ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಹೊನ್ನಾವರ ತಾಲೂಕಿನ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗ ಮಂದಿರದಲ್ಲಿ ಮಾಸದ ಅಪೂರ್ವ ಪ್ರಸಂಗವಾದ ಆಟ ಕವಿ ದೇವಿ ದಾಸ ವಿರಚಿತ ಶ್ರೀ ಕೃಷ್ಣ ಸಂಧಾನ ಪೌರಾಣಿಕ ಯಕ್ಷಗಾನ ಪ್ರದರ್ಶನ ಸುಮಾರು ೩ ತಾಸುಗಳ ಕಾಲ ಮನೋಜ್ನವಾಗಿ ಮೂಡಿಬಂದಿತು.
ಯಕ್ಷಗಾನ ಪ್ರೇಮಿ ಕಲಾಪೋಷಕರಾದ ಮಂಗಳೂರಿನ ಶ್ರೀ ಪರೇಶ ನರೇಂದ್ರ ಇವರ ಪ್ರಾಯೋಜಕತ್ವದಲ್ಲಿ ನಡೆದ ಮಾಸದ ಆಟ ಶ್ರೀ ಕೃಷ್ಣ ಸಂಧಾನದಲ್ಲಿ ಮುಮ್ಮೇಳ ಪಾತ್ರದಲ್ಲಿ ಶ್ರೀ ಕೃಷ್ಣನಾಗಿ ಶ್ರೀ ಶಿವಾನಂದ ಹೆಗಡೆ, ಕೌರವನಾಗಿ ಶ್ರೀ ಕೆ.ಜಿ.ಮಂಜುನಾಥ,ಪುರಪ್ಪೆಮನೆ, ಧರ್ಮರಾಯನಾಗಿ ಶ್ರೀ ಶಿರಳಗಿ ತಿಮ್ಮಪ್ಪ ಹೆಗಡೆ, ಭೀಮನಾಗಿ ಶ್ರೀ ಈಶ್ವರ ಭಟ್ಟಅಂಸಳ್ಳಿ ದ್ರೌಪದಿಯಾಗಿ ಶ್ರೀ ಸದಾಶಿವ ಭಟ್ಟಯಲ್ಲಾಪುರ, ಹಾಸ್ಯ ಪಾತ್ರಧಾರಿಯಾಗಿ ಶ್ರೀ ನಾಗಪ್ಪ ಗೌಡ, ವಿದುರನಾಗಿ ಶ್ರೀ ವಿಘ್ನೇಶ್ವರ ಹಾವಗೋಡಿ,ಗೋಕರ್ಣ,ವಿವಿಧ ಪಾತ್ರಗಳಲ್ಲಿ ಶ್ರೀ ಕೆರೆಮನೆ ಶ್ರೀಧರ ಹೆಗಡೆ, ಶ್ರೀ ವಿನಾಯಕ ನಾಯ್ಕ, ಗುಂಡಿಬೈಲು, ಶ್ರೀ ಕ್ರಷ್ಣ ಮರಾಠಿ ಮುಂಡಾರ, ಶ್ರೀ ಮಹಾವೀರಇಂದ್ರಜೈನ್ ಹಾಗೂ ವೇಷ ಭೂಷಣ ಸಹಾಯಕರಾಗಿ ಶ್ರೀ ಉದಯ ಶೆಟ್ಟಿಕರ್ಕಿ ಮುಂತಾದವರು ಸಹಕರೀಸಿದರು.
ಭಾಗವತರಾಗಿ ಶ್ರೀ ಅನಂತ ಹೆಗಡೆ, ದಂತಳಿಗೆ ಮದ್ದಲೆ: ಶ್ರೀ ಮೂರುರು ನರಸಿಂಹ ಹೆಗಡೆ ಚಂಡೆ: ಶ್ರೀ ಮೂರುರು ಶ್ರೀರಾಮ ಹೆಗಡೆ ಹಿಮ್ಮೇಳದಲ್ಲಿ ಸಹಕರೀಸಿದರು.
ಯಕ್ಷಗಾನ ಅಭಿಮಾನಿಗಳಾದ ಶ್ರೀ ಎಂ ನಾಗಭೂಷಣ (ಹಿರಿಯ ಆದಾಯ ತೇರಿಗೆ ಅಧಿಕಾರಿಗಳು ಕೇರಳ) ಹಾಗೂ ಶ್ರೀ ಚಂದ್ರಮೋಹನ (ಲೆಕ್ಕಪರಿಶೋಧಕರು ಮಂಗಳೂರು) ಕಾರ್ಯಕ್ರಮದ ಕೊನೆಯಲ್ಲಿ ತ್ರಿವರ್ಣ ದ್ವಜವನ್ನು ಪ್ರದರ್ಶಿಸಲಾಯಿತು.