ಪ್ರಸಕ್ತಸಾಲಿನ ಎಸ್ಎಸ್ ಎಲ್ ಸಿ ಪರೀಕ್ಷೆಯು ಯಶಸ್ವಿಯಾಗಿ ಸಂಪನ್ನಗೊಂಡಿದ್ದು.ಈ ಬಾರಿಯ ಪರೀಕ್ಷೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಅತ್ಯುತ್ತಮ ಫಲಿತಾಂಶ ದಾಖಲಾಗುವ ಸಾಧ್ಯತೆ ಇದೆ.ಇದರ ನಡುವೆಯೇ ತೃತೀಯ ಭಾಷೆ ಕನ್ನಡದಲ್ಲಿ ಒಂದು ಅಂಕದ ವಸ್ತುನಿಷ್ಠ ಪ್ರಶ್ನೆಯೊಂದಕ್ಕೆ ಎರಡು ಉತ್ತರಗಳು ಸರಿ ಇದ್ದರೂ ಇಲಾಖೆ ಹೊರಡಿಸಿರುವ ಕೀಲಿ ಉತ್ತರದಲ್ಲಿ ಒಂದೇ ಉತ್ತರ ನೀಡಿರುವುದು ನೂರಕ್ಕೆ ನೂರು ಅಂಕ ಗಳಿಕೆಯ ಉತ್ಸಾಹದಲ್ಲಿದ್ದ ವಿದ್ಯಾರ್ಥಿಗಳಿಗೆ ತೀವ್ರ ನಿರಾಶೆ ಉಂಟಾಗಿ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಮೊದಲೆರಡು ಪದಕ್ಕೆ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ ಎಂಬ ಪ್ರಶ್ನೆಯೊಂದಕ್ಕೆ ಪಠ್ಯ ಪುಸ್ತಕದಲ್ಲಿ ಎರಡು ಸರಿ ಉತ್ತರಗಳಿದ್ದರೂ ಕೀಲಿ ಉತ್ತರದಲ್ಲಿ ಕೇವಲ ಒಂದೇ ಉತ್ತರ ನೀಡಲಾಗಿದೆ.
ಮುಖ್ಯ ಪ್ರಶ್ನೆ II ರ ಉಪಪ್ರಶ್ನೆ 10 ರಲ್ಲಿ “ಡಿ ಎಸ್ ಪಿ : ಪೋಲಿಸ್ ಅಧಿಕಾರಿ :: ಕುಲಕರ್ಣಿ; ……..
ಪಠ್ಯಪುಸ್ತಕದಲ್ಲಿ ನಾಟಕದ ಈ ಪಾಠದ ಪಾತ್ರ ಪರಿಚಯದಲ್ಲಿ ಕುಲಕರ್ಣಿ ಅಂದರೆ ಭಾರತೀಯ ಅಧಿಕಾರಿ ಎಂದು ನೀಡಲಾಗಿದೆ ಆದರೆ ಮುಂದೆ ಪಾಠದಲ್ಲಿ ಪೌಜುದಾರನಾದ ಕುಲಕರ್ಣಿ ಎಂದು ಕರೆಯಲಾಗಿದೆ.ಇದು ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣ ಆಗಿದ್ದು ಕೆಲವರು ಪೌಜುದಾರ ಎಂದು ಉತ್ತರ ನೀಡಿದ್ದಾರೆ .ಆದರೆ ಕೀಲಿ ಉತ್ತರದಲ್ಲಿ ಭಾರತೀಯ ಅಧಿಕಾರಿ ಎಂಬ ಉತ್ತರ ಮಾತ್ರ ನೀಡಿದ್ದರಿಂದ ಪೌಜುದಾರ ಉತ್ತರ ಬರೆದ ವಿದ್ಯಾರ್ಥಿಗಳು ಒಂದು ಅಂಕ ಕಳೆದುಕೊಳ್ಳುವ ಆತಂಕದಲ್ಲಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಂಡು ಎರಡೂ ಉತ್ತರವನ್ನೂ ಪರಿಗಣಿಸಿ ಅಂಕ ನೀಡಬೇಕೆಂದು ಅಂಕಕಳೆದು ಕೊಳ್ಳುವ ಭೀತಿಗೊಳಗಾದ ವಿದ್ಯಾರ್ಥಿಗಳು ಇಲಾಖೆಯನ್ನು ವಿನಂತಿಸಿಕೊಂಡಿದ್ದಾರೆ.