ಕುಮಟಾ : ಮೋಸ ಹೋಗುವವರು ಎಲ್ಲಿವರೆಗೂ ಇರುತ್ತಾರೋ ಅಲ್ಲಿಯವರೆಗೆ ಬೇರೆಬೇರೆ ರೀತಿಯಲ್ಲಿ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇಂತಹದೇ ಪ್ರಕರಣವೊಂದು ತಾಲೂಕಿನಲ್ಲಿ ವರದಿಯಾಗಿದೆ.

ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ಹಣ ಪಡೆದು ವ್ಯಕ್ತಿಗಳಿಬ್ಬರು ಮಹಿಳೆಗೆ ವಂಚಿಸಿದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಕಚೇರಿ ಮಾಹಿತಿ ನೀಡಿದೆ.

RELATED ARTICLES  "ದೇಶದ ಆರಕ್ಷಣ ವ್ಯವಸ್ಥೆಯ ಉನ್ನತೀಕರಣದ ಮರುಚಿಂತನಾತ್ಮಕ ಕಾರ್ಯಾಗಾರ"

ತಾಲೂಕಿನ ಗೋಕರ್ಣದ ರಥಬೀದಿ ನಿವಾಸಿ ನರ್ಮದಾ ಮಹೇಶ ಅಡಿ ಎಂಬ ಮಹಿಳೆಗೆ ಆರೋಗ್ಯ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅಟೆಂಡರ್‌, ಎಸ್‌ಡಿಎ, ಡೆವಲಪ್ಟೆಂಟ್ ಹುದ್ದೆಗಳ ನೌಕರಿ ಕೊಡಿಸುತ್ತೇನೆ ಎಂದು ಹೇಳಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸುಮಾರು 31 ಲಕ್ಷ ರೂ. ಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ನೌಕರಿ ಕೊಡಿಸದೇ ಮತ್ತು ಆ ಹಣವನ್ನು ವಾಪಸ್ಸು ಮಾಡಿಲ್ಲ.

RELATED ARTICLES  ಶ್ರೀ ನಾರಾಯಣಗುರುಗಳಿಗೆ ಗೌರವ ಕಾರ್ಯಕ್ರಮ ನಾಳೆ.

ಘಟನೆ ನಂತರ ಒಬ್ಬ ಆರೋಪಿತ ಇನ್ನೋರ್ವನಿಂದ ಹಣ ವಾಪಸ್ಸು ಕೊಡಿಸುವುದಾಗಿ 8ಲಕ್ಷ ಪಡೆದು ಯಾವುದೇ ಹಣ ಮರಳಿಸದೇ ವಂಚನೆ ಮಾಡಿದ್ದಾರೆ ಎಂದು ಕುಮಟಾ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಒಳಗಾದ ಮಹಿಳೆ ದೂರು ನೀಡಿದ್ದಾರೆ.