ನಿಜ ಗುರು ಭಕ್ತರನ್ನು ತೋರಿದ ಕೆಲಸಕ್ಕೆ ಅವರಿಗೆ ಭೇಷ್ ಎನ್ನಲೇ ಬೇಕು.

ಹೌದು ಇದು ನಿಜಕ್ಕೂ ನನ್ನ ಅನಿಸಿಕೆ. ಈ ಅನಿಸಿಕೆಯನ್ನು ನನ್ನ ಜೊತೆಗೆ ಯಾರು? ಯಾರು? ಬೆಂಬಲಿಸುತ್ತೀರೋ ನನಗೆ ತಿಳಿದಿಲ್ಲ. ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಸ್ವಾಮಿಗಳ ಮೇಲೆ ಹೇರಲಾದ ಸತ್ಯಕ್ಕೆ ದೂರವಾದ ಆರೋಪಗಳಿಗೆ ನಮ್ಮ ಧನಾತ್ಮಕ ಚಿಂತನೆಯ ರೂಪ ಇದು. ಈ ವಿಷಯ ನಿಮಗೂ ಗೊತ್ತು, ಮತ್ತು ನ್ಯಾಯಾಲಯವೂ ದೃಢೀಕರಿಸಿದ್ದುಂಟು. ಅದೇ ಅತ್ಯಾಚಾರವೆಂಬ ಸುಳ್ಳಿನ ಕಂತೆ.

ಹೌದು ಈಗ ಇದು ಹಳೇ ವಿಚಾರ ಹಾಗೂ ಹಳಸಿದ ವಿಚಾರ ಆದರೂ ಆಬಗೆಗೆ ಚಿಕ್ಕ ಚಿಂತನೆ ಇದೆ. ಚರಿತ್ರೆಯ ಪುಟಗಳಲ್ಲಿ ತನ್ನದೇ ಹೆಸರು ಹೊಂದಿರುವ ರಾಮ ಪಥದ ನಮ್ಮ ಮಠ ಮೂಲದಲ್ಲಿ ಸಮಾಜದ ಕೆಲವೇ ಕಾರ್ಯಕರ್ತರಿಂದ ನಡೆಯಲ್ಪಡುತ್ತಿತ್ತು. ಗುರು ಪರಂಪರೆಗೆ ಮುಕುಟ ಮಣಿಯ ರೂಪದಲ್ಲಿ ಪೀಠವೇರಿದ ಶ್ರೀ ಸಂಸ್ಥಾನದವರ ಆಲೋಚನೆ ಹಾಗೂ ಸಮಾಜಸ್ನೇಹಿ ಕಾರ್ಯಗಳಿಂದಾಗಿಗಿ ಈ ಕಾರ್ಯಕರ್ತರ ಸಮೂಹ ವಿಸ್ತರಿಸಲ್ಪಟ್ಟಿತು. ಗೋವು ಹಾಗೂ ರಾಮನ ಪ್ರೇಮವೇ ಶ್ರೀ ಮಠದ ಸ್ವತ್ತಾಗಿ ಬೆಳೆಯುತ್ತಿದ್ದ ಕಾಲದಲ್ಲಿ ಎಲ್ಲರೂ ಶ್ರೀ ಕಾರ್ಯಕರ್ತರಾಗಿ ಸೇರಿದರು. ಮಠ ಅದು ತಂಪೆರೆವ ಮರವಾಗಿ ಜಗತ್ತಿಗೆ ಕಾಣಲು ಪ್ರಾರಂಭವಾದಾಗ ಅಲ್ಲಿ ಎಲ್ಲರೂ ಆಶ್ರಯ ಪಡೆದರು. ಮಾತೃ ಸ್ವರೂಪಿ ಗುರು ಹಾಗೂ ಪ್ರೇಮ ಮಯೀ ಗುರು ಬಳಗದ ಜೊತೆಗೆ ಪೂರ್ವಾಪರ ಗೊತ್ತಿರುವ ಹಾಗೂ ಗೊತ್ತಿರದ ಅನೇಕರು ಸೇರಿಹೋದರು. ಇದನ್ನೇ ನಮ್ಮ ಹಳ್ಳಿ ಭಾಷೆಯಲ್ಲಿ ಭತ್ತ ಹಾಗೂ ಜೊಳ್ಳು ಎನ್ನಬಹುದೇನೋ? ಹೀಗೆ ಮಠದೊಳಗೆ ಸೇರಿದ ಹೊಟ್ಟು ಹಾಗೂ ಘನ ಕಾಳಿನ ಪರೀಕ್ಷೆಗೆ ಕಾಲವೇ ಸಿದ್ದವಾಗಿತ್ತು. ಅದಕ್ಕಾಗಿಯೇ ನಡೆಯಿತು ಮಾಯಾ ಸಮರ.

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ6)

ಮಾಯಾ ಸಮರದ ಹಿಂದಿರುವ ದೇವರೂ ಬುದ್ದಿವಂತ ಆದರೆ ಮುಂದಿರುವ ನಾಟಕಕಾರರು ನಾವೇ ಇದನ್ನು ನಡೆಸುತ್ತಿದ್ದೇವೆ ಎಂಬುದಾಗಿ ಭೃಮೆಯಲ್ಲಿದ್ದಾರೆ ಎಂಬುದು ಮಾತ್ರ ವಿಪರ್ಯಾಸ. ಒಂದು ವೇಳೆ ಈ ಸುಳ್ಳು ಆರೋಪಗಳು ಕೇಳಿ ಬರದಿದ್ದರೆ. ಭತ್ತ ಜೊಳ್ಳು ಒಂದೇ ಆಗಿ ಉಪಯೋಗಕ್ಕೇ ಬಾರದಂತೆ ಒಂದು ಮೂಲೆಯಲ್ಲಿ ಬಿದ್ದಿರುತ್ತಿತ್ತು. ಹಾಗಾಗ ಬಾರದು ಎಂಬುದಕ್ಕೇ ಸುಳ್ಳು ಆರೋಪದ ಆ ಬೀಸುಗಾಳಿ ಜೊಳ್ಳು ಹಾರಿಸಲು ಬಂದಿತ್ತು. ನಿಜವಾಗಿಯೂ ಜೊಳ್ಳು ಹಾರಿತ್ತು. ಗಟ್ಟಿ ಕಾಳುಗಳು ಮಾತ್ರ ಗುರುವಿನ ಜೊತೆಗಿತ್ತು. ಅದಕ್ಕೆ ಸಾಕ್ಷಯೇ ಈ ಎಲ್ಲಾ ಘಟನಾವಳಿಗಳು. ಆ ಬಿರುಗಾಳಿಗೆ ತೂರಿ ಹೋದ ಪೊಳ್ಳು ಜನರನ್ನು ಬಿಟ್ಟು ಈಗ ಘನ ಕಾಳುಗಳು ಇವೆ. ಗುರುವಿನ ಜೊತೆಗಿರುವ ಈ ಕಾಳುಗಳು ಎಂದಿಗೂ ಕೆಡದ ಭತ್ತದ ಕಾಳುಗಳು. ಗುರುವಿನ ಕರುಣೆಯಿಂದ ಎಂದಿಗೂ ಬತ್ತದ ಕಾಳುಗಳು ಇವು.ಇಂತಹ ಕಾಳುಗಳ ಸ್ಥಾನದಲ್ಲಿ ನಾವು ನೀವುಗಳಾಗಳಿದ್ದೇವೆ. ಗುರು ಭಕ್ತಿಯಲ್ಲಿ ಬೆಂದು ಜೀವನದ ಪಕ್ವಾನ್ನವಾಗುವ ಅವಕಾಷವೂ ನಮಗಿದೆ. ಗುರುವಿನೊಂದಿಗಿದ್ದು ಸಮಾಜದ ಜನರ ಜೀವನಾವಷ್ಯಕ ವಸ್ತುವಾಗುವ ಅವಕಾಶವೂ ನಮಗಿದೆ

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಬನ್ನಿ ಸ್ನೇಹಿತರೆ…. ಸುಳ್ಳು ಆರೋಪಗಳು ಜೊಳ್ಳುಗಳನ್ನು ಹಾರಿಸಿವೆ. ಗಟ್ಟಿ ಕಾಳುಗಳಾದ ನಾವುಗಳು ಗುರುತತ್ವದಲ್ಲಿ ಬೆಳಗೋಣ . ಭುವಿಯಲ್ಲಿ ಮತ್ತೆ ಬಿದ್ದರೆ ಬೆಳಗುವ ಬೆಳೆಯುವ ಶಕ್ತಿ ಇರುವುದು ಇಂತಹ ಘನ ಕಾಳುಗಳಿಗೇ ಅಲ್ಲವೇ. ಧನಾತ್ಮಕತೆಯ ಬಗ್ಗೆ ಚಿಂತಿಸೋಣ …. ಗುರು ಸೇವೆಗೆ ಕಂಕಣ ತೊಡೋಣ…ಗುರು ಚರಣದಲಿ ಶರಣಾಗೋಣ..
ಹರೇ ರಾಮ
ಇಂತಿ ಗುರುಚರಣ ಸೇವಕ
ಗಣೇಶ ಜೋಶಿ .ಸಂಕೊಳ್ಳಿ