ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಹತ್ವದ ಕಾರ್ಯಕ್ರಮವಾದ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಕಾರ್ಯಕ್ರಮವು ಭಾನುವಾರ ಮಾರ್ಚ 27 ರ ಸಂಜೆ 04 ಗಂಟೆಗೆ ಜರುಗಲಿದ್ದು.ಕುಮಟಾದ ಮೂರುಕಟ್ಟೆಯ ಬಳಿ ಇರುವ ಮಹಾಲಸಾ ಕಲಾ ಕ್ಷೇತ್ರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅಪರಾಹ್ನ ನಾಲ್ಕುಗಂಟೆಯಿಂದ ಜರುಗಲಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಇಂದನ ಇಲಾಖೆ ಹಾಗೂ ಕನ್ನಡ ಸಂಸ್ಕೃತಿಯ ಇಲಾಖೆಯ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಅವರು ಉದ್ಧಾಟಿಸಲಿದ್ದು ಗೌರವಪ್ರಶಸ್ತಿ ಪ್ರದಾನವನ್ನು ಮಾನ್ಯ ಸಮಾಜಕಲ್ಯಾಣ ಹಾಗೂ ಹಿಂದುಳಿದ ಕಲ್ಯಾಣ ಸಚಿವರು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ನೆರವೇರಿಸಿಕೊಡಲಿದ್ದಾರೆ.ಪುಸ್ರಕ ಬಹುಮಾನವನ್ನು ಮಾನ್ಯ ಕಾರ್ಮಿಕ ಕಲ್ಯಾಣ ಸಚಿವರಾದ ಶ್ರೀ ಶಿವರಾಮ ಹೆಬ್ಬಾರರವರು ನೀಡಲಿದ್ದು ಶಾಸಕ ಶ್ರೀ ದಿನಕರ ಶೆಟ್ಟಿಯವರು ಅಕಾಡೆಮಿಯ ಪುಸ್ತಕಗಳ ಪ್ರಕಟಣೆಗಳ ಬಿಡುಗಡೆ ಕಾರ್ಯಕ್ರಮವನ್ನು ನೆರೆವೇರಿಸಲಿದ್ದಾರೆ.ಎಂದು ಕಾರ್ಯಕ್ರಮದ ಸಂಚಾಲಕ ಸದಸ್ಯರಾದ ಚಿದಾನಂದ ಹರಿ ಭಂಡಾರಿ ತಿಳಿಸಿದ್ದಾರೆ.

RELATED ARTICLES  ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶ್ರಮದಾನದ ಮೂಲಕ ಗಾಂಧಿ ಜಯಂತಿ ಆಚರಣೆ


ಈವರ್ಷದ ಗೌರವ ಪ್ರಶಸ್ತಿಗಳಲ್ಲಿ ಜಿಲ್ಲೆಯ ನಾಗೇಶ್ ಅಣ್ವೇಕರ್ ಅವರು ಕೊಂಕಣಿ ಸಾಹಿತ್ಯಕ್ಷೇತ್ರಕ್ಕೆ ಪಡೆದಿದ್ದು ದಿನೇಶ ಪ್ರಭು ಕಲ್ಲೊಟ್ಟೆ ಕಾರ್ಕಳ ಇವರುಕ ಕಲಾ ವಿಭಾಗಕ್ಕೂ ಕೊಂಕಣಿ ಜಾನಪದ ಕ್ಷೇತ್ರದಲ್ಲಿ ಕುಂದಾಪುರದ ಮಾಧವ ಖಾರ್ವಿಯವರು ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

RELATED ARTICLES  ಚಂದಾವರ ಹನುಮ ಮಂದಿರದ ಮೃತ್ತಿಕೆ ಸಂಗ್ರಹಿಸಿದ ಯುವಾ ಬ್ರಿಗೇಡ್ ತಂಡ.
IMG 20220320 WA0000


ಪುಸ್ತಕ ಬಹುಮಾನಗಳಲ್ಲಿ ಕೊಂಕಣಿ ಕವನ ಲಾಹಾಚೆಂಗೀತ ಬರೆದ ಪಾ| ಜೋವಿನ್ ವಿಶ್ವಾಸ್ ಕೊಂಕಣಿ ಸಣ್ಣಕತೆಯಾದ ಲವ್ ಲೆಟರ್ ವಾಜ್ಜಿತಾಲೊ ಮಾಂತರೊ ಬರೆದ ಹಿರಿಯ ಸಾಹಿತಿ ಗೋಪಾಲಕೃಷ್ಣ ಪೈ ಹಾಗೂ ಕೊಂಕಣಿ ಲೇಖನವಾದ ರೂಪಾಂ ಆನಿ ರೂಪಕಾಂ ಬರೆದ ಎಚ್ ಎಮ್ ಪೆರ್ನಾಲ್ ಇವರುಗಳಿಗೆ ಸಮ್ಮಾನ ಸಲ್ಲಲಿದ್ದು ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರ,ಶಾಸಕರು, ವಿಧಾನಪರಿಷತ್ ಸದಸ್ಯ ವರಿಷ್ಟ ಅಧಿಕಾರಿ ವರ್ಗದವರು ಪಾಲ್ಗೊಳ್ಳುವರು ಎಂದು ಕಾರ್ಯಕ್ರಮದ ಸಂಚಾಲಕ ಸದಸ್ಯರಾದ ಚಿದಾನಂದ ಭಂಡಾರಿ ಇವರು ಮಾಧ್ಯಮಕ್ಕೆ ತಿಳಿಸಿದ್ದಾರೆ.