ಕಾರವಾರ: ಕೈಗಾ ಸಿಬ್ಬಂಧಿಯೋರ್ವರ ಮಗ ಕಾರು ಚಲಾಯಿಸುವ ವೇಳೆ ಮಾಡಿದ ಅವಾಂತರದಿಂದಾಗಿ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದುವಾಡಾದ ಶ್ರೀ ದುರ್ಗಾದೇವಿ ದೇವಸ್ಥಾನದ ಬಳಿ ಬ್ರೇಕ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿದ ಪರಿಣಾಮದಿಂದ ಇತ್ತಿಚೆಗೆ ಖರೀದಿಸಿದ ಹೊಸ ಕಾರೊಂದು ಕೆರೆಗೆ ಬಿದ್ದು ಸಂಪೂರ್ಣ ಮುಳುಗಡೆಯಾದ ಘಟನೆ ವರದಿಯಾಗಿದೆ.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತೇ? 05/05/2019 ರ ರಾಶಿಫಲ

ನಗರದ ಕೈಗಾ ಸಿಬ್ಬಂದಿಯೋರ್ವರು ಇತ್ತೀಚೆಗೆ ಹೊಸದಾಗಿ ಕಾರು ಖರೀದಿಸಿ ತಂದಿದ್ದರು. ಅವರ ಮಗ ಇತ್ತಿಚೆಗೆ ಕಾರು ಚಲಾಯಿಸುವುದನ್ನು ಕಲಿತಿದ್ದ. ಹೀಗೆ ಕಾರು ಚಲಾಯಿಸುತ್ತಿರುವಾಗ ಗೊಂದಲ ಉಂಟಾಗಿದ್ದು, ಕೆರೆಯ ಬಳಿ ಬಂದಾಗ, ಬ್ರೇಕ್ ಒತ್ತುವ ಬದಲು ಚಾಲಕ ಎಕ್ಸಿಲೇಟರ್ ಒತ್ತಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಕಾರು ಕೆರೆಗೆ ಉರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

RELATED ARTICLES  "ಇದು ಪ್ರಪಂಚದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ದೊಡ್ಡ ಐತಿಹಾಸಿಕ ಘಟನೆ" ಮೋದಿ

ಕಾರು ಕೆರೆಗೆ ಉರುಳಿದ ಪರಿಣಾಮ ಕಾರಿಗೆ ಹಾನಿಯಾಗಿದೆ. ಕಾರನ್ನು ಕ್ರೇನ್ ತಂದು ಮೇಲಕ್ಕೆತ್ತಲಾಗಿದ್ದು, ಈ ಸಂಬoಧ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸ ಕಾರು ಖರೀದಿಸಿ ಮಕ್ಕಳಿಗೆ ಡ್ರೈವ್ ಕೊಡುವ ಮೊದಲು ಪಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದು ಸಾರ್ವಜನಿಕ ವಲಯದ ಮಾತಾಗಿದೆ.