ಯಲ್ಲಾಪುರ: ತೋಟದಲ್ಲಿದ್ದ ದೇವರಿಗೆ ಕೈಮುಗಿಯಲು ಹೋದವೇಳೆ ತಾಲೂಕಿನ ಉಚಗೇರಿ ಗ್ರಾಮದ ಬಿಬ್ನಳ್ಳಿಯಲ್ಲಿ ವ್ಯಕ್ತಿಯೊಬ್ಬರು ಬಾವಿಯಲ್ಲಿ ಕಾಲುಜಾರಿ ಬಿದ್ದು ಮೃತರಾದ ದುರ್ಘಟನೆ ನೆಡೆದಿರುವ ಬಗ್ಗೆ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಲಕ್ಷ್ಮೀನಾರಾಯಣ ರಾಮಚಂದ್ರ ಹೆಗಡೆ ಎಂದು ಗುರುತಿಸಲಾಗಿದ್ದು ಇವರಿಗೆ 52 ವರ್ಷ ವಯಸ್ಸಾಗಿತ್ತೆಂದು ಗುರುತಿಸಲಾಗಿದೆ. ಇವರು ತಮ್ಮ ತೋಟದಲ್ಲಿರುವ ಚೌಡಿಮನೆಗೆ ಕೈಮುಗಿಯಲು ಹೋದವರು ಮನೆಗೆ ಬಾರದೇ ಇರುವಾಗ ಮನೆಯವರು ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ಬಾವಿಯಲ್ಲಿ ಬಿದ್ದು ಮೃತಪಟ್ಟ ಬಗ್ಗೆ ತಿಳಿದುಬಂದಿದೆ.

RELATED ARTICLES  ಧನ-ಜನಕ್ಕಿಂತ ಜ್ಞಾನಶಕ್ತಿ ಶ್ರೇಷ್ಠ: ರಾಘವೇಶ್ವರ ಶ್ರೀ

ತಂದೆ ಮನೆಗೆ ಬರದೆ ಇರುವುದನ್ನು ತಿಳಿದ ಮಗ ಗಣೇಶ ಹೆಗಡೆ ಸುತ್ತಲೂ ಹುಡುಕಿದರೂ ಕಾಣದೆ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರು ಸೇರಿ ಹುಡುಕಿದಾಗ ತೋಟದಲ್ಲಿರುವ ಬಾವಿಯಲ್ಲಿ ಮೃತ ವ್ಯಕ್ತಿಯ ಶವ ಕಂಡು ಬಂದಿದ್ದಾಗಿ ತಿಳಿದು ಬಂದಿದೆ.

RELATED ARTICLES  ಇಂಡಿಯಾ ಟುಡೇ ವಾಹಿನಿ ಕಾರ್ಯಕ್ರಮದಲ್ಲಿ ನಟಿಯಿಂದ ಸ್ಫೋಟಕ ಮಾಹಿತಿ ಬಹಿರಂಗ, ಮಂಚಕ್ಕೆ ಕರೆದಿದ್ದ ಐದು ನಿರ್ಮಾಪಕರು

ಈತನು ಕಾಲು ಜಾರಿ ಬಿದ್ದಿರಬಹುದೆಂದು ಊಹಿಸಲಾಗಿದೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ತನಿಖೆಯ ನಂತರ ಪೂರ್ಣ ಮಾಹಿತಿ ತಿಳಿಯಬೇಕಿದೆ.