ಕುಮಟಾ : ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶರಾಗಿರುವುದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ಹಾನಿ ಎಂದು ಅಧ್ಯಕ್ಷ ಸದಾನಂದ ದೇಶಭಂಡಾರಿ ಹೇಳಿದರು. ಗುರುವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಕನ್ನಡ ಸಂಘದಿಂದ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದ ಹಿನ್ನೆಲೆ ಗಾಯಕ ಸುಬ್ಬಣ್ಣನವರು ಕನ್ನಡಕ್ಕೊಂದು ಆಸ್ತಿಯಾಗಿದ್ದರು ಎಂದರು.

RELATED ARTICLES  ಹೊಸಾಡ ಗೋ ಶಾಲೆಯಲ್ಲಿ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ.

ಮಾಧ್ಯಮ ಸಲಹೆಗಾರ ಸಂತೋಷ ನಾಯ್ಕ ಮಾತನಾಡಿ, ಸುಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ ಎಂಬುದು ಅಸಹನೀಯ ನೋವಿನ ಸಂಗತಿ. ಶಿಶುನಾಳ ಶರೀಫ, ಕುವೆಂಪು ಹಾಗೂ ಹಲವಾರು ಕನ್ನಡ ಕವಿಗಳ ಹಾಡುಗಳನ್ನು ಮನೆ ಮಾತಾಗಿಸಿದ ಅವರು ಸುಗಮ ಸಂಗೀತದ ದೊರೆಯಾಗಿದ್ದರು. ಇನ್ನು ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. ಗತಿಸಿದ ಅವರ ಆತ್ಮಕ್ಕೆ ಸದ್ಗತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ದಯಾನಂದ ಭಂಡಾರಿ, ಉಪಾಧ್ಯಕ್ಷರಾದ ಬಾಬು ನಾಯ್ಕ, ಉದಯ ಭಟ್, ಖಜಾಂಚಿ ಶಿವಯ್ಯ ಹರಿಕಾಂತ, ಸದಸ್ಯರಾದ ಅನಿತಾ ಮಾಪಾರಿ, ನಾಗಪ್ಪ ಮುಕ್ರಿ ಇನ್ನಿತರರು ಇದ್ದರು.

RELATED ARTICLES  ಬಾವಿಗೆಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.