ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದ್ದು, ಜು.8 ರೊಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ತಿಳಿಸಿದೆ.

ಕಾರವಾರ ತಾಲೂಕಿನ ಚಿತ್ತಾಕುಲದ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ವಿರ್ಜೆ (ಮಲ್ಲಾಪುರ)ಗೆ ಸಾಮಾನ್ಯ ಮಹಿಳೆ, ಹಾಗೂ ಅಮದಳ್ಳಿ (ಚೆಂಡಿಯಾ) ಗೆ ಅನುಸೂಚಿತ ಜಾತಿ. ಜೊಯಿಡಾ ತಾಲೂಕಿನ ರಾಮಮನಗರಕ್ಕೆ ಸಾಮಾನ್ಯ ಮಹಿಳೆ, ಜೊಯಿಡಾಗೆ ಹಿಂದುಳಿದ ವರ್ಗ ಬ ಮಹಿಳೆ, ತೇರಗಾಂವಕ್ಕೆ ಸಾಮಾನ್ಯ ಮಹಿಳೆ.
ಹಳಿಯಾಳ ತಾಲೂಕಿನ ಬೆಳವಟಿಗೆ (ಮುರ್ಕವಾಡ)ಗೆ ಅನುಸೂಚಿತ ಜಾತಿ ಮಹಿಳೆ, ಕಾವಲವಾಡಕ್ಕೆ ಹಿಂದುಳಿದ ವರ್ಗ ಅ.
ದಾಂಡೇಲಿ ತಾಲೂಕಿನ ಅಂಬಿಕಾನಗರಕ್ಕೆ ಸಾಮಾನ್ಯ, ಭಟ್ಕಳ ತಾಲೂಕಿನ ಮಾವಳ್ಳಿಗೆ ಹಿಂದುಳಿದ ವರ್ಗ ಅ ಮಹಿಳೆ, ಶಿರಾಲಿಗೆ ಸಾಮಾನ್ಯ, ಹೆಬಳೆಗೆ ಹಿಂದುಳಿದ ವರ್ಗ ಅ, ಬೆಳಕೆಗೆ ಸಾಮಾನ್ಯ ಮಹಿಳೆ, ಹೊನ್ನಾವರ ತಾಲೂಕಿನ ಹಳದೀಪುರಕ್ಕೆ ಸಾಮಾನ್ಯ ಮಹಿಳೆ, ಸಾಲಕೋಡ (ಮುಗ್ವಾ)ಕ್ಕೆ ಸಾಮಾನ್ಯ, ಖರ್ವಾ (ಮಾವಿನಕುರ್ವಾ) ಗೆ ಹಿಂದುಳಿದ ವರ್ಗ ಬ, ನಗರಬಸ್ತಿಕೇರಿಗೆ ಸಾಮಾನ್ಯ, ಕಾಸರಕೋಡಕ್ಕೆ ಸಾಮಾನ್ಯ ಮಹಿಳೆ,

ಶಿರಸಿ ತಾಲೂಕಿನ ಬನವಾಸಿಗೆ ಸಾಮಾನ್ಯ, ಬದನಗೋಡಕ್ಕೆ ಸಾಮಾನ್ಯ ಮಹಿಳೆ, ಹುತ್ತಗಾರ (ಹುಲೇಕಲ್)ಕ್ಕೆ – ಸಾಮಾನ್ಯ ಮಹಿಳೆ, ಶಿವಳ್ಳಿ-ಹೆಗಡೆಕಟ್ಟಾ (ಜಾನ್ಮನೆ)ಗೆ ಸಾಮಾನ್ಯ, ಬಚಗಾಂವ (ದೊಡ್ನಳ್ಳಿ)ಗೆ ಹಿಂದುಳಿದ ವರ್ಗ ಅ, ಮುಂಡಗೋಡ ತಾಲೂಕಿನ ಪಾಳಾಗ ಹಿಂದುಳಿದ ವರ್ಗ ಅ ಮಹಿಳೆ, ಇಂದೂರಿಗೆ – ಸಾಮಾನ್ಯ, ಮೈನಳ್ಳಿ (ಚಿಗಳ್ಳಿ)ಗೆ ಹಿಂದುಳಿದ ವರ್ಗ ಅ ಮಹಿಳೆ, ಯಲ್ಲಾಪುರ ತಾಲೂಕಿನ ಮಾವಿನಮನೆ (ಇಡಗುಂದಿ)ಗೆ ಸಾಮಾನ್ಯ, ಕಂಪ್ಲಿಗೆ ಅನುಸೂಚಿತ ಪಂಗಡ ಮಹಿಳೆ, ಕಿರವತ್ತಿಗೆ ಹಿಂದುಳಿದ ವರ್ಗ ಅ ಮಹಿಳೆ, ಸಿದ್ದಾಪುರ ತಾಲೂಕಿನ ಅಣಲೇಬೈಲ್‍ಗೆ ಹಿಂದುಳಿದ ವರ್ಗ ಅ ಮಹಿಳೆ, ಕಾನಗೋಡ (ದೊಡ್ಮನೆ)ಕ್ಕೆ ಅನುಸೂಚಿತ ಜಾತಿ ಮಹಿಳೆ, ಶಿರಳಗಿ (ಹಲಗೇರಿ)ಗೆ ಸಾಮಾನ್ಯ, ಕುಮಟಾ ತಾಲೂಕಿನ ಗೋಕರ್ಣಕ್ಕೆ ಹಿಂದುಳಿದ ವರ್ಗ ಬ, ಮಿರ್ಜಾನಕ್ಕೆ ಸಾಮಾನ್ಯ, ಹೆಗಡೆಗೆ ಸಾಮಾನ್ಯ, ದೀವಗಿ (ಮೂರುರು)ಗೆ ಸಾಮಾನ್ಯ ಮಹಿಳೆ, ಅಂಕೋಲಾ ತಾಲೂಕಿನ ಕಲಭಾಗ (ದೇವಗಿರಿ)ಕ್ಕೆ ಸಾಮಾನ್ಯ, ಭಾವಿಕೇರಿ (ಅವರ್ಸಾ)ಗೆ ಸಾಮಾನ್ಯ, ಬೆಳಸೆ (ಅಗಸೂರು)ಗೆ ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಬೆಳಂಬಾರ (ಶೆಟಗೇರಿ) ಕೈ ಹಿಂದುಳಿದ ವರ್ಗ ಅ ಮೀಸಲಾತಿ ನಿಗದಿಸಲಾಗಿದೆ.

ಉತ್ತರ ಕನ್ನಡದ ತಾಲೂಕಾ ಪಂಚಾಯತ್‍ನ 129 ಕ್ಷೇತ್ರಕ್ಕೆ ಕರಡು ಮೀಸಲಾತಿ ಪ್ರಕಟ.

ಕಾರವಾರ: ರಾಜ್ಯ ಸರ್ಕಾರವು ತಾಲೂಕಾ ಪಂಚಾಯತ ಮತಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲ 12 ತಾಲೂಕುಗಳ ಒಟ್ಟೂ 129 ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿದೆ.

ಪ್ರಸಕ್ತ ಸಾಲಿನಲ್ಲಿ ಹೊನ್ನಾವರ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶವೊಂದು ನಗರ ಪ್ರದೇಶವಾಗಿ ಪರಿವರ್ತಿತವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಂದು ತಾಲುಕು ಪಂಚಾಯಿತಿ ಕ್ಷೇತ್ರ ಕಡಿಮೆಯಾಗಿದೆ. ಅದರಂತೆ ಒಟ್ಟೂ 129 ಕ್ಷೇತ್ರಗಳ ಮೀಸಲಾತಿಯನ್ನು ಪ್ರಕಟಿಸಲಾಗಿದ್ದು ಅವುಗಳಲ್ಲಿ 70 ಕ್ಷೇತ್ರಗಳು ಮಹಿಳೆಯರಿಗೆ ಸೀಮಿತವಾಗಿವೆ. ಇನ್ನು ಈ ಮೀಸಲಾತಿಯ ಬಗ್ಗೆ ಆಕ್ಷೇಪಣೆಯನ್ನು ಸಲ್ಲಿಸಲು ಜು.8 ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

RELATED ARTICLES  ಮಾರ್ಚ್ 10ರಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ: ಸಚಿವ ಶಿವಾನಂದ ಪಾಟೀಲ್

ಕಾರವಾರ ತಾಲೂಕು: ಅಮದಳ್ಳಿ ಮತಕ್ಷೇತ್ರಕ್ಕೆ ಸಾಮಾನ್ಯ ಮಹಿಳೆ, ಚೆಂಡಿಯಾಗೆ ಸಾಮಾನ್ಯ ಮಹಿಳೆ, ಚಿತ್ತಾಕುಲ ಹಿಂದುಳಿದ ವರ್ಗ ಅ ಮಹಿಳೆ, ದೇವಳಮಕ್ಕಿಗೆ ಸಾಮಾನ್ಯ, ಘಾಡಸಾಯಿಗೆ ಹಿಂದುಳಿದ ವರ್ಗ ಅ ಮಹಿಳೆ, ಕದ್ರಾ (ಗೋಟೆಗಾಳಿ)ಗೆ ಸಾಮಾನ್ಯ, ಕಡವಾಡಕ್ಕೆ ಅನುಸೂಚಿತ ಜಾತಿ ಮಹಿಳೆ, ಮಾಜಾಳಿ ಹಿಂದುಳಿದ ವರ್ಗ ಬ, ಮಿರ್ಚೆ (ಮಲ್ಲಾಪುರ)ಗೆ ಅನುಸೂಚಿತ ಪಂಗಡ ಮಹಿಳೆ, ಮುಡಗೇರಿಗೆ ಸಾಮಾನ್ಯ, ಕಿನ್ನರ (ವೈಲವಾಡಾ)ಕ್ಕೆ ಸಾಮಾನ್ಯ,. ಟ್ಟಾರೆ ಕಾರವಾರದ 11 ರಲ್ಲಿ ಒಟ್ಟೂ6 ಸ್ಥಾನ ಮಹಿಳೆಯರಿಗೆ ಮೀಸಲು.

ಅಂಕೋಲಾ ತಾಲೂಕು: ಬೇಲೇಕೇರಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ಅ ಮಹಿಳೆ, ಅವರ್ಸಾಗೆ ಸಾಮಾನ್ಯ ಅಲಗೇರಿಗೆ ಸಾಮಾನ್ಯ, ಭಾವಿಕೇರಿಗೆ ಸಾಮಾನ್ಯ ಮಹಿಳೆ, ಅಗಸೂರಿಗೆ ಹಿಂದುಳಿದ ವರ್ಗ ಅ ಮಹಿಳೆ, ಹಿಲ್ಲೂರಿಗೆ ಅನುಸೂಚಿತ ಪಂಗಡ ಮಹಿಳೆ, ಬೆಳಸೆಗೆ ಸಾಮಾನ್ಯ ಮಹಿಳೆ, ಬೊಬ್ರುವಾಡಕ್ಕೆ ಸಾಮಾನ್ಯ ಬೊಳೆ(ಶೆಟಗೇರಿ)ಗೆ ಅನುಸೂಚಿತ ಜಾತಿ ಮಹಿಳೆ, ಬೆಳಂಬಾರಕ್ಕೆ ಹಿಂದುಳಿದ ವರ್ಗ ಬ ಹಾಗೂ ಉಳುವರೆ(ಸಗಡಗೇರಿ)ಗೆ – ಸಾಮಾನ್ಯ ಮೀಸಲಿಡಲಾಗಿದೆ.

ಕುಮಟಾ ತಾಲೂಕು: ನಾಡುಮಾಸ್ತೇರಿ ಕ್ಷೇತ್ರಕ್ಕೆ ಸಾಮಾನ್ಯ, ಗೋಕರ್ಣಕ್ಕೆ ಹಿಂದುಳಿದ ವರ್ಗ ಅ ಮಹಿಳೆ, ಹಿರೇಗುತ್ತಿಗೆ ಸಾಮಾನ್ಯ, ಮಿರ್ಜಾನಕ್ಕೆ ಅನುಸೂಚಿತ ಪಂಗಡ ಮಹಿಳೆ, ಕಾಗಾಲಕ್ಕೆ ಸಾಮಾನ್ಯ, ಹೊಲನಗದ್ದೆಗೆ ಸಾಮಾನ್ಯ ಮಹಿಳೆ, ಹೆಗಡೆಗೆ ಅನುಸೂಚಿತ ಜಾತಿ ಮಹಿಳೆ, ದೀವಗಿಗೆ ಹಿಂದಳಿದ ವರ್ಗ ಬ, ಮೂರೂರಿಗೆ ಹಿಂದುಳಿದ ವರ್ಗ ಅ ಮಹಿಳೆ, ಕಲಭಾಗಕ್ಕೆ ಸಾಮಾನ್ಯ ಮಹಿಳೆ ಹಾಗೂ ಕೂಜಳ್ಳಿಗೆ ಸಾಮಾನ್ಯ ಸ್ಥಾನ ಮೀಸಲು.

ಹೊನ್ನಾವರ ತಾಲೂಕು: ಹಳದೀಪುರಕ್ಕೆ ಅನುಸೂಚಿತ ಪಂಗಡ ಮಹಿಳೆ, ಕರ್ಕಿಗೆ ಅನುಸೂಚಿತ ಜಾತಿ ಮಹಿಳೆ, ಚಂದಾವರಕ್ಕೆ ಸಾಮಾನ್ಯ ಮಹಿಳೆ, ಸಾಲಕೋಡ (ಮುಗ್ವಾ)ಕ್ಕೆ ಹಿಂದುಳಿದ ವರ್ಗ ಬ, ಹಡಿನಬಾಳಕ್ಕೆ ಸಾಮಾನ್ಯ, ಹೆರಂಗಡಿಗೆ ಸಾಮಾನ್ಯ ಖರ್ವಾ (ಮಾವಿನಕುರ್ವಾ)ಗೆ ಸಾಮಾನ್ಯ, ಮಾಗೋಡ(ಕೊಡಾಣಿ)ಗೆ ಸಾಮಾನ್ಯ, ನಗರಬಸ್ತಿಕೇರಿಗೆ ಹಿಂದುಳಿದ ವರ್ಗ ಅ ಮಹಿಳೆ, ಕಾಸರಕೋಡಕ್ಕೆ ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಬಳಕೂರಿಗೆ ಸಾಮಾನ್ಯ ಮಹಿಳೆ.

ಭಟ್ಕಳ ತಾಲೂಕು: ಬೈಲೂರಿಗೆ ಸಾಮಾನ್ಯ, ಮಾವಳ್ಳಿಗೆ ಹಿಂದುಳಿದ ವರ್ಗ ಅ ಮಹಿಳೆ, ಕಾಯ್ಕಿಣಿಗೆ ಸಾಮಾನ್ಯ, ಬೇಂದ್ರೆಗೆ ಸಾಮಾನ್ಯ ಮಹಿಳೆ, ಶಿರಾಲಿಗೆ ಹಿಂದುಳಿದ ವರ್ಗ ಅ, ಹೆಬಳೆಗೆ ಸಾಮಾನ್ಯ, ಮುಂಡಳ್ಳಿಗೆ ಅನುಸೂಚಿತ ಜಾತಿ ಮಹಿಳೆ, ಬಿಳಲಖಂಡಕ್ಕೆ ಅನುಸೂಚಿತ ಪಂಗಡ ಮಹಿಳೆ ಹಾಗೂ ಬೆಳಕೆಗೆ ಸಾಮಾನ್ಯ ಮಹಿಳೆ.

ಶಿರಸಿ ತಾಲೂಕು: ಹಂಚರಟಾ-ಹುಲೇಕಲ್ (ಹುಲೇಕಲ್)ಗೆ ಹಿಂದುಳಿದ ವರ್ಗ ಅ ಮಹಿಳೆ, ಹುತ್ತಗಾರಕ್ಕೆ ಸಾಮಾನ್ಯ ಮಹಿಳೆ, ಎಕ್ಕಂಬಿ (ಬಿಸಲಕೊಪ್ಪ)ಗೆ ಸಾಮಾನ್ಯ, ಬದನಗೋಡಕ್ಕೆ ಅನುಸೂಚಿತ ಪಂಗಡ (ಮಹಿಳೆ), ಶಿವಳ್ಳಿ-ಹೆಗಡೆಕಟ್ಟಾಗೆ ಸಾಮಾನ್ಯ, ಮತ್ತಿಗಾರ (ನೆಗ್ಗು)ಗೆ ಸಾಮಾನ್ಯ, ಬಚಗಾಂವ(ಇಸಳೂರು)ಗೆ ಹಿಂದುಳಿದ ವರ್ಗ ಅ ಮಹಿಳೆ, ತೆರಕನಳ್ಳಿ (ಉಂಚಳ್ಳಿ)ಗೆ ಹಿಂದುಳಿದ ವರ್ಗ ಬ, ಮರಗುಂಡಿ (ಸುಗಾವಿ)ಗೆ ಸಾಮಾನ್ಯ ಹಾಗೂ ಬನವಾಸಿಗೆ ಅನಸೂಚಿತ ಜಾತಿ ಮಹಿಳೆ.

RELATED ARTICLES  ಮೈಸೂರಿನ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಗಳಿಗೆ ನೇರ ನೇಮಕಾತಿ.

ಸಿದ್ದಾಪುರ ತಾಲೂಕು: ಹರಿಗಾರ(ಹೆಗ್ಗರಣಿ)ಗೆ ಅನುಸೂಚಿತ ಪಂಗಡ ಮಹಿಳೆ, ಅಣಲೇಬೈಲ್(ಹಸರಗೋಡ) ಹಿಂದುಳಿದ ವರ್ಗ ಬ, ತಾರೆಹಳ್ಳಿ ಕಾನಸೂರಿಗೆ ಸಾಮಾನ್ಯ, ಮುರಳ್ಳಿ(ಹಾರ್ಸಿಕಟ್ಟಾಗೆ ಸಾಮಾನ್ಯ ಮಹಿಳೆ, ಕ್ಯಾದಗಿಗೆ ಸಾಮಾನ್ಯ, ಇಟಗಿಗೆ ಸಾಮಾನ್ಯ, ಬೇಡ್ಕಣಿ(ಬಿಳಗಿ)ಗೆ ಸಾಮಾನ್ಯ ಮಹಿಳೆ, ಕಾನಗೋಡ(ಕೋಲಿಸಿರ್ಸಿ)ಗೆ ಹಿಂದುಳಿದ ವರ್ಗ ಅ ಮಹಿಳೆ, ಹುಸೂರು(ಹಲಗೇರಿ)ಗೆ ಅನುಸೂಚಿತ ಜಾತಿ ಮಹಿಳೆ, ಶಿರಳಗಿ(ಕಾವಂಚೂರು)ಗೆ ಹಿಂದುಳಿದ ವರ್ಗ ಅ ಮಹಿಳೆ ಹಾಗೂ ಮನ್ಮನೆಗೆ ಸಾಮಾನ್ಯ ಮೀಸಲಿಡಲಾಗಿದೆ.

ಯಲ್ಲಾಪುರ ತಾಲೂಕು: ಆನಗೋಡಕ್ಕೆ ಹಿಂದುಳಿದ ವರ್ಗ ಬ, ಕಳಚೆ(ವಜ್ರಳ್ಳಿ)ಗೆ ಸಾಮಾನ್ಯ, ಮಾವಿನಮನೆಗೆ ಸಾಮಾನ್ಯ, ಅರಬೈಲ್(ಇಡಗುಂದಿ)ಗೆ ಸಾಮಾನ್ಯ, ಚಂದಗುಳಿ(ನಂದೊಳ್ಳಿ)ಗೆ ಹಿಂದುಳಿದ ವರ್ಗ ಅ ಮಹಿಳೆ, ಕಂಪ್ಲಿ ಮಂಚಿಕೇರಿಗೆ ಹಿಂದುಳಿದ ವರ್ಗ ಅ ಮಹಿಳೆ, ತಾರೆಹಳ್ಳಿ(ಶೀಗೆಮನೆ ಉಮ್ಮಚಗಿ)ಗೆ ಅನುಸೂಚಿತ ಜಾತಿ ಮಹಿಳೆ, ಭರತನಹಳ್ಳಿ (ಕುಂದರಗಿ) ಸಾಮಾನ್ಯ ಮಹಿಳೆ, ಕನ್ನಡಗಲ್ (ಕಣ್ಣಿಗೇರಿ)ಗೆ ಸಾಮಾನ್ಯ, ಕಿರವತ್ತಿಗೆ ಅನುಸೂಚಿತ ಪಂಗಡ ಮಹಿಳೆ ಹಾಗೂ ಮದನೂರ-ಹುಣಶೆಟ್ಟಿಕೊಪ್ಪಕ್ಕೆ ಸಾಮಾನ್ಯ ಮಹಿಳೆ.

ಮುಂಡಗೋಡ ತಾಲೂಕು: ನಂದಿಕಟ್ಟಾಗೆ ಸಾಮಾನ್ಯ, ಹುನಗುಂದಕ್ಕೆ ಸಾಮಾನ್ಯ, ಬಾಚಣಕಿಗೆ ಸಾಮಾನ್ಯ, ಇಂದೂರಿಗೆ ಸಾಮಾನ್ಯ ಮಹಿಳೆ, ಮೈನಳ್ಳಿ (ಗುಂಜಾವತಿ)ಗೆ ಹಿಂದುಳಿದ ವರ್ಗ ಅ, ಚೌಡಳ್ಳಿಗೆ ಅನುಸೂಚಿತ ಜಾತಿ, ಸಾಲಗಾಂವ(ಚಿಗಳ್ಳಿ)ಗೆ ಹಿಂದುಳಿದ ವರ್ಗ ಅ ಮಹಿಳೆ, ಕಾತೂರಿಗೆ ಅನುಸೂಚಿತ ಜಾತಿ ಮಹಿಳೆ, ಪಾಳಾಗೆ ಸಾಮಾನ್ಯ ಮಹಿಳೆ, ಕೋಡಂಬಿಗ ಅನುಸೂಚಿತ ಪಂಗಡ ಮಹಿಳೆ ಹಾಗೂ ಮಳಗಿಗೆ ಸಾಮಾನ್ಯ ಮಹಿಳೆ ಮೀಸಲಿಡಲಾಗಿದೆ.

ಹಳಿಯಾಳ ತಾಲೂಕು: ಅರ್ಲವಾಡಕ್ಕೆ ಸಾಮಾನ್ಯ ಮಹಿಳೆ, ತೇರಗಾಂವ ಸಾಮಾನ್ಯ ಮಹಿಳೆಗೆ, ಮಂಗಳವಾಡ ಹಿಂದುಳಿದ ವರ್ಗ ಅ ಮಹಿಳೆ, ಭುಜರಕಂಚನಳ್ಳಿಗೆ ಅನುಸೂಚಿತ ಜಾತಿ ಮಹಿಳೆ, ಮುಂಡವಾಡ ಸಾಮಾನ್ಯ, ಬೆಳವಟಿಗೆ ಹಿಂದುಳಿದ ವರ್ಗ ಬ, ಗುಂಡೋಳ್ಳಿಗೆ ಸಾಮಾನ್ಯ, ಯಡೋಗಾಗೆ ಸಾಮಾನ್ಯ, ಸಾಂಬ್ರಾಣಿಗೆ ಸಾಮಾನ್ಯ, ಕಾವಲವಾಡಕ್ಕೆ ಹಿಂದುಳಿದ ವರ್ಗ ಅ ಮಹಿಳೆ, ಭಾಗವತಿಗೆ ಅನುಸೂಚಿತ ಪಂಗಡ ಮಹಿಳೆ.

ದಾಂಡೇಲಿ ತಾಲೂಕು: ಆಲೂರಿಗೆ ಸಾಮಾನ್ಯ ಮಹಿಳೆ, ಕೇರವಾಡಕ್ಕೆ ಹಿಂದುಳಿದ ವರ್ಗ ಬ ವಿಟ್ನಾಳಕ್ಕೆ ಸಾಮಾನ್ಯ, ಅಂಬೇವಾಡಿ (ಗಾಂವಠಾಣಾ)ಗೆ ಸಾಮಾನ್ಯ ಅಂಬೇವಾಡಿ(ನವಗ್ರಾಮ)ಗೆ ಹಿಂದುಳಿದ ವರ್ಗ ಅ ಮಹಿಳೆ, ಬಡಕಾನ ಶಿರಡಾ -1ಗೆ ಹಿಂದುಳಿದ ವರ್ಗ ಅ ಮಹಿಳೆ, ಬಡಾಕಾನ ಶಿರಡಾ-2 ಸಾಮಾನ್ಯ, ಬೊಮ್ಮನಳ್ಳಿ ಅನುಸೂಚಿತ ಪಂಗಡ ಮಹಿಳೆ, ಅಂಬಿಕಾನಗರ-1 (ವಾರ್ಡ್ ನಂ. 1 ಮತ್ತು 4)ಗೆ ಸಾಮಾನ್ಯ, ಅಂಬಿಕಾನಗರ-2 (ವಾರ್ಡ ನಂ . 2)ಗೆ ಅನುಸೂಚಿತ ಜಾತಿ ಮಹಿಳೆ ಹಾಗೂ ಅಂಬಿಕಾನಗರ-3 (ವಾರ್ಡ್ ನಂ. 3)ಗೆ ಸಾಮಾನ್ಯ ಮಹಿಳೆ.

ಜೊಯಿಡಾ ತಾಲೂಕು: ದೇವುಳ್ಳಿ-ತಿನೈ (ಅಖೇತಿ)ಗೆ ಸಾಮಾನ್ಯ ಮಹಿಳೆ, ಕಲಂಬುಲಿ-ಕ್ಯಾಸಲ್‍ರಾಕ್‍ಗೆ ಸಾಮಾನ್ಯ, ಅಸುಗೆ ಸಾಮಾನ್ಯ, ರಾಮನಗರಕ್ಕೆ ಅನುಸೂಚಿತ ಜಾತಿ ಮಹಿಳೆ, ಜಗಲಬೇಟಕ್ಕೆ ಹಿಂದುಳಿದ ವರ್ಗ ಅ ಮಹಿಳೆ, ಅಸುಳ್ಳಿ (ಬಜಾರಕುಣಂಗ)ಗೆ ಸಾಮಾನ್ಯ, ಅವೇಡಾ-ಗಣೇಶಗುಡಿಗೆ ಸಾಮಾನ್ಯ, ಕಾತೇಲಿ ಕುಂಬಾರವಾಡಾಗೆ ಹಿಂದುಳಿದ ವರ್ಗ ಅ ಮಹಿಳೆ, ಬಿರಂಪಾಲಿ (ಪ್ರಧಾನಿ)ಗೆ ಅನುಸೂಚಿತ ಪಂಗಡ ಮಹಿಳೆ, ಅಂಬೋಳಿ (ನಂದಿಗದ್ದೆ)ಗೆ ಸಾಮಾನ್ಯ ಮಹಿಳೆ.