ಹೊನ್ನಾವರ : ಹೊನ್ನಾವರ ತಾಲೂಕಿನ ಕಾಸರಕೋಡು ಭಾಗದಲ್ಲಿ ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ನಾಡದೋಣಿ ಮುಳುಗಡೆಯಾಗಿರುವ ಘಟನೆ ವರದಿಯಾಗಿದೆ.

ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ ಮೂರು ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಆದರೆ ಓರ್ವ ಮೀನುಗಾರ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

RELATED ARTICLES  ಶಾಲೆ ಪ್ರಾರಂಭದ ಹೇಳಿಕೆ : ನನಗೆ ನನ್ನ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ ಎಂದ ಪಾಲಕರು.

ಇಂದು ಬೆಳಗ್ಗೆ ಮೀನುಗಾರುಕೆಗೆ ಹೊನ್ನಾವರದ ಕಾಸರಕೋಡು ಭಾಗದಿಂದ ತೆರಳಿದ್ದ ದೋಣಿ ಹೊನ್ನಾವರದ ಇಕೋ ಬೀಚ್ ಬಳಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ. ಈವೇಳೆ ಮೂರು ಜನ ಈಜಿ ದಡದ ಭಾಗಕ್ಕೆ ಬಂದಿದ್ದು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಉದಯ್ ದಾಮೋದರ್ ತಾಂಡೇಲ್ ಕಾಣೆಯಾದ ಮೀನುಗಾರ ಎನ್ನಲಾಗಿದೆ. ನಾಡದೋಣಿಯಲ್ಲಿ ಇದ್ದ ವಿಜಯ್ ಕ್ರಿಸ್ತಾದಾಸ್ ಫರ್ನಾಂಡಿಸ್, ಶಂಕರ್ ತಾಂಡೇಲ್, ಕಾಮೇಶ್ವರ್ ತಾಂಡೇಲ್ ರಕ್ಷಣೆಗೊಳಗಾದವರಾಗಿದ್ದಾರೆ.

RELATED ARTICLES  ದಿನಾಂಕ 27/07/2019 ರ ದಿನ ಭವಿಷ್ಯ ಇಲ್ಲಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ,ಪೊಲೀಸ್ ಸಿಬ್ಬಂದಿ ಹಾಜುರಾಗಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು ನಾಪತ್ತೆಯಾದ ಮೀನುಗಾರರ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ಹೊನ್ನಾವರ ಠಾಣಾ ಪ್ಯಾಪ್ತಿಯಲ್ಲಿ ನಡೆದಿದೆ.