ಹೊನ್ನಾವರ: ಮೊಬೈಲ್ ಬಳಕೆಯಿಂದ ಮಕ್ಕಳು ಹಾದಿ ತಪ್ಪುತ್ತಾರೆ ಎನ್ನುವ ಕಾಲವೊಂದಿತ್ತು, ಆದರೆ ಈ ಕಾಲದಲ್ಲಿ ಸಂಪೂರ್ಣ ಶಿಕ್ಷಣ ವ್ಯವಸ್ಥೆಯೇ ದೂರಸಂಪರ್ಕ ಮಾಧ್ಯಮಗಳ ಮೂಲಕ ನಡೆಯುತ್ತಿದೆ ಎಂದರು ತಪ್ಪಾಗಲಾರದು. ಮೊಬೈಲ್ಗಳು ಪ್ರಾಣಹರಣಕ್ಕೆ ಕಾರಣವಾಗಿದೆ ಎನ್ನುವುದು ನೋವಿನ ಸಂಗತಿ.
ಮೊಬೈಲ್ ಬಳಸಬೇಡ ಎಂದು ಪಾಲಕರು ಬುದ್ದಿವಾದ ಹೇಳಿದಕ್ಕೆ ವಿದ್ಯಾರ್ಥಿನಿಯೊಬ್ಬಳು ಸಾವಿಗೆ ಶರಣಾದ ಘಟನೆ ಹೊನ್ನಾವರದ ಹಳದೀಪುರದಲ್ಲಿ ನಡೆದಿದೆ. ಕೋವಿಡ್ ಸಮಯದಲ್ಲಿ ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗದೆ ಮನೆಯಲ್ಲಿಯೇ ಇದ್ದು, ಮೊಬೈಲ್ ಗೀಳನ್ನು ಅಂಟಿಸಿಕೊoಡಿದ್ದಾರೆ. ಮೊಬೈಲ್ ಬಳಕೆ ಅತಿಯಾಗಿದ್ದು, ಮೊಬೈಲ್ ಸಿಗದಿದ್ದರೆ, ಸಿಟ್ಟಾಗುವುದು, ವಿಚಿತ್ರವಾಗಿ ವರ್ತಿಸುವುದು ಇತ್ತೀಚಿಗೆ ಸಾಮಾನ್ಯವಾಗಿದೆ.
ಹೊನ್ನಾವರ ತಾಲೂಕಿನ ಹಳದೀಪುರದ ಅರ್ಪೂವ ಹರಿಕಂತ್ರ ಸಾವಿಗೆ ಶರಣಾದ ವಿದ್ಯಾರ್ಥಿನಿ. ಪ್ರೌಢಶಾಲಾ ವಿದ್ಯಾರ್ಥಿನಿಯಾದ ಅಪೂರ್ವ ಇತ್ತಿಚೆಗೆ ಅತಿಯಾಗಿ ಮೊಬೈಲ್ ಬಳಸುತ್ತಿದ್ದಳು. ಮನೆಯವರ ಬುದ್ದಿಮಾತುಗಳನ್ನು ಈಕೆ ತಿರಸ್ಕರಿಸಿ ಮೊಬೈಲ್ ಗೀಳು ಅಂಟಿಸಿಕೊoಡಿದ್ದಳು. ಅಲ್ಲದೆ, ಮೊಬೈಲ್ ನೀಡದೆ ಇದ್ದರೆ ತಂಗಿ ಹಾಗೂ ತಮ್ಮನೊಂದಿಗೆ ಜಗಳವಾಡುತ್ತಿದ್ದಳು ಎನ್ನಲಾಗಿದೆ.
ಪಾಲಕರು ಮೊಬೈಲ್ ಕೊಡದೆ ಇದ್ದಾಗ, ಮನನೊಂದು, ಮನೆಯವರು ಕೆಲಸಕ್ಕೆ ಹೋಗಿದ್ದಾಗ ಬಾತ್‌ರೂಮ್‌ಗೆ ಹೋಗಿ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ. ಈ ಸಂಬoಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಮೊಬೈಲ್ಗಳ ತಪ್ಪಿಸುವತ್ತ ಪಾಲಕರು ಗಮನವಹಿಸಬೇಕು. ಜೊತೆಗೆ ಇಂದಿನ ಪರಿಸ್ಥಿತಿಯಲ್ಲಿ ಇವುಗಳನ್ನು ಎದುರಿಸುವುದು ಹೇಗೆ ಎನ್ನುವುದು ಪಾಲಕರಿಗೆ ದೊಡ್ಡ ಚಿಂತೆಯಾಗಿದೆ.