ಭಟ್ಕಳ : ವಿಶ್ವ ಪ್ರಸಿದ್ದ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹೋದರ ಸೋಮು ಬಾಯಿ ಮೋದಿ ಭೇಟಿ ನೀಡಿ, ಪೂಜಾಕೈಂಕರ್ಯಗಳಲ್ಲಿ ಪಾಲ್ಗೊಂಡರು ದೇವರ ಆಶೀರ್ವಾದ ಪಡೆದು ತೆರಳಿರುವ ಬಗ್ಗೆ ವರದಿಯಾಗಿದೆ.

ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಹೋದರರಾದ ಮಂಗಳವಾರ ಮಧ್ಯಾಹ್ನ 3 ಘಂಟೆಯ ವೇಳೆಗೆ ಮುರುಡೇಶ್ವರಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದುಕೊಂಡಿದ್ದಾರೆ. ನಂತರ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಶಾಲುಹೊದೆಸಿ ಅವರನ್ನು ಸನ್ಮಾನಿಸಿದ್ದಾರೆ ಎಂದು ವರದಿಯಾಗಿದೆ.

RELATED ARTICLES  ವೇದಿಕೆಯಲ್ಲಿನ ಆಶು ವೈಭವ ಯಕ್ಷಗಾನ ಕಲೆಯಲ್ಲಿ ಮಾತ್ರ ಕಾಣಸಿಗುತ್ತದೆ : ಡಾ ಜಿ.ಎಲ್ ಹೆಗಡೆ

ಮೋದಿಯಂತೆ ಸರಳ ವ್ಯಕ್ತಿತ್ವದರಾದ ಇವರು ಕೂಡ ಪ್ರವಾಸದ ವಿಷಯ ಯಾರಿಗೂ ತಿಳಿಸದೆ ಭೇಟಿ ನೀಡಿದ್ದಾರೆ. ಇವರ ಭೇಟಿಗೂ ಅರ್ಧ ಗಂಟೆ ಮೊದಲು ದೇವಸ್ಥಾನ ಆಡಳಿತ ಮಂಡಳಿಗೆ ಮೋದಿ ಸಹೋದರ ಭೇಟಿ ನೀಡುವ ವಿಷಯ ತಿಳಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭೇಟಿ ವಿಷಯ ಅರಿತ ಮುರುಡೇಶ್ವರ ಠಾಣೆ ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಭದ್ರತೆ ನೀಡಿದ್ದಾರೆ.

RELATED ARTICLES  ಬಡಗಣಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ