ಶಿರಸಿ:- ಜೀವ ಇರುವ ಶರೀರಕ್ಕೆ ಮರಣವಿದೆ. ಆದರೆ ಶರೀರದೊಳಗೆ ಇರುವ ಜೀವಾತ್ಮಕ್ಕೆ ಇಲ್ಲ ಎಂದು ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಯವರು ನುಡಿದರು. ಶ್ರೀಗಳು ೩೨ನೇ ಚಾತುರ್ಮಾಸ್ಯ ವೃತಾಚರಣೆ ವೇಳೆ ಗೋವಾ, ಹುಬ್ಬಳ್ಳಿ,ಧಾರವಾಡ,ಮುಂಬಯಿಸೀಮಾ ಭಜಕರು,ಶಿಷ್ಯರು ಸಲ್ಲಿಸಿದ ಸೇವೆಗಳನ್ನು ಸ್ವಿಕರಿಸಿ ಆಶೀವರ್ಚನ ನೀಡಿದರು.

ಭಗವದ್ಗೀತೆಯಲ್ಲಿ ಅಮೃತವೂ ಮೃತ್ಯವೂ ಭಗವಂತನದ್ದು ಎಂದಿದ್ದಾನೆ. ಅಮೃತ ತತ್ವವನ್ನು ಮತ್ತು ಮೃತ್ಯವನ್ನು ಭಗವಂತನೇ ನೀಡುತ್ತಾನೆ. ಎರಡೂ ಒಂದೇ ಅಂತರದಲ್ಲಿದೆ. ಶರೀರಕ್ಕೆ ಮರಣವಿದೆ ಅದಕ್ಕೇ ಭಯವಿದೆ. ಒಳಗಿನ ಪರಮಾತ್ಮನಿಗೆ ಅಭಯ ಎಂದ ಶ್ರೀಗಳು,ಪರಮಾತ್ಮನಿಗೆ ಮರಣವಿಲ್ಲ ಎಂದು ಹೇಳಿದರು. ಒಳಗಿರುವ ಪರಮಾತ್ಮ ಹಾಗೂ ಅವನ ಸ್ವರೂಪವೇ ಅಮೃತ. ಆದರೆ ನಮ್ಮ ಶರೀರ ಅದನ್ನು ಮುಚ್ಚಿಕೊಂಡಿದೆ. ದೇವರಲ್ಲಿ ಮನಸ್ಸನ್ನು ಕೇಂದ್ರಿಕರಿಸಿದವನಿಗೆ ರೋಗ,ಮುಪ್ಪು,ಮರಣದ ಭಯವಿರುವುದಿಲ್ಲ. ಪರಮಾತ್ಮನ ಅಭಯ ನಮ್ಮನ್ನು ಕಾಪಾಡುತ್ತದೆ ಎಂದು ಉದಾಹರಣೆ ಸಮೇತ ವಿವರಿಸಿದ ಶ್ರೀಗಳು ಶರೀರ ಹೊರಗಿನ ಸುಖ ಬಯಸುತ್ತದೆ. ಸುಖದ ಕಡೆ ನಮ್ಮ ಗಮನ ಜಾಸ್ತಿ. ಆದರೆ, ಒಳಗಿನ ಪರಮಾತ್ಮನಿಗೆ ಬಾಹ್ಯ ಸುಖವಿಲ್ಲ, ಸದಾ ಸಂತೃಪ್ತಿ, ಹಾಗೂ ಅವನ ಗಮನ ಈ ಶರೀರದ ಮೇಲೆ ಇರುತ್ತದೆ. ನಮಗಿಂತ ಹೆಚ್ಚು ಹಿಡಿತ ಒಳಗಿನ ಪರಮಾತ್ಮನಿಗೆ ಇರುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀಕಾಂತ ಹೆಗಡೆ ದಗ್ಗುಮನೆ,ಸುದರ್ಶನ ಹೆಮಾದ್ರಿ, ಅಶೋಕ್ ಭಟ್ ಹುಬ್ಬಳ್ಳಿ ಇತರರು ಇದ್ದರು.

RELATED ARTICLES  ವಿಪರೀತ ಕುಡಿತದ ಚಟಕ್ಕೆ ಬಲಿಯಾದ ವ್ಯಕ್ತಿ.