ಹೊನ್ನಾವರ : ಶಿವಲೀಲಾ ಕಲಾ ಪ್ರತಿಷ್ಠಾನ ಸಂಸ್ಥೆ (ರಿ.) ಕಡತೋಕಾ ಇವರ ಆಶ್ರಯದಲ್ಲಿ ದಿನಾಂಕ 25 ಸೆಪ್ಟೆಂಬರ್ 2021 ಶನಿವಾರ ಸಾಯಂಕಾಲ 3-00 ರಿಂದ ಶ್ರೀ ಸ್ವಯಂಭೂ ದೇವಾಲಯ ಕಡತೋಕಾದ ಆವಾರದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಮಳೆಗಾಲದ ಬಹು ಅಪರೂಪದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಕಲಾಸಕ್ತರು ಬಂದು ಸಹಕರಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ “ಮೋಕ್ಷ ಸಂಗ್ರಾಮ” ಎಂಬ ಯಕ್ಷಗಾನ ತಾಳಮದ್ದಳೆ ಆಖ್ಯಾನ ನಡೆಯಲಿದೆ. ಆ ದಿನದ ಕಾರ್ಯಕ್ರಮವನ್ನು ಶ್ರೀ ಶಿವಾನಂದ ಹೆಗಡೆ, ಕಡತೋಕಾ (ನಿರ್ದೇಶಕರು ಕೆ.ಡಿ.ಸಿ.ಸಿ, ಬ್ಯಾಂಕ್, ಸಿರ್ಸಿ ಅಧ್ಯಕ್ಷರು ವಿ.ಎಸ್.ಎಸ್, ಸಂಘ, ಕಡತೋಕಾ) ಇವರು ಉದ್ಘಾಟಿಸಲಿದ್ದಾರೆ.
ಮೋಕ್ಷ ಸಂಗ್ರಾಮ ತಾಳಮದ್ದಳೆಯಲ್ಲಿ ಭಾಗವಹಿಸುವ ಕಲಾವಿದರು.
ಹಿಮ್ಮೇಳದಲ್ಲಿ : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ.
ಶ್ರೀ ರಾಮಕೃಷ್ಣ ಹೆಗಡೆ, ಹಿಲ್ಲೂರ.
ಮದ್ದಳೆ : ಶ್ರೀ ಸುನೀಲ ಭಂಡಾರಿ, ಕಡತೋಕಾ.
ಚಂಡೆ : ಶ್ರೀ ರಮೇಶ ಭಂಡಾರಿ, ಕಡತೋಕಾ,
ಶ್ರೀ ಮಂಜುನಾಥ ಭಂಡಾರಿ, ಕಡತೋಕಾ.
ಮುಮ್ಮೇಳದಲ್ಲಿ : ಶ್ರೀ ಜಬ್ಬಾರ ಸಮೋ ಸಂಪಾಜೆ.
ಶ್ರೀ ವಾಸುದೇವ ರಂಗ ಭಟ್ಟ,
ಶ್ರೀ ಪ್ರದೀಪ ಸಾಮಗ.
ಶ್ರೀ ಆನಂದ ಭಟ್ಟ, ಕೆಕ್ಕಾರ.
ಕೋವಿಡ್ ನಿಯಮಗಳ ಪಾಲನೆ ಕಡ್ಡಾಯವಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದರೂ ಸಹ ಸೀಮಿತ ಆಸನ ವ್ಯವಸ್ಥೆ ಇರುವುದರಿಂದ ನಿಮ್ಮ ಆಸನಗಳನ್ನು ಮೊದಲೇ ಕಾಯ್ದಿರಿಸಿಕೊಳ್ಳಲು ಸಂಘಟಕರು ವಿನಂತಿಸಿದ್ದು, ಪ್ರವೇಶ ಪತ್ರಕ್ಕಾಗಿ ಸೂರ್ಯನಾರಾಯಣ ಹೆಗಡೆ 8970055722 ಸುನೀಲ ಭಂಡಾರಿ 9481173933 ಇವರನ್ನು ಸಂಪರ್ಕಿಸಲು ಕೋರಿದ್ದಾರೆ.