ಕುಮಟಾ: ಪಟ್ಟಣದ ವಿವೇಕನಗರದ ರಸ್ತೆ ಮೇಲೆ ಮಲಗಿದ್ದ ಹೆಬ್ಬಾವೊಂದನ್ನು ಉರಗ ಪ್ರೇಮಿ ರವೀಂದ್ರ ಭಟ್ಟ ಅವರು ಡಿ.ಜಿ.ಹೆಗಡೆ ಅವರ ಸಹಾಯದಿಂದ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು ಎಂದು ತಿಳಿದುಬಂದಿದೆ.
ಪಟ್ಟಣದ ವಿವೇಕನಗರದ ರಸ್ತೆಯಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಕಂಡ ಡಿ.ಜಿ.ಹೆಗಡೆ ತಕ್ಷಣ ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿದರು. ಸಾರ್ವಜನಿಕರು ಬಂದಿದ್ದರಿಂದ ಭಯಗೊಂಡ ಹೆಬ್ಬಾವು ಜೀಡಿನಲ್ಲಿ ಅವಿತುಕೊಂಡಿತು.
ನಂತರ ರವೀಂದ್ರ ಭಟ್ಟರವರು ಪತ್ತೆಹಚ್ಚಿ ಸುಮಾರು 2 ಘಂಟೆಗಳ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಹಿಡಿದರು. ಅರಣ್ಯ ಇಲಾಖೆಗೆ ತಿಳಿಸಿದರು. ನಂತರ ಆಗಮಿಸಿದ ಅರಣ್ಯ ಇಲಾಖೆಯ ರಾಘವೇಂದ್ರ ಅವರು ಹೆಬ್ಬಾವನ್ನು ತೆಗೆದುಕೊಂಡು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು ಎನ್ನಲಾಗಿದೆ.
ಪಕ್ಕದಲ್ಲಿ ಅಘನಾಶಿನಿ ನದಿಯಿದ್ದರಿಂದ ಮಳೆ ನೀರಿನ ರಭಸಕ್ಕೆ ತೇಲಿಕೊಂಡು ಬರುತ್ತವೆ. ಮಳೆ ಕಡಿಮೆಯಾದ ನಂತರ ದಡಕ್ಕೆ ಸೇರಿಕೊಳ್ಳತ್ತವೆ. ಈ ಹೆಬ್ಬಾವು ಸುಮಾರು 10 ಅಡಿ ಉದ್ದವಿದ್ದು, 6 ರಿಂದ 8 ತಿಂಗಳ ಮರಿಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ತಿಳಿಸಿದರು ಎಂದು ವರದಿಯಾಗಿದೆ.