಗ ಹೊಟ್ಟೆ ಹಸಿವಿನಿಂದ ಕಷ್ಟ ಪಡುತ್ತದೆ, ಅದಕ್ಕೆ ಏನು ಮಾಡಬೇಕೆಂದು ತಿಳಿಯದೆ ಅಳುತ್ತದೆ.. ತಾಯಿ ಮಗುವಿನ ಕಷ್ಟವನ್ನರಿತು ಹಾಲು ಕೊಟ್ಟು ಆ ಕಷ್ಟವನ್ನು ಪರಿಹರಿಸುತ್ತದೆ. ಒಮ್ಮೆ ಯೋಚಿಸಿ. ಕಷ್ಟವಿಲ್ಲದೇ ಬದುಕಲು ಸಾಧ್ಯವೇ? ಹುಟ್ಟಿದಾಕ್ಷಣ ಪ್ರಾರಂಭ್ಹವಾಗುವ ಕಷ್ಟ ಸಾಯುವ ತನಕವೂ ನಮ್ಮ ಮುಂದೆ ಇರುತ್ತದೆ. ಒಂದಿಷ್ಟು ಕಷ್ಟಗಳು ಹಳೆಯದಾದರೆ ಮಿಕ್ಕಿದವು ಹೊಸದು. ಅವಗಳ್ನ್ನು ಬಗೆಹರಿಸುತ್ತಲೇ ನಮ್ಮ ಜೀವನ ಮುಗಿದು ಹೋಗುತ್ತದೆ.

RELATED ARTICLES  ಸಿನಿಮಾಕ್ಕೆ ಬಣ್ಣ ಹಚ್ಚಿದ ವೀರೇಂದ್ರ ಹೆಗ್ಗಡೆ..!

ನಮ್ಮ ಅಭಿಲಾಷೆಗಳಿಗೆ ವಿರುಧ್ಧವಾಗಿ ಏನಾದರೂ ನಡೆಯುತ್ತಿದ್ದರೆ ಅದು ನಮಗೆ ಬೇಸರ ತರಿಸುತ್ತದೆ, ನೋವು ಅನ್ನಿಸುತ್ತದೆ. ಕಷ್ಟ ಅನ್ನಿಸುತ್ತದ. ಕಾಡಿನಲ್ಲಿ ವಾಸಿಸುವ ಜಿಂಕೆಯನ್ನು ಹುಲಿ ತಿನ್ನ ಬಯಸುತ್ತದೆ. ಬಹಳ ಪ್ರಯಾಸದಿಂದ ಅದನ್ನು ಹಿಂಬಾಲಿಸಿ ಹೊಡಿಯುವ ಸಂದರ್ಭದಲ್ಲಿ ಆ ಜಿಂಕೆ ತಪ್ಪಿಸಿಕೊಳ್ಳುತ್ತದೆ. ಹುಲಿಗೆ ಅದರಿಂದ ತುಂಬ ನೋವಾಗುತ್ತದೆ. ಆದ್ರೆ ಅದೇ ಸಮಯದಲ್ಲಿ ಆ ಜಿಂಕೆ ಸಾವಿನಿಂದ ತಪ್ಪಿಸಿಕೊಂಡಿದ್ದಕ್ಕೆ ನಿಟ್ಟುಸಿರುಬಿಡುತ್ತದೆ. ಒಬ್ಬ ಕಪಟಿ ಮೋಸ ಮಾಡಿ ಹಣ ಸಂಪಾದಿಸುತ್ತಾನೆ. ಹಲವನ್ನು ವಂಚಿಸಿ ಹಣ ಗಳಿಸುತ್ತಾನೆ. ಅವನಿಗೆ ಜನ ವಂಚಿತರಾಗದಿದ್ದಗೆ ಜೀವನವೇ ಕಷ್ಟ ಅನ್ನಿಸದಿರದು.

ಜೀವನದಲ್ಲಿ ಒಳ್ಳೆಯ ಕೆಲ್ಸವನ್ನು ಮಾಡುತ್ತಿರುವವನಿಗೂ ಕಷ್ಟಗಳು ತಪ್ಪಿದ್ದಲ್ಲಿ.. ಅದರಿಂದ ಆತ ಇನ್ನಷ್ಟು ಒಳ್ಳೆಯವನಾಗುತ್ತನೆಯೇ ಹೊರತು ಬೇರೇನೂ ಆಗುವುದಿಲ್ಲ. ಕಷ್ಟ ಸುಕ್ಕಗಳನ್ನು ಜೀವನದಲ್ಲಿ ಸಮನಾಗಿ ಸ್ವೀಕರಿಸುವವನೇ ನಿಜವಾದ ಸುಖೀಜೀವಿ. ಆತ ಬಂದಿದ್ದೆಲ್ಲದಕ್ಕೂ ಆತನೇ ಕಾರಣ ಅಂತ ಭಾವಿಸುತ್ತಾನೆ, ಅಥವಾ ಬರುವುದನ್ನು ತಪ್ಪಿಸಲು ಯಾರಿಂದಲೂ ಆಗದು ಅದನ್ನ ಅನುಭವಿಸಲೇ ಬೇಕು ಅಂತ ತಿಳಿದಿರುತ್ತಾನೆ. ಅದನ್ನೇ ಒಂದು ಅರ್ಥದಲ್ಲಿ ಸ್ಥಿತಪ್ರಜ್ನ ಸ್ಥಿತಿ ಅನ್ನುವುದು. ದೇವರನ್ನುಆಸ್ತಿಕರು ಬಂದ ಕಷ್ಟ ಸುಖಗಳೆರಡನ್ನೂ ಭಗವಂತನಿಗೆ ಸಮರ್ಪಿಸಿ ಕಷ್ಟಗಳಿಗೆ ಕೊರಗದೆ ಸುಖಕ್ಕೆ ಹಿಗ್ಗದೆ ಪ್ರಶಾಂತ ಸ್ಥಿತಿಯನ್ನು ಅನುಭವಿಸುತ್ತಾನೆ. ಸುಖ ದುಃಖಗಳೆರಡೂ ಮನಸ್ಸಿನ ಒಂದು ಭಾವನೆಗಳು. ಅದು ಬಾಹ್ಯಪ್ರಪಂಚದಿಂದ ಸಿಗುವಂತದ್ದು. ಆಂತರಿಕವಾಗಿ ಮನುಷ್ಯ ಸದಾ ಆನಂದಮಯಿ. ಒಮ್ಮೆ ಒಬ್ಬ ಸಾಧುವಿಗೆ ಎರಡೂ ಕಾಲಿಲ್ಲದವ ಸಿಕ್ಕಿದನಂತೆ. ಸಾಧುವಿಗೆ ಆತನ ಕಷ್ಟ ನೋಡಲಾರದೆ “ ಯಾಕಪ್ಪ ತುಂಬಾ ಕಷ್ಟ ಆಗ್ತಿದ್ಯಾ? ಯಾವಾಗಿಂದ ಕಾಲಿಲ್ಲ? ” ಅದಕ್ಕೆ ಆತ ಉತ್ತರಿಸಿದನಂತೆ.. “ ನನಗೆ ಹುಟ್ಟುವಾಗಲೇ ಕಾಲಿಲ್ಲ.. ಅದು ನನಗೆ ಒಂದು ಊನ ಅಂತ ಅನ್ನಿಸುತ್ತಲೇ ಇಲ್ಲ.. ನಾನು ನೆಮ್ಮದಿಯಾಗೇ ಜೀವನ ಸಾಗಿಸುತ್ತಿದ್ದೇನೆ” ನಿಜ ಕಷ್ಟ ಸುಖವೆಂಬುದು ಮನಸ್ಸಿನ ಒಂದು ಭಾವನೆ ಅಷ್ಟೇ. ಇತರಲ್ಲಿರುವುದು ನಮ್ಮಲ್ಲಿಲ್ಲವಲ್ಲಾ ಅಂತ ಕೊರಗುತ್ತೇವೆ. ಅದರಿಂದ ಮಾನಸಿಕ ನೆಮ್ಮದಿ ಹಾಳು ಮಾಡಿಕೊಂಡು ಆತ್ಮಹತ್ಯೆಯಂತಹ ಹೇಯ ಕ್ರತ್ಯಕ್ಕೆ ಕೈಹಾಕುತ್ತೇವೆ.

RELATED ARTICLES  ಅಪಘಾತಗಳು !! –ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆ .

ಎಷ್ಟೋ ಜನರು ಹಿಂದೆ ಆದ ಕಹಿ ಘಟನೆಗಳನ್ನು ನೆನಪಿಸಿಕೊಂಡು ಅಥವಾ ಮುಂದೆ ಬರಬಹುದಾದ ಘಟನೆಗಳನ್ನು ಯೋಚುಸಿ ಆತಂಕಿಸುತ್ತಾರೆ. ಒಮ್ಮೆ ಯೋಚಿಸಿ.. ನಮ್ಮದು ಈ ಕ್ಷಣ ಮಾತ್ರ.. ಹೀಂದಿನ ಕ್ಷಣವನ್ನು ನಾವು ಬದಲಾಯಿಸಲಾಗದು.. ಮುಂದೆ ಬರುವ ಘಟನೆಗಳನ್ನು ನಾವು ಊಹಿಸಬಹುದಷ್ಟೆ ಆದರೆ ಅದು ಆಗೇ ಆಗುತ್ತದೆ ಅಂತ ಹೇಳಲಾಗದು.. ಹೀಗಿರುವಾಗ ಅವುಗಳಬಗ್ಗೆ ಚಿಂತೆ ಯಾಕೆ..? ಈ ಸಮಯದಲ್ಲಿ ಈ ಸಂದರ್ಭಕ್ಕೆ ನಾನೇನು ಉತ್ತಮವಾದಿದ್ದನ್ನು ಮಾಡಬಲ್ಲೆ ಎನ್ನುವುದಷ್ಟೇ ಮುಖ್ಯವಲ್ಲವೆ..? ಆದರೆ ನಾವು ಹಿಂದಿನ ವಿಷಯಕ್ಕೆ ಕೊರಗಿ ಮುಂದಿನ ವಿಷಯಕ್ಕೆ ಬೆದರಿ ಈಗಿನ ಸಮಯನ್ನು ವ್ಯರ್ಥ ಮಾಡುತ್ತೇವೆ. ತಪ್ಪನ್ನು ನಾವು ಮಾಡಿ ಅದಕ್ಕಾಗಿ ದೇವರನ್ನು ಬಯ್ಯುತ್ತಿರುತ್ತೇವೆ.. ಕೊನೆಗೆ ಯಾವುದೇ ದಾರಿ ಕಾಣದಿದ್ದಾಗ ಆತ್ಮಹತ್ಯೆಯಂತಹ ಹಾದಿ ತುಳಿಯುತ್ತೇವೆ.

ನಮ್ಮ ಕಷ್ಟಗಳು ಪರಿಹರಿಸಾಗದ್ದೇ? ಹೆಚ್ಚಿನ ಕಷ್ಟಗಳು ಹಾಗೂ ಸಮಸ್ಯೆಗಳಿಗೆ ಪರಿಹಾರವಿದೆ. ನಾವು ಅದನ್ನು ಹುಡುಕಿತ್ತಿಲ್ಲ ಅಷ್ಟೆ . ಸರಿಯಾದ ಮರ್ಗದಲ್ಲಿ ಹುಡುಕಿದರೆ ಪರಿಹಾರ ಸಿಕ್ಕೇ ಸಿಗುತ್ತದೆ. ಕೆಲವು ಸಮಸ್ಯೆಗಳಿಗೆ ಪರಿಹಾರ ದುರ್ಲಭವಾಗಬಹುದು. ಆಗ ಸಮಸ್ಯೆಯೋಂದಿಗೆ ನಾವು ಜೀವಿಸಬೇಕು. ಕೆಲವು ಖಾಯಿಲೆಗಳು, ನಮ್ಮನ್ನು ಬಿಡಲಾರವು. ಸಾಯುವ ತನಕ ಅವುಗಳೊಂದಿಗೇ ನಾವು ಜೀವಿಸಲೇ ಬೇಕು. ನಮ್ಮ ದೇಹಕ್ಕೆ ಆತ್ಮವನ್ನು ತುಂಬಿದ್ದು ಆ ದೇವರುಅಂತಾದರೆ ಅದನ್ನು ಕಿತ್ತುಕೊಳ್ಳುವ ಹಕ್ಕಿರುವುದು ಆತನಿಗೆ ಮಾತ್ರ..

ಅಷ್ಟಕ್ಕೂ ಆತ್ಮಹತ್ಯೆ ಮಾಡಿಕೊಂಡು ಸಾಧಿಸುವುದಾದರೂ ಏನು? ಸದ್ಯದ ಪರಿಸ್ಥಿತಿಯಿಂದ  ತಕ್ಷಣದ ಬಿಡುಗಡೆ. ನಾವು ಪೂರ್ವಜನ್ವನ್ನು ಪಾಪ ಪುಣ್ಯಗಳನ್ನು ನಂಬುವುದೇ ಆದರೆ ನಾವು ಮಾಡಿದ ಪಾಪಕ್ಕೆ ನಮಗೆ ಶಿಕ್ಷೇ ಅಂತ ಭಾವಿಸುವುದಾದರೆ, ಈಗಿರುವ ಕಷ್ಟ ಮುಂದಿನ ಜನ್ಮದಲ್ಲಿ ನಮ್ಮನ್ನು ಕಾಡದೇ ಇರುತ್ತದೆಯೇ. ಇದರ ಜೊತೆಗೆ ಆತ್ಮಹತ್ಯೆಯಂತಹ ಘೋರ ಪಾಪವೂ ಸೇರಿಕೊಂಡೀತು ಅಲ್ಲವೇ.?