ಕುಮಟಾ : ಕುಮಟಾ ಪಟ್ಟಣದ ಹೊಸನಿಲ್ದಾಣ ಬಳಿ ಇರುವ ಎಸ್.ಬಿ.ಐ ಎಟಿಎಂ ನಲ್ಲಿ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಅವರಿಗೆ ಸಹಾಯ ಮಾಡುವ ನೆಪ ಮಾಡಿಕೊಂಡು ಎಟಿಎಮ್ ಕಾರ್ಡ್ ಅದಲು ಬದಲು ಮಾಡಿ ಹಣ ವಂಚಿಸಿರುವ ಆರೋಪಿ ಹಾಗೂ ಇಂತಹ ಕೆಲ ಪ್ರಕರಣಗಳ ಆರೋಪಿಯನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಕಿರಣ ಕುಮಾರ ಚಿ.ಕೆ.(29) ಬಂಧಿತ ಆರೋಪಿ. ಈತ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬೆಲಸಿಂದ,ಸದ್ಯ ಮೈಸೂರು ಜಿಲ್ಲೆಯ ಗೀರಿದರ್ಶಿನಿ ಲೇಔಟ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಾಯ ಮಾಡುವ ನೆಪದಲ್ಲಿ ಕಾರ್ಡಿನ ಪಾಸ್ ವರ್ಡ್ ಅರಿತು ಅವರಿಗೆ ಗೊತ್ತಾಗದಂತೆ ವ್ಯಕ್ತಿ ಕಾರ್ಡ್ ಅದಲು ಬದಲು ಮಾಡಿಕೊಂಡಿದ್ದ. ಬಳಿಕ ಆ ಎಟಿಎಮ್ ಬಳಸಿ 70,905 ರೂಪಾಯಿ ಹಣ ತೆಗೆದು ಎಗರಿಸಿದ್ದ. ಈ ಬಗ್ಗೆ 2021ರ ಫೆಬ್ರವರಿಯಲ್ಲಿ ಕುಮಟಾದಲ್ಲಿ ಪ್ರಕರಣ ದಾಖಲಾಗಿತ್ತು.
ವಯಕ್ತಿಯ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಈ ದೃಶ್ಯ ನೋಡಿ ಆರೋಪಿಯನ್ನು ಬೆಲೆಗೆ ಬೀಳಿಸಲು ಪೊಲೀಸರು ಹೊಂಚುಹಾಕಿದ್ದರು. ಇದೀಗ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖಾ ತಂಡವನ್ನು ರಚಿಸಿ ಸಿ.ಸಿ.ಕ್ಯಾಮರಾ ಸಹಾಯದಿಂದ ಆರೋಪಿಯನ್ನು ಮೈಸೂರಿನಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಅಲ್ಲದೆ, ಡೆಬಿಟ್ ಕಾರ್ಡನಿಂದ ಸ್ವೈಪ್ ಮಾಡಿ ತೆಗೆದ ಹಣ ಮತ್ತು ಹಣದಿಂದ ಖರೀದಿ ಮಾಡಿದ ಆಭರಣಗಳು ಹಾಗೂ ಇದೇ ರೀತಿ ವಂಚಿಸಲು ಇಟ್ಟುಕೊಂಡಿರುವ ಬೇರೆ ಬ್ಯಾಂಕ್ ಡೆಬಿಟ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಪ್ರಕಾಶ ನಾಯ್ಕ ಸಿ.ಪಿ.ಐ ಕುಮಟಾ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಆನಂದಮೂರ್ತಿ,ರವಿ ಗುಡ್ಡಿ,ಸುಧಾ ಅಘನಾಶಿನಿ, ಚಂದ್ರಮತಿ ಪಟಗಾರ ಇವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.