ಶಿರಸಿ : ಪ್ರಸಿದ್ಧ ಶಕ್ತಿ ಸ್ಥಳ ಶಿರಸಿಯ ಮಾರಿಕಾಂಬಾ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ. ಜಾತ್ರೆ ಎಂದೊಡನೆ ತಿನಿಸುಗಳ ಮಾರಾಟವೂ ಬರಪೂರಾಗಾಗಿ ಸಾಗಿದೆ. ಗೋಬಿ ಸ್ಟಾಲ್ ಗಳಿಗೆ ಜನತೆ ಒಂದೆಡೆ ಮುಗಿ ಬೀಳುತ್ತಿದ್ದರೆ. ಇನ್ನೊಂದೆಡೆ ಆರೋಗ್ಯ ಇಲಾಖೆ ಜನತೆಯ ಆರೋಗ್ಯದ ದೃಷ್ಟಿಯಿಂದ ಕಲಬೆರಕೆ ಹಾಗೂ ಬಣ್ಣಗಳ ಬಳಕೆ ಬಗ್ಗೆ ಕಟ್ಟೆಚ್ಚರ ವಹಿಸುತ್ತಿದೆ. ದಿನಾಂಕ 16/03/2022 ರಂದು ಮಾರಿಕಾಂಬಾ ಜಾತ್ರೆಯಲ್ಲು ಸುಮಾರು 15-20 ಹೊಟೆಲ್ ಹಾಗೂ ಗೋಬಿ ಮಂಚೂರಿ ಸ್ಟಾಲ್ ಗಳ ಮೇಲೆ‌ ದಾಳಿ ನಡೆಸಿದ ಅಧಿಕಾರಿಗಳು, ಕೃತಕ ಬಣ್ಣ ಬಳಕೆ ಹಾಗೂ ಟೇಸ್ಟಿಂಗ್ ಪೌಡರ್ ವಶಪಡಿಸಿಕೊಂಡಿದ್ದು, ಅಂಗಡಿಕಾರರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಅಂಗಡಿಕಾರರಿಗೆ ಸ್ವಚ್ಚತೆಯ ರಕ್ಷಣೆ ಬಗ್ಗೆ ಹಾಗೂ ಸುದ್ದಿ ಪತ್ರಿಕೆಗಳಲ್ಲಿ ತಿಂಡಿಯನ್ನು ಕಟ್ಟಿಕೊಡದಂತೆ ತಿಳಿಹೇಳಿದರು. ಅಡಿಗೆ ಗ್ಯಾಸ್ ಉಪಯೋಗದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಅರುಣ ವಿ. ಕಾಶಿಭಟ್ಟ ಹಾಜರಿದ್ದು ಸಮಗ್ರ ತಿಳುವಳಿಕೆ ನೀಡಿದರು. ಇವರ ಜೊತೆಯಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು, ತಹಶೀಲ್ದಾರ ರೂಪಾ ಜೋಗಳೇಕರ್, ಅಬಕಾರಿ ಅಧಿಕಾರಿ ಡಿ.ಎನ್ ಶಿರ್ಸಿಕರ್, ಹಾಗೂ ಇತರ ಪ್ರಮುಖರು ಹಾಜರಿದ್ದರು.

RELATED ARTICLES  50 ಸಾವಿರ ರೂ ಮೌಲ್ಯದ ಕಟ್ಟಿಗೆ ವಶ: ಒಬ್ಬ ಆರೋಪಿ ಬಂಧನ ; ಮೂವರು ಪರಾರಿ