ಇದೊಂದು ಪ್ರಶ್ನೆ ಹಾಕಿದರೆ ಸಾಕು ಸಾಗರ ಎಂ ಎಲ್ ಎ ಹಾಲಪ್ಪ ರಾಜಕೀಯ ಲೆಕ್ಕಾಚಾರ ಪಕ್ಕಾ ಸಿಗುತ್ತದೆ ; ಇದು ಬ್ರಾಹ್ಮಣರ ಒಡೆದು ಆಳುವ ತಂತ್ರವೇ ಹೊರತೂ ಇನ್ನೇನು ಅಲ್ಲಯೆಂಬುದು ಸಾಗರದ ಬ್ರಾಹ್ಮಣ ಸಮುದಾಯದ ಆರೋಪ.
ಸೋಷಿಯಲ್ ಮೀಡಿಯಾ ಪ್ರಭಾವದಿಂದ ಹರಿದು ಹಂಚಿ ಹೋಗಿದ್ದ ಸಾಗರ ಬ್ರಾಹ್ಮಣರ ಧ್ರುವೀಕರಣವಾಗುತ್ತಿದೆ , ಬ್ರಾಹ್ಮಣ ಅನ್ನುವ ಏಕೈಕ ಕಾರಣಕ್ಕೆ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯದ ಪ್ರಭಾವ ಬ್ರಾಹ್ಮಣರಿಗೆ ಎಚ್ಚರಿಕೆ ಮೂಡುತ್ತಿದೆ, ಇದರಿಂದ ಸಾಗರದಲ್ಲಿ ಎರಡನೇ ಪ್ರಭಾವಿ ಸಮಾಜ ಒಂದಾಗುತ್ತಿರುವುದು ಹಾಲಪ್ಪರಿಗೆ ನುಂಗಲಾರದ ತುತ್ತಾಗಿದೆ, ಇದರಿಂದ ಎಲ್ಲಿ ಬ್ರಾಹ್ಮಣ ನಾಯಕತ್ವ ಮಾಡಿರುವ ಸಂಚೇ ಎಲ್ ಬಿ ಕಾಲೇಜಿನಲ್ಲಿ ಶ್ರೀಪಾದ ಹೆಗಡೆ ನಿಸರಾಣಿಯವರ ಮೇಲೆ ಹಲ್ಲೆಯಾಗಿದೆಯೆಂದು ಬ್ರಾಹ್ಮಣ ಸಮುದಾಯ ಆರೋಪಿಸುತ್ತದೆ.
ಶಿಮುಲ್‌ನಂತಹ ಪ್ರತಿಷ್ಟಿತ ಸಂಸ್ಥೆಯಲ್ಲಿ ಅಧ್ಯಕ್ಷ ಸ್ಥಾನ ಹಿಡಿದಿರಿವ ಹಾಗೂ ಬಂಗಾರಪ್ಪರವರ ಗರಡಿಯಲ್ಲೇ ಪಳಗಿರುವ ಶ್ರೀಪಾದ್ ಹೆಗಡೆಯವರ ಬಗ್ಗೆ ಹಾಲಪ್ಪಗೆ ಸಮರ್ಪಕವಾಗಿಯೇ ಗೊತ್ತು, ಅದೇ ಕಾರಣದಿಂದ ಎಂ ಡಿ ಎಫ್ ಅಧ್ಯಕ್ಷಗಿರಿ ಏರಿದರೆ ಮುಂದಿನ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ಧಿ ಆಗುವುದು ಖಚಿತವೆಂದು, ಉದ್ದೀಶ್ಯ ಪೂರ್ವಕ ತಮ್ಮ ಬಳಗದೊಂದಿಗೆ ಅವಶ್ಯಕತೆ ಇಲ್ಲದಿದ್ದರೂ ಹಾಜರಾಗಿದ್ದಾರೆ ಹಾಗೂ ಮೂಲದ ಪ್ರಕಾರ ರೌಡಿಸಂ ಹಿನ್ನಲೆ ಇರುವವರ ಬೆಂಬಲಿಗ ಬಳಗಕ್ಕೆ ಕಡ್ಡಾಯವಾಗಿ ಹಾಜರಿರಲು ಸೂಚಿಸಿದ್ದರೆಂದ ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಎಂಬ ಮಾತುಗಳೂ ಸ್ಥಳೀಯರಿಂದ ತಿಳಿದುಬಂದಿದೆ.
ಎಂಡಿಎಫ್ ಅಧ್ಯಕ್ಷಗಾದಿಗಾಗಿ ಯು ಎಚ್ ರಾಮಣ್ಣನವರ ಮನೆಯಲ್ಲಿ ಅನೌಪಚಾರಿಕ ಸಭೆಯಾಗಿದ್ದು, ಹರನಾಥ್‌ರವರು ಸೇರಿಸಿಕೊಂಡು ಸಭೆಯಾಗಿತ್ತು, ಅದರಲ್ಲಿ ಬ್ರಾಹ್ಮಣ ಸಮುದಾಯದ ಹಿರಿಯ ಹರನಾಥ್‌ರಾವ್‌ರವರೂ ಶ್ರೀಪಾದ್ ನಿಸರಾಣಿರವರನ್ನು ಅಧ್ಯಕ್ಷರನ್ನಾಗಿ ಮಾಡಲು ಒಪ್ಪಿದ್ದರು, ಆದರೆ ಚುನಾವಣೆ ದಿನ ಏಕಾಏಕಿ ಅವರ ನಿರ್ಧಾರ ಬದಲಾಗಿದೆ.
ಏಕಾಏಕಿ ನಿರ್ಧಾರ ಬದಲಾಗಿದ್ದು ಏಕೆ..?
ಹಾಲಪ್ಪರ ಮಗ ಚೇತನ್ ಬೆಂಗಳೂರಿನಲ್ಲಿ ಹೊಂದಿರುವ ಐಡಿಯಾ ಇನಿಫಿನಿಟಿ ಕಂಪನಿಯಲ್ಲಿ , ಹರನಾಥ್ ರಾವ್ ಅವರ ಮಗ ಮಂಜುನಾಥ್ ಕೂಡಾ ಒಬ್ಬ ಡೈರೆಕ್ಟರ್, ,ಎರಡೂ ಕುಟುಂಬದ ಮಧ್ಯೆ ವ್ಯಾವಹಾರಿಕ ಸಂಬಂಧವಿದ್ದು, ಹಾಲಪ್ಪರ ಅಣತಿಯಂತೆ ನೆಡೆಯದಿದ್ದರೆ ವ್ಯಾವಹಾರಿಕ ಸಂಬಂಧಕ್ಕೆ ಧಕ್ಕೆ ಆಗುವ ಉದ್ದೇಶದಿಂದ ಹರನಾಥ್‌ರಾವ್‌ರವರು ಒತ್ತಡಕ್ಕೆ ಒಳಗಾಗಿ ಅಧ್ಯಕ್ಷಗಾದಿಗೆ ಒಪ್ಪಿದರು ಅನ್ನುವ ಮಾಹಿತಿ ಇದೆ.
ವಯೋವೃದ್ದ ಹಾಗೂ ವ್ಯಾವಹಾರಿಕ ಸಂಬಂಧದ ಲಗಾಮು ಇರುವ ಕಾರಣ, ಎಂ ಡಿ ಎಫ್‌ಯೆಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ತಮ್ಮ ಕೈಗೊಂಬೆ ಕೂರಿಸಲು ಹೋಗಿ ಹಾಲಪ್ಪ ಸಾಗರ ಬ್ರಾಹ್ಮಣ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಂದಿನ ಪ್ರಕ್ರಿಯೆಗಳ ಬಗ್ಗೆ ಕಾದು ನೋಡಬೇಕಿದೆ.
ಸ್ಥಳೀಯರಲ್ಲಿ ಉಂಟಾಗಿರುವ ಗೊಂದಲ ಹಾಗೂ ನಡೆದ ಘಟನಾವಳಿಗಳ ಬಗೆಗೆ ಸ್ಪಷ್ಟನೆ ನೀಡಬಹುದೆಂಬುದನ್ನೂ ಅಂದಾಜಿಸಲಾಗಿದೆ.
Source : ಸ್ಥಳೀಯ ಮಾಹಿತಿ ಆಧರಿಸಿದೆ.