ಶುಭಾ ಗಿರಣಿಮನೆ
ಅಂತರ್ಜಾಲವು ವಿಶ್ವವಾಪಕವಾಗಿದ್ದು ಮಿಲಿಯನ್ ಗಟ್ಟಲೆ ಸಂಖ್ಯೆಯ ಸ್ಥಳಿಯ ಮತ್ತು ಅಂತರಾಷ್ಟ್ರೀಯ ನೆಟ್‍ವರ್ಕ್ ಹೊಂದಿದೆ. ಇದು ಕ್ರಿ.ಶ, 1970ರಲ್ಲಿ ಮೊದಲು ಯು. ಎಸ್.ಎ ನಲ್ಲಿ ರಚನೆಯಾದರೂ ಜನಸಾಮಾನ್ಯರಿಗೆ ತಲುಪಲು ಇಪ್ಪತ್ತು ವರ್ಷಗಳ ಕಾಲ ಹಿಡಿದಿದೆ. 1990ರಲ್ಲಿ ಅಂತರ್ಜಾಲದ ಪರಿಕಲ್ಪನೆ ಪ್ರಪಂಜಕ್ಕೆ ಪರಿಚಯದ ಪ್ರಾರಂಭ. ಆ ನಂತರದ ದಿನಗಳಲ್ಲಿ ಹಂತಹಂತವಾಗಿ ಬೆಳವಣಿಗೆ ಕಾಣುತ್ತ ಬಂದಿದೆ.ಗಿದು ಮೊದಲು ಬಳಕೆಗೆ ಬಂದಿದ್ದು ಸಂಸ್ಥೆಗಳೆನಿಸಿದ ಕಂಪನಿಗಳಿಗೆ.
ಕಂಪನಿ ಕಂಪನಿಗಳಲ್ಲಿ ಅಂತರ್ಜಾಲ ವ್ಯವಸ್ಥೆಯಿಂದ ಮಾಹಿತಿಗಳು ಶೀಘ್ರವಾಗಿ ರವಾನಿಸಬಹುದು. ಅಲ್ಲದೆ ಮಧ್ಯಸ್ತಿಕೆಯ ಅನಿವಾರ್ಯತೆ ಇರುವುದಿಲ್ಲ. ಅಲ್ಲದೆ ಸಂಸ್ಥೆಗಳಿಗೆ ಬೇಕಾಗುವ ಕಾಗದ ಪತ್ರಗಳಂತ ದತ್ತಾಂಶವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೇಗನೇ ಹಾಗೂ ಸುಲಭವಾಗಿ ತರಿಸಿಕೊಳ್ಳಬಹುದು. ಸಮಯದ ಅಭಾವ ಇರುವುದಿಲ್ಲ. ಹಾಗೂ ಕಳೆದು ಹೋಗುತ್ತದೆ ಎನ್ನುವುದು ಇರುವುದಿಲ್ಲ. ಇಂತಹ ಸಮಸ್ಯೆಗೆ ಪರಿಹಾರವಾಗಿ ಅಂತರ್ಜಾಲ ಕಾರ್ಯನಿರ್ವಹಿಸುತ್ತಿದೆ.
ಅಲ್ಲದೆ ಇದಕ್ಕೆ ಉತ್ತಮ ಭದ್ರೆತೆ ಇದೆ ಎನ್ನುವುದು ತಿಳಿದಿದೆ. ಬೇಗನೇ ಮುಗಿಸಲು ನೌಕರರ ಸಾಮಥ್ರ್ಯವನ್ನು ನಿಖರವಾಗಿ ತಿಳಿಸುತ್ತದೆ. ಅದಕ್ಕಿಂತ ಮಾಹಿತಿ ಸರಿಯಾಗಿದೆಯೇ ತಪ್ಪಾಗಿದೆಯೇ ಎನ್ನುವ ಭರವಸೆ ನೀಡುತ್ತದೆ. ಬಳಕೆದಾರನಿಗೆ ಒದಗಿಸಬೇಕಾದ ಸೇವೆಯನ್ನು ಉತ್ತಮವಾಗಿ ಬೇಗನೇ ನೀಡಬಹುದು ಎನ್ನುವ ವಿಶ್ವಾಸವಿದೆ ಈ ಎಲ್ಲಕಾರಣಗಳಿಂದ ಕಂಪನಿಗಳಲ್ಲಿ ಅಂತರ್ಜಾಲವು ಬೇಗನೇ ತನ್ನ ಪ್ರಚಾರ ಗಿಟ್ಟಿಸಿಕೊಂಡಿತು.
ಕಂಪನಿಗಳಿಗೆ ಸಂವಹನ ಕ್ರೀಯೆ ಸಮಗ್ರವಾಗಿರುವುದರಿಂದ ಅಂತರ್ಜಾಲದ ಬಳಕೆ ಅವಶ್ಯವಾಗಿ ಕಾಣುತ್ತಿದೆ. ಜಾಗತಿಕ ಮಟ್ಟದಲ್ಲಿ ತಲೆಯೆತ್ತಿರುವ ವಿವಿಧ ಸಂಸ್ಥೆಗಳು, ಕಂಪನಿಗಳ ವ್ಯವಹಾರದ ಫಲಿತಾಂಶವೂ ಕ್ಷಣಕ್ಷಣದ ಮಾಹಿತಿಯೂ ಲಭ್ಯತೆಯಿರುತ್ತದೆ. ಹಾಗಾಗಿಯೇ ಇನ್‍ಫೋಸಿಸ್‍ಗಳಂತ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಕುಳಿತಲ್ಲೆ ಮಾಹಿತಿ ಕಲೆಹಾಕುತ್ತವೆ. ದೇಶ ವಿದೇಶದಲ್ಲಿ ತಮ್ಮ ಬ್ರಾಂಚ್ ಸ್ಥಾಪಿಸಿದ್ದರೂ ದಿನದ ಸಂಪೂರ್ಣ ಮಾಹಿತಿ ವರದಿಯಾಗುತ್ತದೆ. ಯಾವ ದೇಶದಲ್ಲಿಯೇ ಇರಲಿ ಯಾವೂದೇ ಕೆಲಸದಲ್ಲಿಯೇ ಇರಲಿ ತಮ್ಮ ಕಂಪನಿಯ ವಹಿವಾಟನ್ನು ಸುಲಭವಾಗಿ ಕಂಡುಕೊಳ್ಳುತ್ತಾರೆ.
ಒಂದು ಕಂಪನಿ ತನ್ನಲ್ಲಿ ತಯಾರಿಸಿದ ಪ್ರೊಡೆಕ್ಟ್ ಗಳನ್ನು ಉದಾರಹಣೆಗೆ ಒಂದು ಸೋಪಿನ ಕಂಪನಿಯಾಗಿದ್ದಲ್ಲಿ ಆ ಸೋಪಿನ ಸಂಪೂರ್ಣ ಮಾಹಿತಿಯೊಂದಿಗೆ ನಿಖರವಾದ ಗುಣಮಟ್ಟ, ಅದರ ಭಾವಚಿತ್ರ ಮುಂತಾದವುಗಳನ್ನು ಮೇಲ್, ವಾಟ್ಸಾಪ್‍ಗಳಂತಹ ಮಾಧ್ಯಮದಲ್ಲಿ ಕಳುಹಿಸಿಕೊಡಲಾಗುತ್ತದೆ. ಇದನ್ನು ನೋಡಿದ ನಂತರ ವಿದೇಶಿ ಕಂಪನಿ ತಮಗೆ ಆ ವಸ್ತು ಬೇಕು ಅಥವಾ ಬೇಡ ಎಂದು ನಿರ್ಧರಿಸುತ್ತದೆ. ಬೇಕಾದಲ್ಲಿ ಮಾತ್ರ ತಮ್ಮ ನೌಕರನನ್ನು ಕಳುಹಿಸಿ ಮುಂದಿನ ಪ್ರಕ್ರಿಯೆಗೆ ಚಾಲ್ತಿ ನೀಡುತ್ತಾರೆ. ಒಬ್ಬ ಮೆಕಾನಿಕಲ್ ಇಂಜಿನಿಯರ್ ಮನೆಯಲ್ಲಿಯೇ ಕುಳಿತು ಒಂದು ಇಂಜೀನ್ ಬಗ್ಗೆ ಸ್ಕೆಚ್ ಹಾಕುತ್ತಾನೆ. ಅದನ್ನು ಒಂದು ಕಂಪನಿಗೆ ಮೇಲ್ ಮಾಡುವುದರ ಮೂಲಕ ಕಳುಹಿಸುತ್ತಾನೆ. ಆ ಕಂಪನಿ ತಮಗೆ ಸರಿ ಹೊಮದುವ ಡಿಸೈನ್ ಆಗಿದ್ದಲ್ಲಿ ತಿರುಗಿ ಆ ಇಂಜಿನಿಯರ್ ನ ಅಕೊಂಟ್‍ಗೆ ಹಣ ಹಾಕುವುದಾಗಿ ತಿಳಿಸುತ್ತದೆ. ಆ ಮೂಲಕ ಆ ಇಂಜಿನಿಯರ್ ತಿಂಗಳಿಗೆ ಕುಳಿತಲ್ಲಿ ಐವತ್ತು ಅರವತ್ತು ಸಾವಿರ ದುಡಿಯುತ್ತಾನೆ. ಒಬ್ಬ ಚಾರ್ಟಡ್ ಅಕೊಂಟರ್ ಕೂಡ ತನ್ನದೇ ಒಂದು ಕೊಠಡಿಯಲ್ಲಿ ಅಂತರ್ಜಾಲದ ಮೂಲಕ ಕೆಲಸ ಮಾಡಿ ತನ್ನ ಅನ್ನವನ್ನು ತಾನೇ ಸಂಪಾದಿಸುತ್ತಾನೆ. ತನ್ನ ಬುದ್ದಿ ಮತ್ತೆಯನ್ನು ಉಪಯೋಗಿಸಿ ಸ್ವತಂತ್ರವಾಗಿ ದುಡಿಮೆಯನ್ನು ಮಾಡುವುದು ಕಾಣುತ್ತೇವೆ.
ಅಂದರೆ ಇಲ್ಲಿ ಉನ್ನತವಾಗಿ ನಡೆಸಲಾಗುವ ಕಂಪನಿಯ ವ್ಯವಹಾರಗಳನ್ನು ಸರಾಗವಾಗಿ ಅಂತರ್ಜಾಲದ ಮೂಲಕ ವ್ಯವಹಾರ ನಡೆಸಲಾಗುತ್ತದೆ. ಖಾಸಗಿ ಕಂಪನಿಗಳಲ್ಲಿಯಾಗಲಿ, ಸರಕಾರಿ ಕಂಪನಿಗಳಲ್ಲಿಯಾಗಲಿ ನೌಕರನ ಅವಶ್ಯಕಥೆಯನ್ನು ಕಮ್ಮಿಮಾಡುತ್ತದೆ. ಬೇಗ ಬೇಗ ಕೆಲಸವಾಗುವುದರಿಂದ ಸಮಯದ ಅಭಾವ ಕಡಿಮೆಯಾಗುವುದರ ಜೊತೆಗೆ ಹೊಸ ಯೋಜನೆಗೆ ಕಾಲಾವಕಾಶ ಸಿಗುತ್ತದೆ. ಹಾಗಾಗಿ ಈಗ ಎಲ್ಲ ಕಂಪನಿಗಳು ಅಂತರ್ಜಾಲದ ನೆಟ್ವರ್ಕ್ ಸಂಪರ್ಕ ಹೊಂದಿದೆ.
ರಾಷ್ಟ್ರೀಯ ಅಂತರಾಷ್ಟ್ರೀಯ ಕಂಪನಿ ವಹಿವಾಟುಗಳು ಅಂತರ್ಜಾಲದ ಮೂಲಕ ಆದರೂ ಕೂಡ ಯಾವೂದೇ ಲೋಪಗಳು ಕಂಡು ಬರುವುದಿಲ್ಲ ಎನ್ನುವುದಿಲ್ಲ. ಇಲ್ಲಿ ತ್ರಂತ್ರಜ್ಞಾನದಲ್ಲಿಯ ಕೊರತೆ, ಮೇಲ್, ವಾಟ್ಸಾಪ್‍ಗಳಂತಹುದರಲ್ಲಿ ಕಳಿಸುವಾಗ ನೆಟ್ವರ್ಕ್ ತೊಂದರೆ, ನೌಕರನ ಕಣ್ಣಳತೆಯನ್ನು ತಪ್ಪಿ ಆಗುವ ದೋಷಗಳು ಹೀಗೆ ಹಲವಾರು ತೊಡಕು ಇದ್ದೆ ಇರುತ್ತದೆ. ಆದರೂ ತೊಂದರೆಗಿಂತ ಲಾಭ ಸುಲಭವಾದ ಅಂತರ್ಜಾಲದ ಬಳಕೆ ಉತ್ತಮವಾಗಿಯೇ ನಡೆಯುತ್ತಿದೆ.
ಮೊನ್ನೆ ನಮ್ಮ ಹತ್ತಿರದವರೊಬ್ಬರು ತಮ್ಮ ಮಾವನ ಮನೆಯಲ್ಲಿ ಮದುವೆ ಸಮಾರಂಭಕ್ಕೆಂದು ಒಂದು ವಾರÀ ಕಂಪನಿಗೆ ರಜೆ ಪತ್ರವನ್ನು ನೀಡಿ ಬಂದಿದ್ದರು. ಯಾವೂದೋ ಕಾರಣಕ್ಕೆ ಮಧ್ಯದಲ್ಲೆ ಮೀಟಿಂಗ್ ಒಂದನ್ನು ಕಂಪನಿ ನಿಗದಿಮಾಡಿತ್ತು. ಮದುವೆÉ ಮನೆಯನ್ನು ಬಿಟ್ಟು ಕಂಪನಿ ಕೆಲಸಕ್ಕೆಂದು ಬೆಂಗಳೂರು ಹೋಗುವುದು ಆಗುವುದಿಲ್ಲ ಎಂದು ಗೊತ್ತು. ಮದುವೆ ಮನೆಯ ಹಲವು ಜವಾಬ್ದಾರಿಗಳು ಇವರ ಹೆಗಲ ಮೇಲಿತ್ತು. ಆಗ ಏನು ಮಾಡುವುದು ಎಂದು ಯೋಚಿಸಿ ಒಂದು ನಿರ್ಧಾರಮಾಡಿ, ತಮ್ಮ ಕಂಪನಿಗೆ ಪೋನಾಯಿಸಿ ಮಾತನಾಡಿದರು. ಕಂಪನಿಯ ಮಾಲಿಕರ ಒಪ್ಪಿಗೆಯ ಮೇಲೆ ಬೆಳಗ್ಗೆ ಹನ್ನೊಂದು ಗಂಟೆಯಲ್ಲಿ ತಮ್ಮ ಲ್ಯಾಪ್‍ಟಾಪ್ ತೆಗೆದುಕೊಂಡು ಕುಳಿತರು. ಅಲ್ಲಿ ವಿಡಿಯೋ ಕಾಲ್ ಮೂಲಕ ಸಂಪರ್ಕ ಏರ್ಪಟ್ಟಿತು. ಆಫಿಸಿನಲ್ಲಿ ಮೀಟಿಂಗ್‍ಗಾಗಿ ಕುಳಿತ ಆಫೀಸ್‍ರು ಲಾಪ್‍ಟಾಪ್‍ನ ಪರದೆಯಮೇಲೆ ಕಾಣುತ್ತಿದ್ದರು. ಇವರು ಇಲ್ಲಿ ಕುಳಿತೇ ಮೀಟಿಂಗ್ ಅಟೆಂಡ್ ಮಾಡಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ಇವರ ಮಾತುಕತೆಗಳು ನಡೆದಿದ್ದವು. ಇಲ್ಲಿಂದಲೇ ಇವರು ಮಾಡಬೇಕಾದ ಕೆಲಸವನ್ನು ಪೂರೈಸಿದ್ದರು. ಹೀಗೆ ಅಂತರ್ಜಾಲದ ವ್ಯವಸ್ಥೆ ಅವರಿಗೆ ನೆರವಾಗಿತ್ತು.
ಹೀಗೆ ಕಂಪನಿಗಳಿಗೂ ನೌಕರನಿಗೂ ಹತ್ತಿರದ ಬಂಧುವಿನಂತೆ ನೆಟ್ವರ್ಕ್ ಕನೆಕ್ಷನ್ ಇದೆ. ಇದರಿಂದ ಲಾಭ ಅಧಿಕ ಎಂದು ಕಂಪನಿಗಳಿಗೆ ತಿಳಿದಿದೆ. ಹಲವು ಕಂಪನಿಯ ವ್ಯವಹಾರಗಳು ಅಂತರ್ಜಾಲದಲ್ಲಿ ತಮ್ಮದೇ ಅಧಿಪತ್ಯವನ್ನು ಸಾಧಿಸಿದೆ. ಏನೇ ಆಗಲಿ ಎಲ್ಲದಕ್ಕೂ ಅಂತರ್ಜಾಲವು ಬೇಕೇ ಬೇಕು ಎನ್ನುವುದು ಸಾಬೀತಾಗಿದೆ. ದೊಡ್ಡ ದೊಡ್ಡ ಹೆಸರು ಮಾಡಿದ ದೇಶ ವಿದೇಶಿಯ ಕಂಪನಿಗಳಿಗೆ ಒಂದು ಗಂಟೆ ನೆಟ್ವರ್ಕ್‍ನ ಸೌಲಭ್ಯ ಲಭ್ಯವಾಗಲಿಲ್ಲವೆಂದರೆ ಅಲ್ಲಿಯ ಕೆಲಸಗಳು ಅಲ್ಲೊಲ ಕಲ್ಲೋಲ ಆಗುವ ಪರೀಸ್ಥಿತಿ ಉಂಟಾಗಿದೆ. ಎಲ್ಲ ಕೆಲಸಗಳಿಗೂ, ಅಂತರ್ಜಾಲ ಎನ್ನುವ ಮಾಯೆ ಅಲ್ಲದ ಮಾಯೆಯು ಬೇಕು ಎನ್ನುವುದು ಸತ್ಯವಾಗಿದೆ ಅಲ್ಲವೆ?.