ಉತ್ತರಕನ್ನಡ:ಹೌದು ಇಂಥದ್ದೊಂದು ವಿಚಾರ ಈಗ  ಎಲ್ಲರೂ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಗೂ ಬ್ಲೂವ್ಹೇಲ್ ಭೂತ ಕಾಡುತ್ತಿದೆಯೆನೋ ಅನ್ನುವ ದಟ್ಟವಾದ ಅನುಮಾನಗಳು ಕಾಡತೊಡಗಿವೆ.

ಪಟ್ಟಣದ ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಕೈಯಲ್ಲೂ ಮೊಬೈಲ್ ಸಾಮಾನ್ಯವಾಗಿದ್ದು ಬ್ಲೂವ್ಹೇಲ್ ನ ಲಿಂಕ್ ಗಳು ಹರಿದಾಡುತ್ತಿರುವ ಬಗ್ಗೆ ಸುದ್ದಿಯಾಗಿದೆ. ಈ ಲಿಂಕ್ ಗಳನ್ನು ಈಗಾಗಲೇ ಕೇಂದ್ರ ಸರ್ಕಾರ ತಡೆಹಿಡಿಯುತ್ತಿದ್ದು, ಬೇರೆ ಹೆಸರಿನಲ್ಲಿ ಲಿಂಕ್ ಗಳನ್ನು ಹರಿಬಿಡಲಾಗುತ್ತಿದೆ.

RELATED ARTICLES  ಜಾತಿ ಧರ್ಮದ ರಾಜಕಾರಣ ಮಾಡಿದರೆ ಜನರ ಹೊಟ್ಟೆ ತುಂಬದು : ಶಿವರಾಮ ಹೆಬ್ಬಾರ್

ವಿದ್ಯಾರ್ಥಿಗಳು ಓನ್ಲೈನ್ ಗೇಮ್ ಗಳತ್ತ ಹೆಚ್ಚು ಆಕರ್ಷಣೆಗೊಳಗಾಗುತ್ತಿದ್ದು, ಪೋಷಕರು ಇದರ ಬಗ್ಗೆ ಹೆಚ್ಚಿನ ಗಮನವಹಿಸಿ ಮಕ್ಕಳ ಈ ರೀತಿಯ ಚಟುವಟಿಕೆಗಳನ್ನು ತಡೆಯಬೇಕಾಗಿದೆ.

RELATED ARTICLES  ಅಸಮರ್ಪಕ ಪರೀಕ್ಷಾ ಕ್ರಮ ವಿರೋಧಿಸಿ ಪದವಿ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಕೆ

ಒಟ್ಟಿನಲ್ಲಿ ಪ್ರಾಣಕ್ಕೆ ಅಪಾಯವಿರುವ ಬ್ಲೂವ್ಹೇಲ್ ಗೇಮ್​​ ಬಗ್ಗೆ ಪೋಷಕರು ಯುವಕರು ಕಾಳಜಿ ವಹಿಸಲಿ ಎಂಬುದು ನಮ್ಮ ಆಶಯ.